ಜಟಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಲು ಕರೆ ನೀಡಿದ _ಕಾಳಿ ಸ್ವಾಮಿ.

ಜಟಕಾ ಮೀಟ್ ಅಂಗಡಿ ತೆರೆದು ಹಿಂದೂ ಧರ್ಮದ ಯುವಕರು ಆರ್ಥಿಕವಾಗಿ ಬಲಿಷ್ಠರಾಗಲು ಕರೆ ನೀಡಿದ _ಕಾಳಿ ಸ್ವಾಮಿ.

 

ತುಮಕೂರು_ಹಿಂದೂ ಧರ್ಮದ ಯುವಕರು ಜಟ್ಕ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಆರ್ಥಿಕವಾಗಿ ಬಲಿಷ್ಠವಾಗುವುದು ಮೂಲಕ ತಮ್ಮ ಕುಟುಂಬ ಹಾಗೂ ಹಿಂದೂ ಧರ್ಮವನ್ನು ಬಲಿಷ್ಟ ಗೊಳಿಸಬೇಕು ಎಂದು ಕಾಳಿ ಸ್ವಾಮೀಜಿ ಕರೆ ನೀಡಿದರು.

 

 

ತುಮಕೂರಿನ ಟೌನ್ಹಾಲ್ ವೃತ್ತದಲ್ಲಿರುವ ನಾಗರಕಟ್ಟೆ ದೇವಾಲಯಕ್ಕೆ ಭೇಟಿ ನೀಡಿದ ಅವರು ಏಕತೆಯ ಹಿಂದುತ್ವ ಇರುವ ಎಲ್ಲರನ್ನು ಒಟ್ಟುಗೂಡಿಸಬೇಕು ಈ ಮೂಲಕ ಆರ್ಥಿಕವಾಗಿ ಹಿಂದೂ ಧರ್ಮದವರು ಬಲಿಷ್ಠರಾಗಬೇಕು ಎಂದು ಕರೆ ನೀಡಿದರು.

 

 

ಇನ್ನು ಹಿಂದೂ ಧರ್ಮದ ಯುವಕರು ಹಿಂದೂ ಜಟಕಾ ಮೀಟ್ ಅಂಗಡಿಗಳನ್ನು ತೆರೆಯುವ ಮೂಲಕ ಬಲಿಷ್ಠವಾಗಬೇಕು ತುಮಕೂರು ಜಿಲ್ಲೆಯಾದ್ಯಂತ ಹಿಂದು ಜಟ್ಕಾ ಮೀಟ್ (ಮಾಂಸದ) ಅಂಗಡಿಯನ್ನು ತೆರೆಯಬೇಕು.

 

 

ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹಿಂದೂ ಜಟಕಾ ಮೀಟ್ ಅಂಗಡಿಗಳನ್ನು ತೆರೆದು ಈ ಮೂಲಕ ಹಿಂದೂ ಧರ್ಮ ಜಾಗೃತವಾಗಬೇಕು ಹಾಗಾಗಿ ಈ ಮೂಲಕ ತುಮಕೂರಿನಲ್ಲಿ ಶಾಖಾಹಾರ ಅಂಗಡಿಗಳನ್ನು ತೆರೆಯಲು ಹಿಂದೂ ಧರ್ಮದ ಯುವಕರಿಗೆ ಮನವಿ ಮಾಡಿದ್ದಾರೆ.

 

 

 

ಇನ್ನೂ ಹಿಂದೂ ಧರ್ಮದ ಯುವಕರು ಅಂಗಡಿಗಳನ್ನು ತೆರೆಯಲು ಮುಂದಾದರೆ ಅಂತಹ ಯುವಕರನ್ನು ಗುರುತಿಸಿ ತರಬೇತಿಗಳನ್ನು ನೀಡಿ ಅಂಗಡಿಗಳನ್ನು ತೆರೆಯಲು ಬೇಕಾದ ಸಹಕಾರವನ್ನು ತುಮಕೂರಿನ ಹಿಂದೂಪರ ಸಂಘಟನೆಗಳು ಮಾಡಲಿವೆ .

 

 

ಈ ಮೂಲಕ ಹಿಂದೂ ಧರ್ಮದ ಯುವಕರ ಉದ್ಯೋಗವನ್ನು ತಾವೇ ಸೃಷ್ಟಿ ಮಾಡುತ್ತೇವೆ ಎಂದಿದ್ದಾರೆ ಇದೆ  ಸಂದರ್ಭದಲ್ಲಿ ಬಜರಂಗದಳದ ತುಮಕೂರು ಜಿಲ್ಲಾ ಸಂಚಾಲಕ ಮಂಜು ಭಾರ್ಗವ ,ಬಸವರಾಜು, ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version