ತಾಸಿಲ್ದಾರ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಅಲೆಮಾರಿ ಕುಟುಂಬ….!

ತಾಸಿಲ್ದಾರ್ ವಿರುದ್ಧ ಪ್ರಕರಣ ದಾಖಲಿಸಲು ಮುಂದಾದ ಅಲೆಮಾರಿ ಕುಟುಂಬ….!

 

 

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ತಹಸೀಲ್ದಾರ್ ಮೇಲೆ ದೌರ್ಜನ್ಯ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆಹೋದ ಚಿಕ್ಕನಾಯಕನಹಳ್ಳಿ ಯ ಅಲೆಮಾರಿ ಕುಟುಂಬವೊಂದು ನ್ಯಾಯಕ್ಕಾಗಿ ಅಂಗಲಾಚುವ ಪ್ರಕರಣ ವರದಿಯಾಗಿದೆ.

 

 

 

ಚಿಕ್ಕನಾಯಕನಹಳ್ಳಿ ತಾಲೂಕಿನ ತಾಸಿಲ್ದಾರ್ ತೇಜಸ್ವಿನಿ ಅವರ ಮೇಲೆ ಅನುಸೂಚಿತ ಜಾತಿಗಳ ಹಾಗೂ ಬುಡಕಟ್ಟುಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯ ಒದಗಿಸಬೇಕು ಎಂದು ಚಿಕ್ಕನಾಯಕನಹಳ್ಳಿ ಅಲೆಮಾರಿ ಕುಟುಂಬ ಸ್ಥಳೀಯ ಪೋಲಿಸ್ ಠಾಣೆ ಮೆಟ್ಟಿಲೇರಿದ್ದು ಅಲ್ಲಿ ನ್ಯಾಯ ದೊರಕದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಲು ಮನವಿ ಮಾಡಿದ್ದಾರೆ.

 

 

ಪ್ರಕರಣದ ಹಿನ್ನೆಲೆ

ಚಿಕ್ಕನಾಯಕನಹಳ್ಳಿಯ ಕೆಡಿಗೆಹಳ್ಳಿ ಪಾಳ್ಯದ ಪರಮೇಶ್, ವೆಂಕಟೇಶಯ್ಯ ಹಾಗೂ ನರಸಮ್ಮ ಎಂಬುವವರು ಚಿಕ್ಕನಾಯಕನಹಳ್ಳಿಯ ತಾಸಿಲ್ದಾರರು ನಮ್ಮ ಮೇಲೆ ದೌರ್ಜನ್ಯ ಎಸಗಿ , ಜೀವ ಭಯವನ್ನು ಉಂಟು ಮಾಡಿ ದೌರ್ಜನ್ಯ ಎಸಗಿದ್ದಾರೆ ಈ ಮೂಲಕ ಪರಿಶಿಷ್ಟ ಜಾತಿಯ ಕುಟುಂಬಕ್ಕೆ ಅನ್ಯಾಯ ಮಾಡಲು ಹೊರಟಿದ್ದಾರೆ ಹಾಗಾಗಿ ಕೂಡಲೇ ತಾಸಿಲ್ದಾರ್ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಮೊರೆ ಹೋಗಿದೆ.

 

 

ಚಿಕ್ಕನಾಯಕನಹಳ್ಳಿಯ ಕೇಡಿಗೆ ಹಳ್ಳಿ ಪಾಳ್ಯದ ಪರಮೇಶ್ ಸೇರಿದಂತೆ ಇತರೆ ಕುಟುಂಬಗಳು ಗುಂಡು ತೋಪಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಸುಮಾರು 25 ವರ್ಷಗಳಿಂದ ವಾಸವಿದ್ದವು.

 

 

ಕಳೆದ ತಿಂಗಳು ಬಿದ್ದ ಭಾರಿ ಮಳೆಗೆ ಗುಡಿಸಲುಗಳಿಗೆ ನೀರು ನುಗ್ಗಿ ಸಾಕಷ್ಟು ಸಮಸ್ಯೆ ಉಂಟಾಗಿತ್ತು ಇದನ್ನು ಗಮನಿಸಿದ ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ನಗರದ ಗುಂಡ ತೋಪಿನಲ್ಲಿ ವಾಸವಿದ್ದ ಎಲ್ಲಾ ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ರವಾನಿಸಲಾಗಿತ್ತು .

