ಮತ್ತೋರ್ವ ಸಾಮಾಜಿಕ ಕಾರ್ಯಕರ್ತನಿಂದ ದೂರು, ಕುಣಿಗಲ್ ಧನಂಜಯ್ ಗುರೂಜಿಗೂ ಕಂಟಕವಾಗುತ್ತಾ ಹುಲಿ ಉಗುರಿನ ಪೆಂಡೆಂಟ್….????

ಕುಣಿಗಲ್ ಧನಂಜಯ್ ಗುರೂಜಿಗೂ ಕಂಟಕವಾಗುತ್ತಾ ಹುಲಿ ಉಗುರಿನ ಪೆಂಡೆಂಟ್….????

 

 

 

ತುಮಕೂರು _ ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ತೀವ್ರ ಸಂಚಲನ ಉಂಟುಮಾಡಿದ್ದ ಬಿಗ್ ಬಾಸ್ ಸೀಸನ್ ಹತ್ತರ ಆವೃತ್ತಿಯಲ್ಲಿ ಭಾಗವಹಿಸಿದ್ದ ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ರನ್ನ ನೆನ್ನೆ  ಅರಣ್ಯ ಇಲಾಖೆಯ ಅಧಿಕಾರಿಗಳು ಬಿಗ್ ಬಾಸ್ ಮನೆಯಿಂದ ಬಂದಿಸಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು.

 

 

 

ಇದರ ನಡುವೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ಬಳಿಯಲ್ಲಿ ಮತ್ತೆ ಇಬ್ಬರು ಹುಲಿ ಉಗಿರಿನ ಪೆಂಡೆಂಟ್ ಧರಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಇಬ್ಬರು ಯುವಕರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

ಇದುವರೆಗೂ ಹುಲಿ ಉಗುರಿನ ಪೆಂಡೆಂಟ್ ಧರಿಸುವುದು ಫ್ಯಾಶನ್ ಎಂದು ಮಾತಾಡುತ್ತಿದ್ದ ಮಂದಿಯಲ್ಲಿ ಈಗ ನಡುಕ ಶುರುವಾಗಿದ್ದು.

 

 

 

 

ಇದರ ಬೆನ್ನಲ್ಲೇ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಬಿದನಗೆರೆ ಶನಿ ಮಹಾತ್ಮ ದೇವಾಲಯದ ಅರ್ಚಕರಾದ ಧನಂಜಯ್ ಗುರೂಜಿ ರವರ ಕತ್ತಿನಲ್ಲೂ ಸಹ ಹುಲಿ ಉಗುರಿನ ಪೆಂಟೆಂಟ್  ಮಾದರಿಯ ಆಭರಣ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ತೀವ್ರ ಚರ್ಚೆಗೆ ಗ್ರಾಸ ಮಾಡಿದೆ.

 

ಹುಲಿ ಉಗುರು ಮಾದರಿಯ ಚಿನ್ನದ ಪೆಂಡೆಂಟ್ ಧರಿಸಿರುವ ಫೋಟೋಗಳನ್ನು ಸ್ವತಹ ಧನಂಜಯ್ ಗುರೂಜಿ ರವರು ಫೇಸ್ಬುಕ್ ಪೇಜ್ ಅಲ್ಲಿ ಅಪ್ಲೋಡ್ ಮಾಡಿದ್ದಾರೆ.

 

 

ಇನ್ನು ಫೇಸ್ಬುಕ್ ಪೇಜ್ ನಲ್ಲಿ ಅಪ್ಲೋಡ್ ಆಗಿರುವ ಫೋಟೋಗಳಿಗೆ ಸಂಬಂಧಿಸಿದಂತೆ ತುಮಕೂರಿನ ಸಾಮಾಜಿಕ ಕಾರ್ಯಕರ್ತ ಜೆಟ್ಟಿ ಅಗ್ರಾಹಾರ ನಾಗರಾಜು ಎಂಬುವವರು ತುಮಕೂರಿನ ವಲಯ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು ಕುಣಿಗಲ್ ನ ಬಿದನಗೆರೆ ದೇವಾಲಯದ ಅರ್ಚಕ ಧನಂಜಯ್ ಗುರೂಜಿ ರವರು ಧರಿಸಿರುವ ಹುಲಿ ಉಗುರು ಮಾದರಿಯ ಚಿನ್ನದ ಪೆಂಡೆಂಟ್ ಧರಿಸಿದ್ದು ಅವರು ಧರಿಸಿರುವುದು ಅಸಲಿ ಹುಲಿ ಉಗುರೋ ಅಥವಾ ನಕಲಿ ಉಗುರೋ ಪರಿಶೀಲಿಸಿ ವನ್ಯಜೀವಿಗಳ ಸಂರಕ್ಷಣಾ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿ ದೂರು ಸಲ್ಲಿಸಿದ್ದಾರೆ.

 

 

 

 

ಇನ್ನು ಧನಂಜಯ್ ಗುರೂಜಿ ರವರು ಧರಿಸಿರುವುದು ಅಸಲಿ ಹುಲಿ ಉಗುರೋ ಅಥವಾ ನಕಲಿ ಉಗುರೋ ಎಂಬುದು ಇದುವರೆಗೂ ಸ್ಪಷ್ಟವಾಗದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಧನಂಜಯ್ ಗುರೂಜಿ ರವರ ಮೇಲೂ ಸಹ ಕ್ರಮ ತೆಗೆದುಕೊಳ್ಳುವವರೆ ಕಾದು ನೋಡಬೇಕಿದೆ  .

Leave a Reply

Your email address will not be published. Required fields are marked *

You cannot copy content of this page

error: Content is protected !!