ಕಾಣೆಯಾಗಿದ್ದ ಇಬ್ಬರು ಮಕ್ಕಳು ಚಾನಲ್ನಲ್ಲಿ ಶವವಾಗಿ ಪತ್ತೆ.
ತುಮಕೂರು _ ನೆನ್ನೇ ಸಂಜೆ ನಾಪತ್ತೆ ಆಗಿದ್ದ ಇಬ್ಬರು ಮಕ್ಕಳು ಎತ್ತಿನಹೊಳೆ ಯೋಜನೆ ಚಾನಲ್ ಗೆ ಬಿದ್ದು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಹುಚ್ಚನ ಹಟ್ಟಿ,ಗೊಲ್ಲರ ಹಟ್ಟಿಯ ಇಬ್ಬರು ಮಕ್ಕಳು ಹುಚ್ಚನ ಹಟ್ಟಿಯ ಬೈಪಾಸ್ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ.
ಮೃತ ಪಟ್ಟ ಮಕ್ಕಳನ್ನು ಎರಡನೇ ತರಗತಿಯ ವಿದ್ಯಾರ್ಥಿ ಯದುವೀರ್ ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿ ಮನೋಹರ್ ಎಂದು ಗುರುತಿಸಲಾಗಿದೆ.
ಇನ್ನು ಮಕ್ಕಳ ಶವ ಚಾನೆಲ್ ನಲ್ಲಿ ಪತ್ತೆಯಾದ ಬೆನ್ನಲ್ಲೇ ಸ್ಥಳದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದಾರೆ.
ನೆನ್ನೆ ಸಂಜೆ ಶಾಲೆಗೆ ತೆರಳಿದ ವಿದ್ಯಾರ್ಥಿಗಳು ಮನೆಗೆ ಮರಳಿದ ನಂತರ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದರು ಮಕ್ಕಳು ನಾಪತ್ತೆ ಹಿನ್ನೆಲೆ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಾಲೂಕು ದಂಡಾಧಿಕಾರಿ ಹಾಗೂ ಡಿವೈಎಸ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.
ತಿಪಟೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