 

 

ನಂತರ ನವಂಬರ್ 19 ರಿಂದ ಡಿಸೆಂಬರ್ ಎರಡರವರೆಗೂ ತಾತ್ಕಾಲಿಕ ಗಂಜಿ ಕೇಂದ್ರದಲ್ಲಿ ವಾಸವಿದ್ದ ಕುಟುಂಬಗಳಿಗೆ ಪುರಸಭೆಯ ಮುಖ್ಯಾಧಿಕಾರಿಗಳು ಭೇಟಿ ನೀಡಿ ಡಿಸೆಂಬರ್ 12ರಂದು ಏಕಾಏಕಿ ಗಂಜಿಕೇಂದ್ರ ತೊರೆದು ಗುಡಿಸಲುಗಳಿಗೆ ವಾಪಸ್ ತೆರಳಲು ಸೂಚಿಸಿದರು

 

 

ಆದರೆ ಭಾರೀ ಮಳೆಗೆ ಹಾನಿಯಾಗಿದ್ದಾಗ ಗುಡಿಸಲುಗಳಿಗೆ ಕುಟುಂಬಗಳು ತೆರಳಲು ಹಿಂದೇಟು ಹಾಕಿ ಕೆಲದಿನಗಳ ಸಮಯಾವಕಾಶವನ್ನು ಪಟ್ಟಣದ ಮುಖ್ಯ ಅಧಿಕಾರಿ ಹಾಗೂ ತಾಸಿಲ್ದಾರ್ ಅವರಿಗೆ ಗಮನಕ್ಕೆ ತಂದರು ಆದರೆ ಬಡವರ ರಕ್ಷಣೆಗೆ ನಿಲ್ಲಬೇಕಾದ ತಾಸಿಲ್ದಾರರು ತಮ್ಮ ಕಚೇರಿಗೆ ನಮ್ಮ ಕುಟುಂಬವನ್ನು ಕರೆಯಿಸಿ ಕೂಡಲೇ ಗಂಜಿ ಕೇಂದ್ರವನ್ನು ತೆರೆದು ದಬ್ಬೇಘಟ್ಟ ಸರ್ವೆ ನಂಬರ್ ನಲ್ಲಿ ನೀಡಿರುವ ಜಾಗಕ್ಕೆ ಹೋಗಿ ವಾಸಮಾಡಲು…..ಹೆದರಿಸಿ ,ಬೆದರಿಸಿ, ಪ್ರಾಣ ಬೆದರಿಕೆಯನ್ನು ಹಾಕುವ ಮೂಲಕ ನಮಗೆ ದೌರ್ಜನ್ಯ ಎಸಗಿದ್ದಾರೆ ಎಂದು ಅಲೆಮಾರಿ ಕುಟುಂಬಗಳು ಆರೋಪಿಸಿದ್ದಾರೆ.

 

 

ಇನ್ನು ಡಿಸೆಂಬರ್ 3ರಂದು ತಮ್ಮ ಕಚೇರಿಗೆ ಕರೆಸಿದ ಕರೆಸಿಕೊಂಡ ತಾಸಿಲ್ದಾರರು ಪರಮೇಶ್ನನ್ನು ನನ್ನ ಮಾತಿಗೆ …..ನಿನ್ ನಿಂತ್ಕೊಂಡ್ರೆ …..ಸರಿ ನೀನೇನಾದರೂ ಹಿಂಗೇ ಆಡೋದ್ರೆ……107,109 ಸೆಕ್ಷನ್ ಗಳ ಮೇಲೆ ಗಡಿಪಾರು ಮಾಡಿ ರೌಡಿಶೀಟರ್ ಓಪನ್ ಮಾಡಿಸುತ್ತೇನೆ…. ನೀನು ಕೇಳದೇ ಇರುವ ಕೇಸುಗಳನ್ನು ಸಹ ನಿನ್ನ ಮೇಲೆ ಹಾಕುತ್ತೇನೆ ಇದು ಗ್ಯಾರಂಟಿ ಎಂದು ತಾಸಿಲ್ದಾರರು ಪರಮೇಶ್ಗೆ ಅವರಿಗೆ ಬೆದರಿಕೆ ಹಾಕುವ ಮೂಲಕ ಅಲೆಮಾರಿ ಕುಟುಂಬದ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಪರಮೇಶ್ ಆರೋಪಿಸಿದ್ದಾರೆ ಹಾಗೂ ಅಷ್ಟಕ್ಕೆ ಸುಮ್ಮನಾಗದ ತಾಸಿಲ್ದಾರ್ ಮೇಡಂ ರವರು…. ಮುಂದುವರೆದು ವೆಂಕಟೇಶಯ್ಯ ನವರಿಗೂ…. ಸಹ ನಿನ್ನ ಆಧಾರ್ ಕಾರ್ಡನ್ನು ಬ್ಲಾಕ್ ಲಿಸ್ಟ್ಗೆ ಹಾಕಿಸಿ…… ಜೀವನದಲ್ಲಿ ಸರ್ಕಾರದ ಸೌಲಭ್ಯಗಳನ್ನು ನಿನಗೆ ದೊರೆಯದ ಹಾಗೆ ಮಾಡುತ್ತೇನೆ ಎಂದು ಧಮಕಿ ಹಾಕಿದ್ದಾರೆ ಎಂದು ವೆಂಕಟೇಶಯ್ಯ ನವರಿಗು ಧಮಕಿ ಹಾಕಿದ್ದಾರೆ.

