ಆಪದ್ಬಾಂಧವರಂತೆ ಬಂದ ಪೊಲೀಸರು -ಉಳಿದ ಮಹಿಳೆಯ ಪ್ರಾಣ ಹಾಡಹಗಲೇ ಪತ್ನಿಗೆ ಮಚ್ಚಿನಿಂದ ಹಲ್ಲೆ : ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಹೆಣ್ಣಿನ ಜೀವ 

ಆಪದ್ಬಾಂಧವರಂತೆ ಬಂದ ಪೊಲೀಸರು -ಉಳಿದ ಮಹಿಳೆಯ ಪ್ರಾಣ ಹಾಡಹಗಲೇ ಪತ್ನಿಗೆ ಮಚ್ಚಿನಿಂದ ಹಲ್ಲೆ : ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಹೆಣ್ಣಿನ ಜೀವ 

 

ಸಿರಾ-  ಹಣ ಆಸ್ತಿ ಮತ್ತು ಕೆಲವು ವಯಕ್ತಿಕ ಕಾರಣಗಳ ಹಿನ್ನಲೆಯಲ್ಲಿ ಪತ್ನಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಪ್ರಯತ್ನ ನಡೆಸಿರುವ ಘಟನೆ ತಾಲೂಕಿನ ದೊಡ್ಡಆಲದ ಮರ ಬಳಿ‌ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಈ ಕುರಿತು ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಐಪಿಸಿ 307 ರಡಿಯಲ್ಲಿ ಪ್ರಕರಣ ದಾಖಲಾಗಿದೆ.

 

ಹಲ್ಲೆ ಮಾಡಿದ ಆರೋಪಿಯನ್ನು ಬಾಲು ಅಲಿಯಾಸ್ ಮಿರಾಕಲ್ ಬಾಲು ಎಂದು‌ ಗುರುತಿಸಲಾಗಿದೆ.ಆರೋಪಿ ಬಾಲು ಎಂಬಾತನಿಗೆ ಈಗಾಗಲೇ ಒಂದು ಮದುವೆಯಾಗಿದ್ದು ಮೊದಲ ಹೆಂಡತಿಯು ಆರೋಪಿಯನ್ನು ತೊರೆದು ಮತ್ತೊಬ್ಬರನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದು. ಕೆಲ ದಿನಗಳ ನಂತರ ಆರೋಪಿ ಬಾಲುವನ್ನು ಹುಡುಗಿಯೊಬ್ಬಳು ತಾನೇ ಪ್ರೀತಿಸಿ ಮದುವೆಯೂ ಆಗಿದ್ದಳು , ಎರೆಡು ಮಕ್ಕಳನ್ನು ಹೊಂದಿರುವ ಮಹಿಳೆಯು ಬಾಲುವಿನ ದುರ್ವರ್ತನೆ ಗಳಿಂದ ಬೇಸತ್ತು ಆತನೊಂದಿಗೆ ಜಗಳವಾಡಿಕೊಂಡಿದ್ದಳು.

 

 

ಅವಳ ಮೇಲೆ ಹಲ್ಲೆಗಾಗಿ ಕಾಯುತ್ತಿದ್ದ ಆರೋಪಿ ಬಾಲು ನಿನ್ನೆ ದೊಡ್ಡ ಆಲದ ಮರದ ಗೇಟ್ ಬಳಿ ಬಸ್ ನಿಂದ ಇಳಿಯುತ್ತಿದ್ದ ಹೆಂಡತಿಯನ್ನು ಕಂಡು ಬೈಕ್ನಲ್ಲಿ ಹಿಂಬಾಲಿಸಿದ ಬಾಲು ಮಚ್ಚಿನಿಂದ ಆಕೆಯ ಮೇಲೆ ಹಲ್ಲೆಗೆ ಪ್ರಯತ್ನಿಸಿದ.

