ತುಮಕೂರು ಜಿಲ್ಲಾ ಆಸ್ಪತ್ರೆಯ ಅರ್ . ಎಂ.ಓ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಕೆ. ನೊಂದ ನೌಕರರ ಹೋರಾಟಕ್ಕೆ ಸಿಗಲಿದೆಯಾ ಜಯ…??

ತುಮಕೂರು ಜಿಲ್ಲಾ ಆಸ್ಪತ್ರೆಯ ಅರ್ . ಎಂ.ಓ ವಿರುದ್ಧ ಕ್ರಮಕ್ಕೆ ದೂರು ಸಲ್ಲಿಕೆ. ನೊಂದ ನೌಕರರ ಹೋರಾಟಕ್ಕೆ ಸಿಗಲಿದೆಯಾ ಜಯ…??

 

 

 

ತುಮಕೂರು_ ಜಿಲ್ಲಾ ಆಸ್ಪತ್ರೆಯ ಆರ್‌ಎಂಒ ವಿರುದ್ಧ ಸಚಿವರು, ಡೀಸಿಗೆ ಕ್ರಮಕ್ಕೆ ವರದಿ ಆರ್‌ಎಂಒ ಡಾ.ಚೇತನ್ ತಮ್ಮ ಪಾಲಿನ ಕೆಲಸ ಬಿಟ್ಟು ಕೆಲಸಕ್ಕೆ ಬಾರದ ಮಿಕ್ಕೆಲ್ಲಾ ಕೆಲಸಮಾಡಲು ತುದಿಗಾಲಲ್ಲಿ ನಿಂತಿರುತ್ತಾರೆ, ಇವರ ಕರ್ತವ್ಯ ನಿರ್ಲಕ್ಷ, ನೌಕರರಿಗೆ ತೊಂದರೆ, ಸಂಬಳ ನೀಡಲು ವಿಳಂಬ, ಜಂಟಿ ಖಾತೆ ಇರುವ ಚೆಕ್ ಗಳಿಗೆ ಸಹಿ ಹಾಕಲು ಮೀನಾಮೇಷ, ಆಸ್ಪತ್ರೆಗೆ ಆಮ್ಲಜನಕ ಪೂರೈಸುವ ಸಂಸ್ಥೆಗೆ ಹಣ ನೀಡಲು ಸಲ್ಲದ ತಕರಾರು ತೆಗೆಯುವುದು, ಆಡಳಿತದಲ್ಲಿ ಹೊಂದಾಣಿಕೆ ಇಲ್ಲದಿರುವುದು ಸೇರಿದಂತೆ ಹತ್ತು ಅಂಶಗಳ ವರದಿಯನ್ನು ಜಿಲ್ಲಾಸ್ಪತ್ರೆಜಿಲ್ಲಾ ಶಸ್ತ್ರ ಚಿಕಿತ್ಸಕರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದಾರೆ, ಅಲ್ಲದೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಆ‌ರ್.ಎಂಬ ಜೊತೆ ಕೆಲಸ ಮಾಡಲು ಆಗಲ್ಲ, ಅವರು ಜಿಲ್ಲಾಸ್ಪತ್ರೆಗೆ ಕೆಟ್ಟ ಹೆಸರು ತರಲಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ.

 

 

ಇನ್ನು ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಮೇಲೆ ಆರೋಪಗಳು ಹೊಸದೇನಲ್ಲ ಇವರ ಮೇಲೆ ಜಿಲ್ಲಾ ಆಸ್ಪತ್ರೆಯ ನೌಕರರ ದೂರುಗಳ ಸರಮಾಲೆಯ ಹಿರಿಯ ಅಧಿಕಾರಿಗಳಿಗೆ ತಲೆನೋವು ತಂದಿದ್ದು ಜಿಲ್ಲಾಸ್ಪತ್ರೆಯ ಸಿಬ್ಬಂದಿಗಳು ಹಾಗೂ ಹಿರಿಯ ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಜಿಲ್ಲಾ ಆಸ್ಪತ್ರೆಯ ವ್ಯವಸ್ಥೆ ಗೆ ದೊಡ್ಡ ಪೆಟ್ಟು ಬಿದ್ದಿದೆ ಎಂದರೆ ತಪ್ಪಾಗಲಾರದು.

 

 

ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವ‌ರ್ ಕೂಡ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ, ಅಲ್ಲದೆ ಜಿಲ್ಲಾಧಿಕಾರಿಗಳು ಸಹ ಆರೋಗ್ಯ ಇಲಾಖೆ ಆಯುಕ್ತರಿಗೆ ವರದಿ ಸಲ್ಲಿಸಿದ್ದು, ಸ್ಥಾನೀಯ ವೈದ್ಯಾಧಿಕಾರಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

 

 

 

 

 

ಅದೇನೆಯಿರಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹೊರಗುತ್ತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ  ನೌಕರರಿಗೆ ಸಂಬಳ ನೀಡದೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ  ಹಾಗು ದಲಿತ ಸಮುದಾಯಕ್ಕೆ ಸೇರಿದ ನೌಕರರನ್ನು ಟಾರ್ಗೆಟ್ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು  ದೂರು ಸಹ ಹಿರಿಯ ಅಧಿಕಾರಿಗಳಿಗೆ  ಸಲ್ಲಿಕೆಯಾಗಿತ್ತು.

 

 

 

ಇದರ ನಡುವೆ  ಶುರುವಾದ ಮುಸುಕಿನ ಗುದ್ದಾಟ ಈಗ ಜಿಲ್ಲಾ ಉಸ್ತುವಾರಿ ಸಚಿವರ ಅಂಗಳಕ್ಕೆ ತಲುಪಿದ್ದು ಮುಂದೆ ಯಾವ ರೀತಿಯ ಕ್ರಮ ಆಗಲಿದೆ ಎಂದು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You cannot copy content of this page

Exit mobile version