ರಾಮನಗರ ಜಿಲ್ಲೆಯ ಮಾಗಡಿಗೆ ನಾಲೆಯಲ್ಲಿ ನೀರು ಬಿಟ್ಟೆವಾದರೂ ಪೈಪ್ ಲೈನ್ ನಲ್ಲಿ ನೀರು ಬಿಡಲು ಒಲ್ಲೆವು – ಮಾಜಿ ಸಚಿವ ಸೊಗಡು ಶಿವಣ್ಣ

ರಾಮನಗರ ಜಿಲ್ಲೆಯ ಮಾಗಡಿಗೆ ನಾಲೆಯಲ್ಲಿ ನೀರು ಬಿಟ್ಟೆವಾದರೂ ಪೈಪ್ ಲೈನ್ ನಲ್ಲಿ ನೀರು ಬಿಡಲು ಒಲ್ಲೆವು – ಮಾಜಿ ಸಚಿವ ಸೊಗಡು ಶಿವಣ್ಣ 

 

 

 

 

ರಾಮನಗರ ಜಿಲ್ಲೆಯ ಮಾಗಡಿಯ ಶ್ರೀರಂಗ ಏತ ನೀರಾವರಿ ಯೋಜನೆಗೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಂಡು ನಾಲೆಯಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿಲ್ಲ ಲಿಂಕ್ ಕೆನಾಲ್ ಮೂಲಕ ಪೈಪ್ ಲೈನ್ ನಲ್ಲಿ ನೀರು ಬಿಡಲು ಸುತಾರಾಮ್ ಒಪ್ಪುವುದಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.

 

 

 

 

 

 

ಇಂದು ತುರುವೇಕೆರೆ ತಾಲ್ಲೂಕು ಸಿ ಎಸ್ ಪುರ ಹೋಬಳಿ ಚೆನ್ನೇನಹಳ್ಳಿ ಗ್ರಾಮದಲ್ಲಿ ರಾಮನಗರ ಜಿಲ್ಲೆಗೆ ಹೇಮಾವತಿ ನೀರು ಕೊಂಡೊಯ್ಯಲು ಪೈಪ್ ಲೈನ್ ಕಾಮಗಾರಿಗಾಗಿ ನಿರ್ಮಾಣ ಮಾಡಿರುವ ನಾಲೆಯನ್ನು ಜೆಸಿಬಿಗಳ ಮೂಲಕ ಮುಚ್ಚಿಸಿ ಮಾತನಾಡಿದರು.

 

 

 

 

 

ತುಮಕೂರು ಜಿಲ್ಲೆಯ ರೈತರ ಪ್ರಾಣಿ ಪಕ್ಷಿಗಳ ಹಾಗೂ ನಾಗರೀಕರ ಹಿತ ಕಾಪಾಡುವುದು ನಾನೊಬ್ಬ ನಾಗರೀಕನಾಗಿ ಈ ಯೋಜನೆಯನ್ನು ವಿರೋಧ ಮಾಡುವುದು ನನ್ನ ಜವಾಬ್ದಾರಿ ಮತ್ತು ಹೊಣೆಗಾರಿಕೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.

 

 

 

 

 

 

 

ಈಗಿರುವ ನಾಲೆಯಲ್ಲಿ ಹೇಮಾವತಿ ನೀರು ಸರಾಗವಾಗಿ ಗುಬ್ಬಿ ತುರುವೇಕೆರೆ ತುಮಕೂರು ಮಧುಗಿರಿ ಕೊರಟಗೆರೆ ಹಾಗೂ ತಿಪಟೂರಿನ ತಾಲೂಕಿನ ನೂರಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅನೇಕ ಕೆರೆಕಟ್ಟೆಗಳನ್ನು ತುಂಬಿಕೊಂಡು ರೈತರ, ಪ್ರಾಣಿ ಪಕ್ಷಿಗಳಿಗೆ ನೀರಿನ ಆಹಾಕಾರ ಇಲ್ಲದೆ ಹರಿಯುವಂತ ನಾಲೆಗೆ ಕಳ್ಳರ ಕಣ್ಣು ಬಿದ್ದಿದೆ ಎಂದರು.

 

 

 

 

 

ಪೈಪ್ ಲೈನ್ ಮೂಲಕ ನೀರು ಹರಿಸಿಕೊಂಡು ಹೋಗುವುದರ ಜೊತೆಗೆ ನಮ್ಮ ನೀರಿಗೂ ಕಿಂಡಿ ತೋಡಿದ್ದಾರೆ ಆದರೆ ನನ್ನ ಕೊನೆಯ ಉಸಿರಿರುವವರೆಗೂ ಕೂಡ ಈ ಯೋಜನೆಗೆ ಅವಕಾಶ ಮಾಡಿಕೊಡುವುದಿಲ್ಲ ಇದಕ್ಕೆ ನನ್ನ ಬಲವಾದ ವಿರೋಧವಿದ್ದು ಈ ಯೋಜನೆಯನ್ನು ವಾಪಸ್ ಪಡೆಯುವವರೆಗೂ ಕೂಡ ನನ್ನ ಹೋರಾಟ ನಿಲ್ಲುವುದಿಲ್ಲ ಎಂದರು.

