ಕೊರಟಗೆರೆ – ಮನೆಗಳ ಬೀಗ ಒಡೆದು ಕಳ್ಳತನ ಮಾಡುತ್ತಿದ್ದ ದಾವಣಗೆರೆ ಮೂಲದ ವ್ಯಕ್ತಿಯನ್ನು ಕೊರಟಗೆರೆ ಠಾಣೆಯ ಪೋಲೀಸರು ಬಂಧಿಸಿ ಆತನಿಂದ 1.80 ಲಕ್ಷ ಬೆಲೆ ಬಾಳುವ ಮಾಂಗಲ್ಯ ಸರ ವಶಪಡಿಸಿಕೊಂಡಿದ್ದಾರೆ.
ಸೆರೆ ಸಿಕ್ಕ ಆರೋಪಿಯನ್ನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕಬ್ಬೀಕೆರೆ ಗ್ರಾಮದ ಧರ್ಮರಾಜ್ (46) ಎಂದು ಗುರುತಿಸಲಾಗಿದೆ.
ಹತ್ತು ವರ್ಷದ ಹಿಂದೆ ಕೊರಟಗೆರೆ ತಾಲ್ಲೂಕಿನ ನೇಗಲಾಲ ಗ್ರಾಮದ ನಾಗರಾಜು ಎಂಬುವವರ ಮನೆಯಲ್ಲಿ 2011 ಆ 2 ರಂದು ಕಳ್ಳತನ ನಡೆದಿದ್ದ ಬಗ್ಗೆ ಕೊರಟಗೆರೆ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಇವರ ಮನೆಯಲ್ಲಿ 89 ಸಾವಿರ ಹಣ .40 ಗ್ರಾಂ ತೂಕದ ಅವಲಕ್ಕಿ ಸರ .40 ಗ್ರಾಂನ ಮಾಂಗಲ್ಯ ಸರ 12 ಗ್ರಾಂ ತೂಕದ 3 ಜೊತೆ ಕಿವಿ ಓಲೆ .4 ಗ್ರಾಂ ತೂಕದ ಕೆನ್ನೆ ಜೈನು .4 ಗ್ರಾಂ ತೂಕದ ಬಂಗಾರದ ಲೋಲಾಕುಗಳನ್ನು ದೋಚಲಾಗಿತ್ತು .ಇವುಗಳ ಒಟ್ಟು ಮೌಲ್ಯ 2.50 ಲಕ್ಷ ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಕೈಗೊಂಡ ಪೋಲಿಸರು ಕಾರ್ಯಚರಣೆ ನಡೆಸಿ ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಧರ್ಮರಾಜ್ ವಿರುದ್ಧ ಬನವಾಸಿ .ಚಿಕ್ಕಮಗಳೂರು .ದಾವಣಗೆರೆ. ಕುಂದಾಪುರ .ಬಾಗಲಕೋಟೆ .ಅಜ್ಜಂಪುರ .ಶಿರಸಿ .ಚಿತ್ತೂರು .ಆಂದ್ರಪ್ರದೇಶದ ಅನಂತಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಈತ ಪೋಲೀಸರಿಗೆ ಸಿಗದೆ ತಲೆಮರೆಸಿಕೊಂಡು ಬೇರೆ ಬೇರೆ ಕಡೆ ನೆಲೆಸುತ್ತಿದ್ದನು.ಸದ್ಯ ಆರೋಪಿ ಸಿಕ್ಕಿದು ಆರೋಪಿಯನ್ನು ಎಸ್ಪಿ ಹಾಗೂ ಎಎಸ್ಪಿ ಅವರ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ಪ್ರವೀಣ್ .ಸಿಪಿಐ ಎಫ್ ಕೆ ನದಾಫ್ ನೇತ್ರತ್ವದಲ್ಲಿ ಕೋಳಾಲ ಠಾಣೆ ಪಿಎಸೈ ನವೀನ್ ಕುಮಾರ್ .ಹಾಗೂ ಸಿಬ್ಬಂದಿಗಳಾದ ಮೋಹನ್ ಕುಮಾರ್ .ಪುಟ್ಟಸ್ವಾಮಿ. ಮಂಜುನಾಥ್. ಗಂಗಾಧರ್ .ಅವರುಗಳು ಬಂಧಿಸಿದ್ದಾರೆ.