ತುಮಕೂರು ನಗರ ವಿ ಸಭಾ ಕ್ಷೇತ್ರಕ್ಕೆ ಎನ್ ಗೋವಿಂದರಾಜು ಹೆಸರು ಘೋಷಣೆ ಮಾಡಿದ : ಹೆಚ್.ಡಿ.ಕೆ.

ತುಮಕೂರು ನಗರ ವಿ ಸಭಾ ಕ್ಷೇತ್ರಕ್ಕೆ ಎನ್ ಗೋವಿಂದರಾಜು ಹೆಸರು ಘೋಷಣೆ ಮಾಡಿದ : ಹೆಚ್.ಡಿ.ಕೆ.

ತುಮಕೂರು : ತುಮಕೂರು ನಗರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾರೆಂದು ಕಾರ್ಯಕರ್ತರಲ್ಲಿ, ಪಕ್ಷದ ಮುಖಂಡರುಗಳಲ್ಲಿ, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು, ಅದಕ್ಕೆ ಕಾರಣ ಇತ್ತಿಚೆಗೆ ಅಟಿಕಾ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿ ಬಾಬು @ ಅಟ್ಟಿಕಾ ಬಾಬು.

 

 

 

 

ಹೌದು ಇತ್ತೀಚೆಗೆ ತುಮಕೂರು ನಗರಕ್ಕೆ ಆಗಮಿಸಿದ್ದ ಬೊಮ್ಮನಹಳ್ಳಿ ಬಾಬು ತಾನು ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗುತ್ತಿದ್ದೇನೆ, ನನಗೆ ತುಮಕೂರು ಗ್ರಾಮಾಂತರ ಶಾಸಕರಾದ ಗೌರಿಶಂಕರ್ ಹಾಗೂ ಕುಮಾರಣ್ಣನ ಅಪಾರವಾದ ಬೆಂಬಲ ದೊರಕಿದೆ ಆದುದರಿಂದ ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ಹೇಳಿಕೆಯನ್ನು ನೀಡಿದ್ದರು.

 

 

 

 

ಅವರ ಹೇಳಿಕೆಯನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬರುತ್ತಿದ್ದ ಗೋವಿಂದರಾಜುಗೆ ತಮ್ಮ ಹಾದಿ ಸುಗಮವಾಗಿ ಅದಕ್ಕೆ ವೇದಿಕೆಯಾಗಿದ್ದೇ ಜೆಡಿಎಸ್‌ನ ಪಂಚರತ್ನ ರಥ ಯಾತ್ರೆಯಲ್ಲಿ. ಹೆಚ್.ಡಿ.ಕುಮಾರಸ್ವಾಮಿಯವರು ತುಮಕೂರು ನಗರಕ್ಕೆ ಆಗಮಿಸುತ್ತಿದ್ದಂತೆ ಸಿದ್ಧಗಂಗಾ ಶ್ರೀಗಳ ಗದ್ದುಗೆ ದರ್ಶನ ಮಾಡಿ ಬಂದು ಮಾದ್ಯಮದವರೊಂದಿಗೆ ಮಾತನಾಡಿದರು.

 

 

 

ಈ ಸಂದರ್ಭದಲ್ಲಿ ಜನರಲ್ಲಿ ಯಾವುದೇ ರೀತಿಯಾದ ಗೊಂದಲ ಬೇಡ ತುಮಕೂರು ನಗರಕ್ಕೆ ಗೋವಿಂದರಾಜು ಅವರೇ ಅಭ್ಯರ್ಥಿಯಾಗಿದ್ದು ಎಲ್ಲರೂ ಅವರಿಗೆ ಸಹಕರಿಸುವಂತೆ ಕೋರಿದರು. ಇತ್ತ ಗೋವಿಂದರಾಜು ರವರ ಮುಖದಲ್ಲಿಯೂ ಸಹ ಮಂದಹಾಸ ಮೂಡಿದ್ದು, ಇಷ್ಟು ದಿನ ಇದ್ದ ಗೊಂದಲಗಳಿಂದ ಹೊರ ಬಂದಿರುವ ಗೋವಿಂದರಾಜು ರವರು ಎಲ್ಲರ ವಿಶ್ವಾಸವನ್ನು ಪಡೆದು ಮುನ್ನಡೆಯಬೇಕಾಗಿದೆ.

 

 

 

 

ಇನ್ನು ಅಟಿಕಾ ಬಾಬುರವರು ತುಮಕೂರು ನಗರಕ್ಕೆ ಕೆಲ ತಿಂಗಳುಗಳಿಂದ ಹಲವಾರು ರೀತಿಯಲ್ಲಿ ಬಂಡವಾಳ ಹಾಕುತ್ತಿದ್ದು, ಅದು ಈ ಹೇಳಿಕೆಯಿಂದ ಸಂಪೂರ್ಣ ವ್ಯರ್ಥವಾಗಿದೆ.

 

 

 

ಗೋವಿಂದರಾಜು ರವರು ಇನ್ಮುಂದೆ ತಮ್ಮ ರಾಜಕೀಯ ರಣತಂತ್ರವನ್ನು ಹೇಗೆ ರೂಪಿಸಿಕೊಂಡು ಮತದಾರರನ್ನು ಗೆಲ್ಲುವಲ್ಲಿ ಶ್ರಮಿಸಬೇಕಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!