ಚಪ್ಪರಕಲ್ಲು : ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಬಿವೃದ್ದಿಯಲ್ಲಿ ಹಿಂದುಳಿದಿದೆ.ಶಾಸಕರ ಅನುಧಾನದಲ್ಲಿ 5 ಲಕ್ಷ ರೂ ನೀಡುವುದಾಗಿ ಶಾಸಕರಾದ ನಿಸರ್ಗ ನಾರಾ ಯಣಸ್ವಾಮಿ ಭರವಸೆ ನೀಡಿದರು.
ದೇವನಹಳ್ಳಿ ತಾಲ್ಲೂಕು ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೊಜೆ ನೆರವೇರಿಸಿದ ನಂತರ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನ ಸಮೀಪದಲ್ಲಿದ್ದು ಗ್ರಾಮ ಪಂಚಾಯಿತಿ ಅಬಿವೃದ್ದಿಗೆ ಒತ್ತುನೀಡಲಾಗುವುದು.
ಉದ್ಯೋಗ ಯೋಜನೆ ನರೇಗಾ ಯೋಜನೆ ಅಡಿ 16.25 ಲಕ್ಷರೂ ರಾಜೀವ್ ಗಾಂದಿ 14ನೇ ಹಣಕಾಸು 4.75 ಲಕ್ಷರೂ ಸರ್ಕಾರದಿಂದ 20 ಲಕ್ಷ ರೂ ಸೇರಿದಂತೆ ಸುಮಾರು 46 ಲಕ್ಷ ರೂ ವೆಚ್ಚದಲ್ಲಿ ಒಂದು ವರ್ಷದಲ್ಲಿ ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಸ್ವಂತ ಕಟ್ಟಡ ನಿರ್ಮಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ವಿಎಸ್ ಎಸ್ ಎನ್ ಅಧ್ಯಕ್ಷ ರಾಮಣ್ಣ ಮಾತನಾಡಿ ಪಂಚಾಯಿತಿ ಕಛೇರಿ ಬಹುದಿನಗಳ ಬೇಡಿಕೆಯಾಗಿತ್ತು.
ಊರಿನಲ್ಲಿ ಸುಸರ್ಜಿತ ಗ್ರಾಮ ಪಂಚಾಯಿತಿ ಕಛೇರಿ ತುರ್ತಾಗಿ ಆಗಬೇಕಿತ್ತು.ಆ ಸಮಯ ಈದಿನ ಕೂಡಿರುವುದು ಪ್ರಶಂಸನೀಯ.ಗುಣಮಟ್ಟದ ಹಾಗೂ ವರ್ಷದ ಕಾಲಮಿತಿಯಲ್ಲಿ ಕಟ್ಟಡ ಪೂರ್ಣಗೊಳಿಸಿ ಹಸ್ತಂತರಕ್ಕೆ ಗುತ್ತಿಗೆದಾರರು ಒತ್ತು ನೀಡಬೇಕಿದೆ.
ಬಾಡಿಗೆ ಕಟ್ಟಡದಲ್ಲಿ ಹೆಚ್ಚು ಕಾಲ ಉಳಿಯುವುದು ತಪ್ಪುತ್ತದೆ ಮತ್ತು ಪಂಚಾಯಿತಿ ಕೆಲಸ ಕಾರ್ಯಗಳಿಗೆ ವಯೋವೃದ್ದರು,ಅಂಗವಿಕಲರು ಬರಲು ಕಷ್ಟವಾಗಿತ್ತು. ಪಂಚಾಯಿತಿ ಕಟ್ಟಡ ಕಾಮಗಾರಿ ಜರೂರಾಗಿ ಪೂರ್ಣ ಗೊಳಿಸಿದರು ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಬೀರಪ್ಪ, ತಾ.ಪಂ.ಮಾಜಿ ಉಪಾದ್ಯಕ್ಷ ಪಟಾಲಪ್ಪ,ದೇವನಹಳ್ಳಿ ಪುರಸಬೆ ಸದಸ್ಯ ರವೀಂದ್ರ,ಕಸಪ ಅಧ್ಯಕ್ಷ ನಂಜೇಗೌಡ, ಗ್ರಾ.ಪಂ.ಅಧ್ಯಕ್ಷೆ ಗೌರಮ್ಮ,ಉಪಾಧ್ಯಕ್ಷೆ ಸಿ.ಕಾಂತಮುನಿ ರಾಜು ಮಾಜಿ ಉಪಾಧ್ಯಕ್ಷ ಶ್ರೀನಿವಾಸ್,ಸದಸ್ಯರಾದ ರಘು, ಬೈರೇಗೌಡ, ಕೃಷ್ಣಮ್ಮ,ಚಿಕ್ಕಮುನಿಶಾಮಪ್ಪ,ಮುನಿ ನಂಜಪ್ಪ,ಮುನಿರಾಜು,ಮೂರ್ತಿ,ಮೀನಾಕ್ಷಮ್ಮ,ಜಯಲಕ್ಷ್ಮಮ್ಮ,ಅಂಬಿಕಾ,ಗುತ್ತಿಗೆದಾರರಾದ ಯಲ್ಲಪ್ಪ ಸೇರಿದಂತೆ ಅನೇಕರಿದ್ದರು.
ಪೋಟೂ-2
ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಸುಮಾರು 46 ಲಕ್ಷ ರೂ ವೆಚ್ಚದ ಕಾಮಗಾರಿ ಯನ್ನು ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಗುದ್ದಲಿ ಪೊಜೆ ನೆರವೇಸಿದರು.
ಗುರುಮೂರ್ತಿ ಬೂದಿಗೆರೆ
8861100990