ದೇವನಹಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಎ.ಕೆ.ಪಿ. ನಾಗೇಶ್ ಶಾಸಕರ ಹೇಳಿಕೆಯನ್ನು ಖಂಡಿಸಿ ಪತ್ರಿಕಾಗೋಷ್ಠಿ ನಡೆಸಿದರು.
ಇತ್ತೀಚೆಗೆ ಕೃಷ್ಣಭೈರೇಗೌಡ ಹೇಳಿದ ಹೇಳಿಕೆಗೆ ಪತ್ರಕರ್ತರು ಶಾಸಕರ ಪ್ರತಿಕ್ರಿಯೆ ಕೇಳಲು ಹೋದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ತಾಲ್ಲೂಕಿನ ಜನತೆ ಅಧಿಕಾರ ಇಲ್ಲದೇ ಸಮಾಜ ಸೇವೆ, ದೇವಾಲಯಗಳ ಜೀರ್ಣೋದ್ಧಾರ ಎಲ್ಲವನ್ನು ಮಾಡುತ್ತಿದ್ದಾರೆ.
ಇನ್ನು ಶಾಸಕರಾದರೆ ಕ್ಷೇತ್ರ ಅಭಿವೃದ್ಧಿ ಆಗುತ್ತದೆ ಎನ್ನುವ ಭರವಸೆಯಿಂದ ಕಳ್ಳಿ ಹಾಲನ್ನು ಹಸುವಿನ ಹಾಲು ಎಂದು ತಿಳಿದು ಮತಹಾಕಿ ಕ್ಷೇತ್ರದ ಶಾಸಕರನ್ನಾಗಿ ಮಾಡಿದರು ಆದರೆ ಈಗ ತಿಳಿಯುತ್ತಿದೆ ಇವರು ಬಂದಿದ್ದು ಅವರ ರಿಯಲ್ ಎಸ್ಟೇಟ್ ಬೆಳೆಸಲು ವಿನಃ ಕ್ಷೇತ್ರದ ಅಭಿವೃದ್ಧಿಗೆ ಅಲ್ಲಾ ಎಂದು ಎಲ್ಲಾರಿಗೂ ಅರ್ಥವಾಗಿದೆ. ಶಾಸಕರ ಈ ದರ್ಪ, ಉದ್ದಟತನದ ಮಾತು ದೇವನಹಳ್ಳಿ ಜನತೆ ಸಹಿಸುವುದಿಲ್ಲ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಿ ಮುಂದಿನ ಚುನಾವಣೆಯಲ್ಲಿ ಠೇವಣಿ ಕೊಡದೇ ಮನೆಗೆ ಕಳಿಸುತ್ತಾರೆ ನೆನಪಿರಲಿ ಎಂದರು.
ಕೋವಿಡ್ ಎರಡನೇ ಅಲೆ ಪ್ರಾರಂಭದಿಂದ ಕೊನೆಯವರೆಗೂ ಎಲ್ಲಿಯೂ ಕಾಣದೇ ಅನ್ ಲಾಕ್ ಆದ ಮರುದಿನ ತಮ್ಮ ಹುಟ್ಟುಹಬ್ಬ ಆಚರಿಸಲು ಬಂದ್ದಿದ್ದೀರಾ, ಕೋವಿಡ್ ಸಮಯದಲ್ಲಿ ಪರದಾಡುವ ಜನರ ನೋವಿಗೆ ಸ್ಪಂದಿಸದೇ ಕ್ಷೇತ್ರ ಬಿಟ್ಟು ಪಕ್ಕದ ಕ್ಷೇತ್ರದ ಮನೆಯಲ್ಲಿ ಇದ್ದರೆ ಇದು ಯಾವ ನ್ಯಾಯ? ಇವೆಲ್ಲವೂ ಜೆಡಿಎಸ್ ಮುಖಂಡರರಿಗೂ ಅರ್ಥವಾಗಬೇಕು. ಶಾಸಕರು ಪತ್ರಕರ್ತರಿಂದ ಹಿಡಿದು ಸಾಮಾನ್ಯ ಜನರವರೆಗೂ ಅವಮಾನಿಸಿದ್ದೀರಿ. ಆದ್ದರಿಂದ ಬೇಶರತ್ ಕ್ಷಮೆಯಾಚಿಸಬೇಕೆಂದು ಎ.ಕೆ.ಪಿ ನಾಗೇಶ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗಣೇಶ್ ಬಾಬು, ಅಮರ್ ನಾರಾಯಣ್, ವೆಂಕಟೇಶ್, ಮಧು, ಮುರಳಿ, ಚಂದ್ರಸಾಗರ್ ಇದ್ದರು.
ಗುರುಮೂರ್ತಿ ಬೂದಿಗೆರೆ
8861100990