ತುಮಕೂರು ನಗರದ ಪ್ರಸಿದ್ಧ ದೇವಾಲಯದಲ್ಲಿ ದರೋಡೆ ಪ್ರಕರಣ ತಡವಾಗಿ ಬೆಳಕಿಗೆ.
ತುಮಕೂರು – ತುಮಕೂರು ನಗರದ ಪ್ರಸಿದ್ಧ ದೇವಾಲಯ ಒಂದರಲ್ಲಿ ದರೋಡೆ ನಡೆದಿದ್ದು ದರೋಡೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತುಮಕೂರು ನಗರದ ಸಿರಾ ಗೇಟ್ ಬಳಿ ಇರುವ ಶ್ರೀ ಮಹಾವೀರ ಸ್ವಾಮಿ ಜೈನ ಶ್ವೇತಾಂಬರ ಆಗಮ ಮಂದಿರದಲ್ಲಿ ಗುರುವಾರ ರಾತ್ರಿ ದರೋಡೆ ನಡೆದಿದೆ.
ಗುರುವಾರ ರಾತ್ರಿ ದೇವಾಲಯಕ್ಕೆ ನುಗ್ಗಿರುವ ಮೂವರು ದರೋಡೆ ಕೋರಲು ಮುಖಕ್ಕೆ ಕಪ್ಪು ಬಣ್ಣದ ಬಟ್ಟೆ ಸುತ್ತಿಕೊಂಡು ದರೋಡೆ ಮಾಡಿದ್ದು.
ದೇವಾಲಯದ ಪ್ರಮುಖ ವಿಗ್ರಹದ ಮೇಲೆ ಇದ್ದ ಚಿನ್ನ ಹಾಗೂ ಬೆಳ್ಳಿಯ ಕಿರೀಟ, ಹಣೆಗೆ ಕಟ್ಟಿದ್ದ ಚಿನ್ನದ ಪಟ್ಟಿ , ಆರತಿ ತಟ್ಟೆ ಸೇರಿದಂತೆ ಸಾಕಷ್ಟು ಆಭರಣಗಳನ್ನ ಕದ್ದುಯ್ದಿರುವ ಘಟನೆ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ನಡೆದಿರುವ ಸ್ಥಳ ಜನನಿಬಿಡ ಪ್ರದೇಶವಾಗಿದ್ದು ದೇವಾಲಯದ ಮುಂಭಾಗದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳ ವಸತಿಗೃಹಗಳು ಇದ್ದು ಅದರ ಮುಂದೆ ಇದ್ದ ದೇವಾಲಯದಲ್ಲಿ ಘಟನೆ ನಡೆದಿದೆ.
ಘಟನೆಯಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮೌಲ್ಯವುಳ್ಳ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕದ್ದಿರುವ ಕಳ್ಳರಿಗೆ ಪೊಲೀಸರು ಬಲೆ ಬೀಸಿದ್ದು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ಕೈಗೊಂಡಿದ್ದಾರೆ ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.