 

 

 

 

 

 

 

ಜೆಸಿಬಿಗಳನ್ನು ಬಿಡದೆ ಅಡ್ಡಿಪಡಿಸಿದಂತಹ ಪೊಲೀಸರ ನಡುವೆ ಮಾತಿನ ಚಕಮಕಿ

 

ಕಾಮಗಾರಿಯ ನಾಲೆಯನ್ನು ಮುಚ್ಚಿಸಲು ಬಂದಿದ್ದಂತಹ ನೂರಾರು ಜೆಸಿಬಿಗಳನ್ನು ಒಳಗೆ ಬಿಡದೆ ಪೊಲೀಸರು ಅಡ್ಡಿಪಡಿಸಿದ್ದನ್ನು ಮಾಜಿ ಸಚಿವ ಸೊಗಡು ಶಿವಣ್ಣ, ತುರುವೇಕೆರೆ ಕ್ಷೇತ್ರದ ಶಾಸಕ ಎಂ.ಟಿ ಕೃಷ್ಣಪ್ಪ ಮಾಜಿ ಶಾಸಕ ಮಸಾಲೆ ಜಯರಾಮ್ ಬಿಜೆಪಿ ಮುಖಂಡ ಪ್ರಭಾಕರ ಕನ್ನಡ ಸೇನೆಯ ಜಿಲ್ಲಾ ಅಧ್ಯಕ್ಷ ಧನಿಯಕುಮಾರ್ ಅವರು ಬಲವಾಗಿ ವಿರೋಧಿಸಿ ಜೆಸಿಬಿಗಳನ್ನು ಒಳಗೆ ತೆಗೆದುಕೊಂಡು ಹೋಗಿ ನಾಲೆಯನ್ನು ಮುಚ್ಚಿಸಿದರು.

 

 

 

 

 

 

 

 ಈ ನಡುವೆ ಪೊಲೀಸರ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು..

ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಹಂತಕ್ಕೂ ಕೂಡ ಹೋಗಿತ್ತು.ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಮರಿಯಪ್ಪ ಅವರು ಹಾಗೂ ಡಿವೈಎಸ್ಪಿ ಶೇಖರ್ ಅವರು ಇದನ್ನು ಸೂಕ್ಷ್ಮವಾಗಿ ನಿಭಾಯಿಸಿ ಪ್ರತಿಭಟನಾಕಾರರ ಮನವೊಲಿಸಿದರು.

 

ತುರುವೇಕೆರೆ ಕ್ಷೇತ್ರದ ಶಾಸಕ ಎಂ. ಟಿ ಕೃಷ್ಣಪ್ಪ ಅವರು ಮಾತನಾಡಿ ಈ ಯೋಜನೆಯು ಅವೈಜ್ಞಾನಿಕವಾಗಿದ್ದು ಕಾಮಗಾರಿ ನಡೆಯುತ್ತಿರುವುದು ಕೂಡ ಕಾನೂನು ಬಾಹಿರ.ಯಾವುದೇ ಭೂಮಿಯನ್ನು ಸರಕಾರಿ ಮಾರ್ಗಸೂಚಿ ಅನ್ವಯ ಭೂಸ್ವಾಧೀನ ಪಡೆಸಿಕೊಳ್ಳದೆ ಕಾಮಗಾರಿ ನಡೆಸುತ್ತಿರುವುದು ಕಾನೂನು ಬಾಹಿರವಾಗಿದೆ.

 

 

 

 

 

 

ಭೂಸ್ವಾಧೀನ ಇಲ್ಲದೆ ಕಾಮಗಾರಿಯನ್ನು ನಡೆಸಿರುವ ಗುತ್ತಿಗೆದಾರರ ವಿರುದ್ಧ ಹಾಗೂ ಸಂಬಂಧಪಟ್ಟ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯಪಾಲಕ ಇಂಜಿನಿಯರ್ ರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದರು.

 

 

 

 

ಮಾಜಿ ಶಾಸಕ ಮಸಾಲೆ ಜಯರಾಮ್ ಅವರು ಮಾತನಾಡಿ ರಕ್ತಕೊಟ್ಟೆವಾದರೂ ನೀರು ಬಿಡೆವು ಯಾರಾದರೂ ಕಾಮಗಾರಿ ಮಾಡಲು ಬಂದಾಗ ಅಲ್ಲಿಯೇ ಅವರನ್ನು ಹೂತಾಕುವುದಾಗಿ ತಿಳಿಸಿದರು.

 

 

 

 

 

ಈ ಬಾರಿ ಪೈಪುಗಳನ್ನು ಬಂದಂತ ದಾರಿಗೆ ಸುಂಕವಿಲ್ಲದಂತೆ ವಾಪಸ್ ಕಳಿಸಿದ್ದೇವೆ ಮತ್ತೆ ಏನಾದರೂ ಬಂದರೆ ಖಂಡಿತ ಲಾರಿಗಳಿಗೆ ಬೆಂಕಿ ಇಟ್ಟು ಸುಡುವುದಾಗಿ ಎಚ್ಚರಿಕೆ ನೀಡಿದರು.

 

 

 

 

 

 

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಪ್ರಭಾಕರ, ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್, ಹೊಸಹಳ್ಳಿಯ ಕುಮಾರಸ್ವಾಮಿ,ಕೆಪಿ ಮಹೇಶ್ ಹರೀಶ ಫೋಟೋ ಸ್ಟುಡಿಯೋ ಮಾಲೀಕ ರಾವ್,ಆಟೋ ನವೀನ್, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!
Exit mobile version