ಕ್ಷುಲ್ಲಕ ಕಾರಣಕ್ಕೆ ಜಗಳ, ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ …?

ಕ್ಷುಲ್ಲಕ ಕಾರಣಕ್ಕೆ ಜಗಳ, ನೇಣು ಹಾಕಿ ಕೊಂಡು ಆತ್ಮಹತ್ಯೆ ಮಾಡಿಕೊಂಡ ವಿವಾಹಿತ ಮಹಿಳೆ …?

 

 

ತುಮಕೂರು – ಕ್ಷುಲ್ಲಕ ಕಾರಣ ಗಂಡನ ಜೊತೆ ಗಲಾಟೆ ಮಾಡಿಕೊಂಡು ವಿವಾಹಿತ ಯುವತಿ ಒಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

 

 

 

 

ತುಮಕೂರು ನಗರದ ಪಿಎಚ್ ಕಾಲೋನಿಯ 12ನೇ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ಕಳೆದ ಎರಡು ವರ್ಷದ ಹಿಂದೆ ತುಮಕೂರು ಗ್ರಾಮಾಂತರದ ಚೋಳಂಬಳ್ಳಿ ಗ್ರಾಮದ ಖಾಸಿನ ಎಂಬ ಮಹಿಳೆಯನ್ನು ತುಮಕೂರಿನ ಪಿಎಚ್ ಕಾಲೋನಿಯ ಅರ್ಬಾಜ್ ಎಂಬತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

 

 

 

 

ಇನ್ನು ಮೃತ ಮಹಿಳೆ ಖಾಸಿನಾ ಗೆ ಒಂದುವರೆ ವರ್ಷದ ಪುಟ್ಟ ಮಗು ಇದು ಇಂದು ಬೆಳಗ್ಗೆ ಮಹಿಳಾ ಸಂಘದಲ್ಲಿ ಪಡೆದಿದ್ದ ಸಾಲ ತೀರಿಸುವ ವಿಷಯಕ್ಕೆ ಜಗಳ ಮಾಡಿಕೊಂಡಿದ್ದ ದಂಪತಿ.

 

 

 

 

 

ಇನ್ನು ಗಂಡ ವೆಲ್ಡಿಂಗ್ ಕೆಲಸ ನಿರ್ವಹಿಸುತ್ತಿದ್ದು ಗಂಡ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯಲ್ಲಿದ್ದ

ಖಾಸಿನಾ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

 

 

 

 

ಘಟನೆ ತಿಳಿದ ಕೂಡಲೇ ಖಾಶಿನಾ ಪೋಷಕರು ಗಂಡನ ಮನೆಗೆ ಧಾವಿಸಿ, ಮಗಳ ಸಾವಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ನನ್ನ ಮಗಳ ಸಾವಿಗೆ ಆಕೆಯ ಗಂಡ ಅರ್ಬಾಜ್ ಕಾರಣ ಎಂದು ಅನುಮಾನ ವ್ಯಕ್ತಪಡಿಸಿರುವ ಪೋಷಕರು ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದ್ದಾರೆ.

 

 

 

 

ಘಟನೆ ತಿಳಿದ ಕೂಡಲೇ ತಿಲಕ್ ಪಾರ್ಕ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂಜಯ್ ಕುಮಾರ್ ಕಾಂಬಳೆ , ಪಿಎಸ್ಐ ಚಂದ್ರಕಲಾ, ಎ ಎಸ್ ಐ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.

 

 

 

 

 

ಘಟನೆ ಸಂಬಂಧ ಅರ್ಬಾಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮೃತ ಮಹಿಳೆಯ ಶವವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು ತಿಲಕ್ ಪಾರ್ಕ್ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version