ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ವಿರುದ್ಧದ ಅಲೆ ಎದ್ದಿದೆ -ಮಾಜಿ ಶಾಸಕ ಚೆಲುವರಾಯಸ್ವಾಮಿ.

ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ವಿರುದ್ಧದ ಅಲೆ ಎದ್ದಿದೆ -ಮಾಜಿ ಶಾಸಕ ಚೆಲುವರಾಯ ಸ್ವಾಮಿ.

 

ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಅಲೆ ಎದ್ದಿದೆ ಈ ಮೂಲಕ ಮುಂದಿನ ದಿನದಲ್ಲಿ ದೇಶ ಹಾಗೂ ರಾಜ್ಯದ ಜನತೆ ಬಿಜೆಪಿ ಸರ್ಕಾರವನ್ನು ತಿರಸ್ಕಾರ ಮಾಡಲಿದ್ದಾರೆ ಎಂದು ನಾಗಮಂಗಲದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿ ತಿಳಿಸಿದ್ದಾರೆ.

 

ಮಧುಗಿರಿಯ ಮಾಜಿ ಶಾಸಕ ಕೆ ಎನ್ ರಾಜಣ್ಣ ರವರ ಮನೆಗೆ ಭೇಟಿ ನೀಡಿದ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

 

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

 

 

ಬೆಲೆ ಏರಿಕೆ ,ರೈತರ ವಿರೋಧಿ ಕಾಯ್ದೆಗಳು ಹಾಗೂ ರೈತರ ಪ್ರತಿಭಟನೆ ಸಮಯದಲ್ಲಿ ಮೃತಪಟ್ಟ ರೈತರು ಹಾಗೂ ಇತ್ತೀಚಿಗೆ ನಡೆದ ವಿವಿಧ ಉಪಚುನಾವಣೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಜನತೆ ತಿರಸ್ಕರಿಸಿರುವುದು ಇದಕ್ಕೆ ಸಾಕ್ಷಿ ಎಂದರು.

 

 

 

ರೈತರ ಮಾರಕ ಕೃಷಿ ಕಾಯ್ದೆಗಳನ್ನು ಜಾರಿಗೆ ತಂದ ಸಮಯದಲ್ಲಿ ದೇಶದ ಉದ್ದಗಲಕ್ಕೂ ರೈತರು ಸಾಕಷ್ಟು ಪ್ರತಿಭಟನೆ ಮಾಡಿದರು ಇಂತಹ ಸಮಯದಲ್ಲಿ 700ಕ್ಕೂ ಹೆಚ್ಚು ರೈತರು ಮೃತಪಟ್ಟರು, ಬೆಲೆ ಏರಿಕೆ ವಿರುದ್ಧ ದೇಶದ ಜನತೆ ಬೀದಿಗಿಳಿದು ಸಾಕಷ್ಟು ಪ್ರತಿಭಟನೆ ಮಾಡಿದರು ಆದರೂ ಎಚ್ಚೆತ್ತುಕೊಳ್ಳದ ಸರ್ಕಾರ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದು ತಿಳಿದ ತಕ್ಷಣ ಪೆಟ್ರೋಲ್ ,ಡೀಸೆಲ್ ಹಾಗೂ ಕೆಲ ದಿನ ಉಪಯೋಗಿ ವಸ್ತುಗಳ ಬೆಲೆಯನ್ನು ಕಡಿಮೆ ಮಾಡಿ , ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳು ಪಡೆದಿರುವುದು ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.

 

ಮುಂದಿನ ದಿನದಲ್ಲಿ ಕರ್ನಾಟಕ ರಾಜ್ಯದಲ್ಲೂ ಸಹ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ತಿರಸ್ಕಾರ ಮಾಡಲಿದ್ದಾರೆ.

 

 

ಇನ್ನು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಕೊಂಚ ಪ್ರಬಲವಾಗಿರುವುದರಿಂದ ತುಮಕೂರಿನಲ್ಲಿ ಸ್ಥಳೀಯ ಸಂಸ್ಥೆಯ ವಿಧಾನಪರಿಷತ್ ಚುನಾವಣೆಗೆ ಕೆಏಎಸ್ ಅಧಿಕಾರಿಯೊಬ್ಬರನ್ನು ಸ್ವಯಂನಿವೃತ್ತಿ ನೀಡುವಂತೆ ಮಾಡಿ ಚುನಾವಣೆಗೆ ನಿಲ್ಲಿಸಿದ್ದಾರೆ.

 

ಚುನಾವಣೆಗೆ ಸ್ಪರ್ಧಿಸಿರುವ ಮಾಜಿ ಕೆಎಎಸ್ ಅಧಿಕಾರಿಯೊಬ್ಬರು ಕೇವಲ 10 ವರ್ಷದಲ್ಲಿ 500 ಕೋಟಿ ಯಷ್ಟು ಆಸ್ತಿ ಮಾಡಿದ್ದಾರೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಆಸ್ತಿ ಮಾಡಿದ್ದಾದರೂ ಹೇಗೆ ಎನ್ನುವುದು ಎಲ್ಲರಲ್ಲೂ ಆಶ್ಚರ್ಯ ತಂದಿದೆ

 

 

ಮುಂದಿನ ನಾಲ್ಕೈದು ದಿನದಲ್ಲಿ ಹಣದ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದಾರೆ ನಂತರ ಇದರ ಬಗ್ಗೆ ಮುಂದಿನ ದಿನದಲ್ಲಿ ಮಾಹಿತಿ ಸಿಗಲಿದೆ.

 

ಅದೇನೇ ಇರಲಿ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಸಾಕಷ್ಟು ಹಿರಿಯ ನಾಯಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್ ರಾಜೇಂದ್ರ ಪರ ಪ್ರಚಾರ ಮಾಡಿದ್ದು ರಾಜೇಂದ್ರ ಅವರು ಈ ಬಾರಿಯ ಚುನಾವಣೆಯಲ್ಲಿ ಗೆಲ್ಲುವುದು ಶತಸಿದ್ಧ.

 

ಆರ್ ರಾಜೇಂದ್ರ ರವರು ಕರೋನ ಸಂಕಷ್ಟದಲ್ಲಿ ಹಾಗೂ ಕಳೆದ ಚುನಾವಣೆಯಲ್ಲಿ ಸೋತ ನಂತರವೂ ಸಹ ಸಾರ್ವಜನಿಕರೊಂದಿಗೆ ಸಾಕಷ್ಟು ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗಿ ಬಡವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಈ ಮೂಲಕ ಯುವ ನಾಯಕರಾಗಿರುವ ರಾಜೇಂದ್ರ ಅವರು ಚುನಾವಣೆಯಲ್ಲಿ ಗೆಲ್ಲಲಿದ್ದಾರೆ ಎಂದು ತಿಳಿಸಿದ್ದಾರೆ.

 

 

 

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ ಎನ್ ರಾಜಣ್ಣ ,ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಆರ್ ರಾಜೇಂದ್ರ, ಮಾಜಿ ವಿಧಾನ ಪರಿಷತ್ ಸದಸ್ಯ ಮನೋಹರ್ ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!