ಸಾವಿನಲ್ಲು ಸಾರ್ಥಕತೆ ಮೆರೆದ ಶಾಲಾ ವಿದ್ಯಾರ್ಥಿನಿ ಚಂದನ. ತುಮಕೂರು ಜಿಲ್ಲೆಯದೊಂದು ಹೃದಯ ಸ್ಪರ್ಶಿ ವಿದಾಯ 

ಸಾವಿನಲ್ಲು ಸಾರ್ಥಕತೆ ಮೆರೆದ ಶಾಲಾ ವಿದ್ಯಾರ್ಥಿನಿ ಚಂದನ. ತುಮಕೂರು ಜಿಲ್ಲೆಯಲ್ಲೊಂದು ಹೃದಯ ಸ್ಪರ್ಶಿ ವಿದಾಯ 

 

 

 

 

 

ತಿಪಟೂರು. ನಗರದ ಹುಳಿಯಾರ್ ರಸ್ತೆಯಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುವ ಸಂದರ್ಭದಲ್ಲಿ ಪ್ರಶಾಂತ ವೈನ್ಸ್ ಮುಂಭಾಗ ಕಳೆದ ಮಂಗಳವಾರ ಸಂಜೆ ವಿವೇಕಾನಂದ ಇಂಟರ್ನ್ಯಾಷನಲ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ, ಏಳನೇ ತರಗತಿಯ ವಿದ್ಯಾರ್ಥಿನಿ ಚಂದನ.ವಿ ವಯಸ್ಸು (13 ವರ್ಷ) ರಸ್ತೆ ಅಪಘಾತದಲ್ಲಿ ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಹಾಸನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

 

 

 

 

 

 

 

 

 

ನಂತರ ಖಾಸಗಿ ಆಸ್ಪತ್ರೆ ಒಂದರಲ್ಲಿ ಕಳೆದ 4-5 ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ವಿದ್ಯಾರ್ಥಿನಿಯ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯೆಗೊಂಡಿತ್ತು.

 

 

 

 

ಚಿತ್ರ –ಘಟನೆಯಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಚಂದನ

 

 

 

ಚಿಂತಾ ಜನಕ ಸ್ಥಿತಿಯಲ್ಲಿದ್ದ ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೆದುಳು ಸಂಪೂರ್ಣವಾಗಿ ವಿದ್ಯಾರ್ಥಿ ನಿಗೆ ನೀಡುತ್ತಿರುವ ಚಿಕಿತ್ಸೆ ಫಲಿಸುವುದಿಲ್ಲ ಎಂಬುದು ವೈದ್ಯರು ಖಚಿತಪಡಿಸಿದ ನಂತರ ವಿದ್ಯಾರ್ಥಿನಿ ಚಂದನ. ವಿ ರವರ ತಂದೆ, ವಸಂತ್ ಕುಮಾರ್, ತಾಯಿ, ದಿವ್ಯ. ಇದೀಗ ತನ್ನ ಮಗಳ ಅಂಗಾಂಗ ದಾನ ಮಾಡಿ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.

 

 

 

 

 

ಅಪ್ರಾಪ್ತ ಬಾಲಕಿಯ ಅಂಗಾಂಗ ದಾನ ಮಾಡಿರುವುದು ಜಿಲ್ಲೆಯಲ್ಲಿ ಇದೆ ಪ್ರಥಮ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

 

 

 

 

ನಗರದ ಹಾಸನ ವೃತ್ತದಿಂದ ಬಿಎಚ್ ರಸ್ತೆಯ ಮೂಲಕ ಹಳೆಪಾಳ್ಯದ ಅವರ ಮನೆಯವರೆಗೆ ಚಂದನಳ ಪಾರ್ಥಿವ ಶರೀರವನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ, ಸಾರ್ವಜನಿಕರ ಹಾಗೂ ಸರಕಾರಿ ಅಧಿಕಾರಿಗಳ ಮಧ್ಯೆ ಮೆರವಣಿಗೆ ಮೂಲಕ ಸರಕಾರಿ ಕರೆ ತರಲಾಯಿತು.

 

 

 

ಇನ್ನು ವಿವೇಕಾನಂದ ಇಂಟರ್ನ್ಯಾಷನಲ್ ಶಾಲಾ ಸಿಬ್ಬಂದಿ ವಿದ್ಯಾರ್ಥಿನಿ ಚಂದನಗೆ ಶ್ರದ್ಧಾಂಜಲಿಯೊಂದಿಗೆ ಒಂದು ದಿನಗಳ ಕಾಲ ಶಾಲೆ ರಜೆ ಘೋಷಣೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version