ತುಮಕೂರು ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ 9 ಜನರ ದುರ್ಮರಣ.

ತುಮಕೂರು ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ 9 ಜನರ ದುರ್ಮರಣ.

 

ಸಿರಾ -ಗುರುವಾರ ಮುಂಜಾನೆ ಸಮಯದಲ್ಲಿ ಕ್ರೂಜರ್ ಒಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಚಾವಲಪ್ಪಿರುವ ಘಟನೆ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಬಾಳೇನಹಳ್ಳಿ ಬಳಿ ನಡೆದಿದೆ.

 

 

 

ರಾಯಚೂರು ಮತ್ತು ಮಾನ್ವಿ ಮೂಲದ ಜನರು ಬೆಂಗಳೂರಿಗೆ ಕೂಲಿ ಅರಸಿ ಕ್ರೂಜರ್ ವಾಹನದಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು ಇನ್ನು ಕಾರ್ಮಿಕರು ಪ್ರಯಾಣ ಮಾಡುತ್ತಿದ್ದ ವಾಹನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂಬತ್ತು ಜನ ಸಾವನ್ನಪ್ಪಿದ್ದು,ತೀವ್ರ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯಲ್ಲಿ ಮೃತಪಟ್ಟ ಅವರಲ್ಲಿ ನಾಲ್ಕು ಗಂಡು ಒಂದು ಮಗು ಹಾಗೂ ನಾಲ್ವರು ಹೆಂಗಸರು ಘಟನೆಯಲ್ಲಿ ಹಸುನೀಗಿದ್ದಾರೆ.

 

ಇನ್ನು ಘಟನೆ ನಡೆದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಡಿಷನಲ್ ಭೇಟಿ ನೀಡಿ ದ್ದಾರೆ

ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version