 

 

ಘಟನಾ ಸ್ಥಳದಲ್ಲಿದ್ದ ಹತ್ತಾರು ಸಾರ್ವಜನಿಕರು ಕೂಗಾಡುತ್ತಿದ್ದ ದನ್ನು ಕೇಳಿಸಿಕೊಂಡ ಮತ್ತೊಂದು ಬದಿಯಲ್ಲಿ ಹೈವೇ ಮೊಬೈಲ್ ಡ್ಯೂಟಿಯಲ್ಲಿದ್ದ ಎಎಸ್ಐ ಗೋವಿಂದರಾಜು ಹಾಗೂ ಚಾಲಕ ಮಹೇಶ್ ರವರು ಹೈವೇಯಲ್ಲಿ ನುಗ್ಗಿ ಬರುತ್ತಿದ್ದ ವಾಹನಗಳನ್ನು ಲೆಕ್ಕಿಸದೆ ಪ್ರಾಣದ ಹಂಗು ತೊರೆದು devider ಅನ್ನು ಹಾರಿಬಂದು ಹೆಂಡತಿಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿದ್ದ ಆರೋಪಿಯನ್ನು ಜೋರಾಗಿ ತಳ್ಳಿ ರಕ್ತದ ಮಡುವಿನಲ್ಲಿ ಉರುಳಾಡುತ್ತಿದ್ದ ಮಹಿಳೆಯನ್ನು ಆಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿದ್ದಾರೆ.

 

 

ಸ್ಥಳದಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾದ ಚಾಲಕ ಮಹೇಶ್ ಹಾಗೂ ಎಸ್ಐ ಗೋವಿಂದರಾಜು ಪ್ರವರ ಧೈರ್ಯ ಮತ್ತು ಸಮಯಪ್ರಜ್ಞೆಯನ್ನು ಸಿರಾ ಉಪ ವಿಭಾಗ ಡಿವೈಎಸ್ಪಿ ಕುಮಾರಪ್ಪ, ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ರವಿ ಹಾಗೂ ಪಿಎಸ್ಐ ಮೋಹನ್ ರವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

 

 

ಘಟನಾ ಸ್ಥಳಕ್ಕೆ ಕಳ್ಳಂಬೆಳ್ಳ ಪೊಲೀಸರು ಸರಿಯಾದ ಸಮಯಕ್ಕೆ ಆಗಮಿಸಿದ‌ ಕಾರಣ ಕೊಲೆಯೊಂದು ತಪ್ಪಿದೆ. ಈ ಕಾರಣಕ್ಕೆ ಕಳ್ಳಂಬೆಳ್ಳ ಪೊಲೀಸರ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ..

 

ಪೊಲೀಸರೆಂದರೆ ಎಲ್ಲ ಮುಗಿದ ಮೇಲೆ ಕೊನೆಗೆ ಬರುವವರು, ಅವರಿಗೆ ಸಮಯ ಪ್ರಜ್ಞೆ ಇಲ್ಲ ಎಂದೆಲ್ಲಾ ಉಡಾಫೆಯಿಂದ ಮಾತನಾಡುವ ಜನರಿಗೆ ಪೊಲೀಸರೆಂದರೆ ಆರಕ್ಷಕರು, ಪ್ರಾಣ ರಕ್ಷಕರು ಮತ್ತು ಸಾರ್ವಜನಿಕರ ಆಪ್ತಮಿತ್ರರು ಎಂಬುದನ್ನು ಸಾಬೀತು ಪಡಿಸಿರುವ ಕಳ್ಳಂಬೆಳ್ಳ ಪೊಲೀಸರ ಕರ್ತವ್ಯ ದಕ್ಷತೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದ್ದು ಮಹೇಶ್ ಮತ್ತು ಗೋವಿಂದರಾಜು ರವರ ಧೈರ್ಯ ಸಾಹಸಕ್ಕೆ ಜಿಲ್ಲಾ ಎಸ್ಪಿ ಶ್ರೀ ರಾಹುಲ್ ಕುಮಾರ್ ಶಹಾಪುರವಾಡ್ ಅವರು ಸೂಕ್ತ ಪ್ರಶಂಸೆ ಹಾಗೂ ಗೌರವ ಬಹುಮಾನ ನೀಡಿ ಸನ್ಮಾನಿಸಬೇಕೆಂಬುದು  ಸರ್ವಾಜನಿಕರ ಆಶಯವಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version