ಅರಣ್ಯ ಅಧಿಕಾರಿಗಳ ಕಿರುಕುಳಕ್ಕೆ ವಿಷ ಕುಡಿದ ಯುವಕ , ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ.
ತುಮಕೂರು: ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುತ್ತಿದ್ದ ವೇಳೆ ವಿಷ ಕುಡಿಯಲು ಮುಂದಾದ ರೈತ ವಿಷ ಕುಡಿಯುತ್ತಿದ್ದರೂ ನೀರು ಕುಡಿಯುತ್ತಿದ್ದಾನೆ ಹೊಟ್ಟೆ ತುಂಬ ಕುಡಿಯಲಿ ಬಿಡಿ ಎಂದು ಆರ್ ಎಫ್ ಒ ಪವಿತ್ರ ರವರು ವಿಷ ಕುಡಿಯುತ್ತಿದ್ದ ಯುವಕನಿಗೆ ಪ್ರಚೋದನೆ ನೀಡಿವ ಮೂಲಕ ತಮ್ಮ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿರುವ ತುಮಕೂರು ತಾಲೂಕಿನ ರಾಮಗೊಂಡನಹಳ್ಳಿಯಲ್ಲಿ ನಡೆದಿದೆ.
ತುಮಕೂರು ತಾಲ್ಲೂಕು ರಾಮಗೊಂಡನಹಳ್ಳಿಯ ರೈತ ಮಹಿಳೆ ಲಕ್ಷ್ಮೀದೇವಮ್ಮ ಹೆಸರಿಗೆ 2018ರಲ್ಲಿ ಸರ್ಕಾರ ಭೂಮಿ ಮಂಜೂರಾತಿ ಮಾಡಿದ್ದು, ಖಾತೆ ಮಾಡಿಸಿಕೊಳ್ಳುವಷ್ಟರಲ್ಲಿ ಭೂ ಮಂಜೂರಾಯಿ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರಿಂದ ಅರಣ್ಯ ಇಲಾಖೆ ಅರಣ್ಯ ಭೂಮಿ ಎಂದು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಅರಣ್ಯ ಇಲಾಖೆ ತೀವ್ರ ಕಿರುಕುಳ ನೀಡಿದ್ದು, ಏಕಾಏಕಿ ಕಾಪೌಂಡ್ ನಿರ್ಮಿಸಲು ಮುಂದಾಗಿದೆ, ಇದನ್ನು ಪ್ರಶ್ನಿಸಲು ಹೋದ ರೈತ ಲಕ್ಷ್ಮೀದೇವಮ್ಮ, ಲಕ್ಷ್ಮಯ್ಯ ಅವರ ಮಗ ನಾಗೇಶ್ ಅರಣ್ಯ ಮತ್ತು ಪೊಲೀಸ್ ಇಲಾಖೆ ದೌರ್ಜನ್ಯದ ವಿರುದ್ಧ ಅಧಿಕಾರಿಗಳ ಮುಂದೆಯೇ ವಿಷ ಕುಡಿದಿದ್ದಾನೆ.
ನಾಗೇಶ್ ವಿಷ ಕುಡಿಯಲು ಮುಂದಾದಾಗ ಆರ್ ಎಫ್ ಒ ಪವಿತ್ರ ಅವರು ನೀರು ಕುಡಿಯುತ್ತಿದ್ದಾನೆ, ಹೊಟ್ಟೆ ತುಂಬಾ ನೀರು ಕುಡಿಯಲಿ ಬಿಡಿ ಎಂದು ಅಪಹಾಸ್ಯ ಮಾಡಿದ್ದು, ಅರಣ್ಯ ಮತ್ತು ಪೊಲೀಸ್ ಇಲಾಖೆ ದೌರ್ಜನ್ಯವನ್ನು ವಿಡಿಯೋ ಮಾಡುತ್ತಿದ್ದ ಮೊಬೈಲ್ ಅನ್ನು ಕಸಿದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು.
ಸಧ್ಯ ವಿಷ ಕುಡಿದು ತೀವ್ರ ಅಸ್ವಸ್ಥಗೊಂಡ ನಾಗೇಶ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನ್ಯಾಯಾಲಯ ಸದರಿ ರೈತರನ್ನು ಒಕ್ಕಲೆಬ್ಬಿಸದಂತೆ ಆದೇಶ ನೀಡಿದ್ದರೂ ಸಹ ಆದೇಶ ಉಲ್ಲಂಘಿಸಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ದೌರ್ಜನ್ಯ ಎಸಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಶಾಸಕ _ಸುರೇಶ್ ಗೌಡ .
ಇನ್ನು ಘಟನೆ ತಿಳಿದ ಕೂಡಲೇ ತುಮಕೂರು ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡ ರವರು ಸಹ ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಇದೆ ಸಂದರ್ಭದಲ್ಲಿ ಮಾಹಿತಿ ನೀಡಿದ ಅವರು ಘಟನೆಗೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕೂಡಲೇ ಎಫ್ಐಆರ್ ದಾಖಲಿಸಬೇಕು ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು.
ಇನ್ನು ಘಟನೆಯ ಬಗ್ಗೆ ಮಾಹಿತಿ ನೀಡಿರುವ ಆರ್ ಎಫ್. ಓ ಪವಿತ್ರ ರವರು ಇನ್ನು ನಾವು ಸ್ಥಳಕ್ಕೆ ಭೇಟಿ ನೀಡಿದಾಗ ಯುವಕ ನಮ್ಮನ್ನ ಹೆದರಿಸಲೆಂದು ವಿಷ ಕುಡಿದಿದ್ದಾರೆ ಎಂದಿರುವ ಅವರು ಇನ್ನು ಸ್ಥಳೀಯ ಜಾಗಕ್ಕೆ ಸಂಬಂಧಿಸಿದಂತೆ ಅಂದು ಮಾಜಿ ಶಾಸಕರ ಅವಧಿಯಲ್ಲಿ ಅಕ್ರಮ ಭೂ ಮಂಜೂರಾತಿ ಆಗಿದ್ದು ಅದಕ್ಕೆ ಸಂಬಂಧಿಸಿದಂತೆ ನಾವು ಕೋರ್ಟ್ ಮೆಟ್ಟಿಲೇರಿದ್ದೆವು ಎಂದರು.
ಅದೇನೇ ಇರಲಿ ಅಧಿಕಾರಿಗಳ ನಡೆಯಿಂದ ಆಸ್ಪತ್ರೆಗೆ ಸೇರಿರುವ ಯುವಕ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗುವುದೇ ಎಂದು ಕಾದು ನೋಡಬೇಕಿದೆ.