ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ಸೆಕ್ಸ್ ಸಿಡಿ ಪ್ರಕರಣದಲ್ಲಿ ಐದು ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಪ್ರಕರಣದಲ್ಲಿ ದೊಡ್ಡವರ ಕೈವಾಡವಿದ್ದು, ದಿನೇಶ್ ಕಲ್ಲಹಳ್ಳಿ ಬಂಧಿಸಿದ್ರೆ ಸಿಡಿ ಹಿಂದಿರುವ ಕಟು ಸತ್ಯ ಹೊರಗೆ ಬರುತ್ತದೆ ಎಂದರು. ಯಾರು ಏನೇ ಹೇಳಿದ್ರೂ ನಾನು ಶುದ್ಧ ಹಸ್ತನಾಗಿದ್ದೇನೆ. ನನಗೆ ಯಾರದೆ ಭಯವಿಲ್ಲ ಎಂದು ಇದೇ ವೇಳೆ ಹೆಚ್ ಡಿಕೆ ಸ್ಪಷ್ಟಪಡಿಸಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯಿಂದ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಪಡೆದಂತಾಗಿದೆ.
ಮೈಸೂರಿನಲ್ಲಿ ಇಂದು ಮಾನತಾಡಿ ಅವರು, ಈ ಪ್ರಕರಣದಲ್ಲಿ ಐದು ಕೋಟಿ ರೂಪಾಯಿಗಳ ಡೀಲ್ ಆಗಿದೆ. ಇದರ ಹಿಂದೆ ದೊಡ್ಡವರ ಕೈವಾಡವಿದೆ. ಈ ನಿಟ್ಟಿನಲ್ಲಿ ಸಂತ್ರಸ್ತೆ ಎಲ್ಲಿದ್ದಾಳೆ ಅಂತ ಹುಡುಕುವ ಮೊದಲು ದಿನೇಶ್ ಕಲ್ಲಹಳ್ಳಿ ಬಂಧಿಸಬೇಕು. ಇನ್ನಷ್ಟು ಸಿಡಿಗಳಿವೆ ಅಂತ ಹೇಳುವ ದಿನೇಶ್ ನನ್ನು ಬಂಧಿಸಿ ಏರೋಪ್ಲೇನ್ ಹತ್ತಿಸಿದ್ರೆ ಸತ್ಯ ಹೊರಗೆ ಬರುತ್ತದೆ ಎಂದು ಹೇಳಿದರು.
ಮೂರು ತಿಂಗಳ ಹಿಂದೆಯೇ ಸಿಡಿ ಮುಂದಿಟ್ಟು ವ್ಯವಹಾರ ನಡೆಸಿದ್ದಾರೆ. ದಿನೇಶ್ ತಾನೊಬ್ಬನಲ್ಲದೆ, ಆತ ಕೆಲವರ ತಂಡ ಕಟ್ಟಿಕೊಂಡು ಹೀಗೆ ದುಡ್ಡು ಮಾಡಲು ನಿಂತಿದ್ದಾನೆ. ದಿನೇಶ್ ಬಳಿ ಸಿಡಿ ಹೇಗೆ ಬಂದಿತು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಹೆಚ್ ಡಿಕೆ ಇದೇ ವೇಳೆ ಆಗ್ರಹಿಸಿದರು. ಇಂತಹ ಬೆಳವಣಿಗೆಗಳಿಂದ ಸಮಾಜದಲ್ಲಿ ಹೇಸಿಗೆ ಹುಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಈ ಪ್ರಕರಣ ನೋಡಿ ಖುಷಿ ಪಡುವನ್ನಲ್ಲ. ಸರ್ಕಾರ ಬೀಳಿಸಿದವರು ಅಂತ ಒಂದು ಕಲ್ಲು ಹೊಡೆಯುವುದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.
ಮಾಜಿ ಸಿಎಂರೊಬ್ಬರು ಕೇರಳಗೆ ಹಾಗಾಗೆ ಹೋಗಿ ಬರುತ್ತಾರೆ ಅಂತ ಮಾಧ್ಯಮಗಳು ಸುದ್ಧಿ ಮಾಡುತ್ತವೆ. ಬಹಳಷ್ಟು ಮಂದಿ ಮಾಜಿ ಸಿಎಂಗಳಿದ್ದಾರೆ. ಆದರೆ ಮಾಜಿ ಸಿಎಂ ಯಾರು ಎಂದು ಬಹಿರಂಗ ಮಾಡಬೇಕು. ಇಲ್ಲದಿದ್ದರೆ ಗಾಳಿಯಲ್ಲಿ ಗುಂಡು ಹಾರಿಸಿದಂತಾಗುತ್ತದೆ. ನಾನು ಶದ್ಧ ಹಸ್ತನಾಗಿದ್ದೇನೆ. ನನಗೆ ಯಾವುದೇ ಭಯವಿಲ್ಲ. ನನ್ನ ಮೂಲ ಉದ್ದೇಶವೇನೆಂದರೆ ಬ್ಲಾಕ್ ಮೇಲ್ ಗಳು ನಿಲ್ಲಬೇಕು ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಒನ್ ನೇಷನ್, ಒನ್ ಎಲೆಕ್ಷನ್ ಕ್ಕಿಂತ ಮೊದಲು ಹಣದಿಂದ ಚುನಾವಣೆ ನಡೆಯುವುದು ನಿಲ್ಲಬೇಕು ಎಂದರು. ಮೈಸೂರು ಮೇಯರ್ ಚುನಾವಣೆ ಸಂಬಂಧ ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಾತ್ಯಾತೀತ ವಾದ ಮತ್ತು ಕೋಮುವಾದ ಎನ್ನುವುದ್ದಲ್ಲ ಡೋಂಗಿತನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಯಾರು ಏನೇ ಟಾರ್ಗೆಟ್ ಮಾಡಿದ್ರೂ, ಶಾಸಕ ತನ್ವೀರ್ ಸೇಠ್ ಪರ ನಾವಿದ್ದೇವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು