18533 ಮತದಾರರನ್ನು ಕೈಬಿಟ್ಟ ಆರೋಪ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ_ ಪಂಚಾಕ್ಷರಯ್ಯ.

18533 ಮತದಾರರನ್ನು ಕೈಬಿಟ್ಟ ಆರೋಪ, ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ_ ಪಂಚಾಕ್ಷರಯ್ಯ.

 

 

 

ತುಮಕೂರು_ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 18533 ಮತದಾರರನ್ನು ಮತಪಟ್ಟೆಯಿಂದ ಕೈ ಬಿಡಲಾಗಿದೆ ಇನ್ನು ಕೈಬಿಟ್ಟ ಮತದಾರರಿಗೆ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಸಮಾಜ ಸೇವಕ ಎಂ.ಬಿ ಪಂಚಾಕ್ಷರಯ್ಯನವರು ತುಮಕೂರಿನಲ್ಲಿ ತಿಳಿಸಿದ್ದಾರೆ.

 

 

 

 

ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಅವರು 2022ರ ಜನವರಿಯಲ್ಲಿ ಜಿಲ್ಲಾ ಚುನಾವಣಾ ಶಾಖೆ ಯಿಂದ ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು ಕರಡು ಮತದಾರರ ಪಟ್ಟಿಯಲ್ಲಿ 18533 ಮತದಾರರನ್ನು ಮತ ಪಟ್ಟಿಯಿಂದ ಕೈ ಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಮತದಾರರಿಗೆ ಯಾವುದೇ ಮಾಹಿತಿ ನೀಡಿಲ್ಲ 2018ರಲ್ಲಿ ಬೋಗಸ್ ಮತದಾರರ ವೇಳೆ ಕೊಟ್ಟ ಮಾಹಿತಿ ಅನ್ವಯ ಬೃಹತ್ ಪ್ರಮಾಣದಲ್ಲಿ ಮತದಾರರನ್ನು ಕೈಬಿಟ್ಟಿದ್ದು ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದರು.

 

 

 

 

 

 

ಇನ್ನು 2013 ರಿಂದ 2017ರ ವರೆಗೂ ಆರು ವರ್ಷದ ಅವಧಿಯಲ್ಲಿ 3865ಕ್ಕೂ ಹೆಚ್ಚು ಪುನರಾವರ್ತಿತ ಮತದಾರರನ್ನು ಕೈಬಿಟ್ಟಿದ್ದು 2018 ರಿಂದ 2022ರ ವೇಳೆಗೆ 18 ಸಾವಿರದ 533 ಮತದಾರರನ್ನು ಕೈ ಬಿಟ್ಟಿದ್ದಾರೆ ಇನ್ನು 2023ರ ಜನವರಿ ವೇಳೆಗೆ ಪುನಹ 10 ರಿಂದ 15 ಸಾವಿರಕ್ಕೂ ಹೆಚ್ಚು ಮತದಾರರು ಪುನಃ ಮತದಾರರ ಪಟ್ಟಿಯಿಂದ ಕೈಬಿಡುವ ಸಂಭವ ಇದೆ ಎಂದು ಆರೋಪಿಸಿದ್ದಾರೆ.

 

 

 

 

ಇನ್ನು 2017-18 ರಲ್ಲಿ ಸೊಗಡು ಶಿವಣ್ಣರವರ ನೇತೃತ್ವದಲ್ಲಿ ತಾವು ಹಾಗೂ ತಮ್ಮ ಸ್ನೇಹಿತರು, ಬೋಗಸ್ ಮತದಾರರ ವಿರುದ್ಧ ಹೋರಾಟ ಮಾಡಿದ್ದು ಅಂದು 3600 ಹೆಚ್ಚು ಪುನರಾವರ್ತಿತ ಮತದಾರರು ಇದ್ದರು ಎಂದ ಅವರು 2018ರಿಂದ 2022 ಸಾಲಿನ ಅವಧಿಯಲ್ಲಿ ಸುಮಾರು 18533 ಮತದಾರರು ಪುನರಾವರ್ತನೆ ಆಗಲು ಹೇಗೆ ಸಾಧ್ಯ ಇನ್ನು ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಸ್ಪಷ್ಟನೆ ನೀಡಿಲ್ಲ ಈಗಿನ ಕರಡು ಮತದಾರರ ಪಟ್ಟಿಯಲ್ಲಿ 240918 ಮತದಾರರು ಇದ್ದಾರೆ ಎಂದು ಚುನಾವಣಾ ಶಾಖೆ ಪ್ರಕಟಿಸಿದ್ದು ಇನ್ನು ಮುಂಬರುವ 2023ರ ಜನವರಿ ವೇಳೆಗೆ ಪುನಹ ಇದೇ ಪಟ್ಟಿ ಇರುತ್ತದೆ ಎಂದಿದ್ದಾರೆ.

 

 

 

ಇನ್ನು 2011ರ ಜನಗಣತಿ ಪ್ರಕಾರ ತುಮಕೂರು ನಗರದಲ್ಲಿ 3,08000 ಇದ್ದು ಅದೇ ಜನಗಣತಿಯ ಪ್ರಕಾರ 240918 ಎಂದು ಕರಡು ಮತದಾರರ ಪಟ್ಟಿಯಲ್ಲಿ ತೋರಿಸಿದ್ದು ಅದರಂತೆ ಶೇಕಡ 80ರಷ್ಟು ಇದೆ ಎಂದು ಹೇಳುತ್ತಿದ್ದು 2023ರ ಕರುಡು ಪಟ್ಟಿಯನ್ನು ಸಹ ಇದೇ ಮತದಾರರ ಪ್ರಮಾಣ ಇರುತ್ತದೆ ಈ ಮೂಲಕ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸಮತೋಲನ ಮಾಡಲು ಹೊರಟಿದ್ದಾರೆ .

 

 

 

 

ಇನ್ನು ಇದಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಗಮನ ಹರಿಸುತ್ತಿಲ್ಲ ಈಗಿನ ಜನಸಂಖ್ಯೆಯ ಪ್ರಕಾರ ತುಮಕೂರು ನಗರದಲ್ಲಿ 3.5 ದಿಂದ 4 ಲಕ್ಷದ ವರೆಗೂ ಜನಸಂಖ್ಯೆ ಇದ್ದು ಇದಕ್ಕೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳು ಧ್ವನಿ ಎತ್ತಲು ಮುಂದಾಗುತ್ತಿಲ್ಲ ಎಂದಿದ್ದಾರೆ.

 

 

 

 

ಹಾಗಾಗಿ ಮುಂದಿನ ದಿನದಲ್ಲಿ ಮತ್ತಷ್ಟು ಬೃಹತ್ ಪ್ರಮಾಣದಲ್ಲಿ ಮತದಾರರ ಸಂಖ್ಯೆ ಕೈಬಿಡುವ ಸಾಧ್ಯತೆ ಇರುವುದರಿಂದ ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

 

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!