ಅತ್ತೆ ಮೇಲೆ ಹಲ್ಲೆ ನಡೆಸಿದ ಸೊಸೆ ಚಿಕಿತ್ಸೆ ಕೊಡಿಸದೆ ಮನೆಯಲ್ಲೇ ಮೃತಪಟ್ಟ ಅತ್ತೆ ಪ್ರಕರಣ ದಾಖಲು.
ತುಮಕೂರು _ ಕೇವಲ7000 ಹಣದ ವಿಷಯಕ್ಕೆ ಅತ್ತೆ ಹಾಗೂ ಸೊಸೆ ಮಧ್ಯೆ ಶುರುವಾದ ಗಲಾಟೆಯಲ್ಲಿ ಸೊಸೆ ಅತ್ತೆಯನ್ನು ಹಲ್ಲೆ ಮಾಡಿದ ಪರಿಣಾಮ ಅತ್ತೆ ಮೃತಪಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.
ಘಟನೆಯು ತುಮಕೂರು ತಾಲೂಕಿನ ಹೆಬ್ಬೂರು ಹೋಬಳಿಯ ಕಲ್ಲು ಪಾಳ್ಯ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತ ರನ್ನ 60 ವರ್ಷ ವಯಸ್ಸಿನ ಕೆಂಪಮ್ಮ ಎಂದು ಗುರುತಿಸಲಾಗಿದ್ದು ಅತ್ತೆಯನ್ನು ಕೊಲೆ ಮಾಡಿದ ಆರೋಪಿ ಸೊಸೆ ಉಮಾದೇವಿಯನ್ನ್ನು ಸದ್ಯ ಪೊಲೀಸರು ಬಂದಿಸಿದ್ದಾರೆ.
ಘಟನೆಯ ವಿವರ.
ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿದ್ದ ರೂ.7000 ನಗದನ್ನ ಉಮಾದೇವಿ ತಂಗಿ ಪಲ್ಲವಿ ಖಾತೆಗೆ ಪಕ್ಕದ ಮನೆಯವರ ಮೂಲಕ ಫೋನ್ ಪೇ ಮಾಡಿಸಿದ ವಿಚಾರವಾಗಿ ಅತ್ತೆ ಹಾಗೂ ಸೊಸೆ ನಡುವೆ ಜಗಳ ಶುರುವಾಗಿದ್ದು.
ಇದನ್ನೇ ತಪ್ಪಾಗಿ ತಿಳಿದ ಸೊಸೆ ಉಮಾದೇವಿ ತನ್ನ ಗಂಡ ರಾಜೇಶನಿಗೆ ಹಣ ನೀಡಿದ ವಿಚಾರವನ್ನ ನೀನೇ ಹೇಳಿದ್ದೀಯಾ ಎಂದು ಅತ್ತೆ ಮೇಲೆ ಮನಸ್ಸು ಇಚ್ಚೆ ಹಿಟ್ಟಿನ ಕೋಲಿನ ಮೂಲಕ ಹಲ್ಲೆ ಮಾಡಿದ ಪರಿಣಾಮ ಕೆಂಪಮ್ಮಗೆ ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಕೆಂಪಮ್ಮನ ಆಸ್ಪತ್ರೆಗೆ ಸೇರಿಸಿ ತಾತ್ಕಾಲಿಕ ಚಿಕಿತ್ಸೆ ಕೊಡಿಸಲಾಗಿತ್ತು.
ಆರೋಪಿ ಉಮಾದೇವಿ
ಗಂಭೀರವಾಗಿ ಗಾಯಗೊಂಡಿದ್ದ ಕೆಂಪಮ್ಮ ಅವರಿಗೆ ಐಸಿಯುನಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿ ಹೇಳಿದರು ಸಹ ಯಾವುದನ್ನು ಲೆಕ್ಕಿಸದೆ ಸೊಸೆ ಅತ್ತೆಯನ್ನು ಮನೆಗೆ ಕರೆದು ಕೊಂಡು ಹೋದ ಪರಿಣಾಮ ಅತ್ತೆ ಕಲ್ಲು ಪಾಳ್ಯದ ಮನೆಗೆ ತೆರಳಿದ ನಂತರ ಮೃತಪಟ್ಟಿದ್ದು ನಂತರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಂತರ ಸ್ಥಳೀಯರು ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಬಂಧಿಸಿದ್ದಾರೆ.
ಘಟನಾ ಸ್ಥಳಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ , ಡಿವೈಎಸ್ಪಿ ಚಂದ್ರಶೇಖರ್ ಸರ್ಕಲ್ ಇನ್ಸ್ಪೆಕ್ಟರ್ ರಾಮ್ ಪ್ರಸಾದ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.