 

ತಹಸೀಲ್ದಾರ್ ಧಮಕಿ ಹಾಕಿರುವ ಎನ್ನಲಾದ ಆಡಿಯೋ ವೈರಲ್

 

 

 

ಇಷ್ಟಕ್ಕೂ ಸುಮ್ಮನಾಗದ ತಾಸಿಲ್ದಾರ್ ಮೇಡಂ ರವರು ಮುಂದುವರೆದು ನರಸಮ್ಮ ಎಂಬುವ ಮಹಿಳೆ ನಾವು ಸಹ ಮನುಷ್ಯರಲ್ಲವಾ ಮೇಡಂ ಏಕಾಏಕಿ ಹೋಗಿ ಕಾಡಿನಲ್ಲಿ ಹೇಗೆ ಮೋಸ ಮಾಡಲು ಸಾಧ್ಯ ನಮಗೂ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಕೇಳಿದ ಕೂಡಲೇ ಕೆಂಡವಾದ ತಾಸಿಲ್ದಾರ್ ಮೇಡಂ ರವರು ನರಸಮ್ಮ ನವರನ್ನು ಕತ್ತು ಹಿಡಿದು ಆಚೆಗೆ ದಬ್ರೋ…. ಎಂದು ಹೇಳುವ ಮೂಲಕ ದರ್ಪ ತೋರಿಸುವ ಮೂಲಕ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ರೀತಿಯಲ್ಲಿ ಅಲೆಮಾರಿ ಕುಟುಂಬದ ಮೇಲೆ ದರ್ಪ ತೋರಲು ತಹಸಿಲ್ದಾರ್ ಮುಂದಾಗಿದ್ದಾರಾ…..? ಎನ್ನುವ ಸಾಕಷ್ಟು ಅನುಮಾನ ಎಲ್ಲರನ್ನೂ ಮೂಡುತ್ತದೆ.

 

 

ಇಷ್ಟೆಲ್ಲ ಘಟನೆಗಳ ಹಿನ್ನೆಲೆಯಲ್ಲಿ ಚಿಕ್ಕನಾಯಕನಹಳ್ಳಿ ಠಾಣೆಗೆ ದೂರು ದಾಖಲಿಸಲು ಮುಂದಾದರೂ ಸ್ಥಳೀಯ ಠಾಣೆಯಲ್ಲಿ ನ್ಯಾಯ ಸಿಗದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರಕರಣ ದಾಖಲಿಸಲು ಅಲೆಮಾರಿ ಕುಟುಂಬದ ಸದಸ್ಯರು ಮುಂದಾಗಿದ್ದಾರೆ.

 

 

 

 

ಅದೇನೇ ಇರಲಿ ತಾಲೂಕು ಆಡಳಿತವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಎಲ್ಲ ಸಮುದಾಯದ ಎಲ್ಲ ಜನಾಂಗಗಳ ಒಟ್ಟಾರೆಯಾಗಿ ತೆಗೆದುಕೊಂಡು ಹೋಗಬೇಕಾದ ತಾಲೂಕು ದಂಡಾಧಿಕಾರಿಗಳು ಕೂಲಿನಾಲಿ ಮಾಡಿ ಜೀವನ ಸಾಗಿಸುವ ಇಂತಹ ಬಡ ಅಲೆಮಾರಿ ಕುಟುಂಬದ ಮೇಲೆ ದರ್ಪ ತೋರಿರುವುದು ಎಷ್ಟು ಸರಿ  ಹಾಗಾಗಿ ದೌರ್ಜನ್ಯ ಎಸಗಿರುವ ತಾಸಿಲ್ದಾರ್ ಮೇಲೆ ಕ್ರಮ ಕೈಗೊಳ್ಳುವ ವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಲಂಚಮುಕ್ತ ಕರ್ನಾಟಕ  ನಿರ್ಮಾಣ ವೇದಿಕೆ ಸದಸ್ಯ ನಾಗ ಭೂಷಣ್ ತಿಳಿಸಿದ್ದಾರೆ.

ಅದೇನೇ ಇರಲಿ ನ್ಯಾಯಕ್ಕಾಗಿ ಅಂಗಲಾಚುತ್ತಿರುವ ಕುಟುಂಬಕ್ಕೆ ಮುಂದಿನ ದಿನದಲ್ಲಿ ಆದರೂ ಸಹ ನ್ಯಾಯ ದೊರಕಬಹುದೇ ಎಂದು ಕಾದುನೋಡಬೇಕಾಗಿದೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version