ತುಮಕೂರು ಚುನಾವಣಾ ಫಲಿತಾಂಶಕ್ಕೆ ಕೌಂಟ್ಡೌನ್ ಗೆಲ್ಲುವ ಸೋಲುವ ಅಭ್ಯರ್ಥಿಗಳ ಪರ ವಿರೋಧ ಹೆಚ್ಚಾದ ಬೆಟ್ಟಿಂಗ್ .
ತುಮಕೂರು – 2023ರ ಚುನಾವಣೆಯ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಚುನಾವಣಾ ಫಲಿತಾಂಶಕ್ಕೆ ಕೌಂಟ್ ಡೌನ್ ಶುರುವಾಗಿರುವ ಬೆನ್ನಲ್ಲೇ ತುಮಕೂರಿನಲ್ಲೂ ಸಹ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಇನ್ನು ತಮ್ಮ ಕ್ಷೇತ್ರಗಳಲ್ಲಿ ಗೆಲ್ಲಲೇ ಬೇಕು ಎಂದು ಪಣತೊಟ್ಟಿರುವ ಮೂರು ಪಕ್ಷದ ಅಭ್ಯರ್ಥಿಗಳು ಗೆಲುವಿಗಾಗಿ ಕಸರತ್ತು ನಡೆಸಿ ಚುನಾವಣೆ ಎದುರಿಸಿ ಫಲಿತಾಂಶಕ್ಕೆ ಕಾಯುತ್ತಿರುವುದು ಒಂದೆಡೆಯಾದರೆ ಅವರ ಅನುಯಾಯಿಗಳು ತಮ್ಮ ತಮ್ಮ ನೆಚ್ಚಿನ ನಾಯಕರು ಗೆಲ್ಲಲಿದ್ದಾರೆ ಎನ್ನುವ ಹಿನ್ನೆಲೆಯಲ್ಲಿ ಅವರ ವಿರೋಧಿ ಬಣಗಳ ಮುಂದೆ ಬೆಟ್ಟಿಂಗ್ ಕಟ್ಟುವ ಮೂಲಕ ತಮ್ಮ ಎದುರಾಳಿಗಳನ್ನು ಕಟ್ಟಿ ಹಾಕಲು ಮುಂದಾಗಿದ್ದಾರೆ.
ಇನ್ನು ರಾಜ್ಯದ್ಯಂತ ಮೂರು ಪಕ್ಷದ ಅಭ್ಯರ್ಥಿಗಳ ಪರವಾಗಿ ಮನೆ ಆಸ್ತಿ ಹಣ ಸೇರಿದಂತೆ ಇತರೆ ವಸ್ತುಗಳನ್ನ ಪಣಕ್ಕೆ ಇಡುವ ಮೂಲಕ ಸುದ್ದಿಯಾಗುತ್ತಿರುವ ಬೆನ್ನಲ್ಲೇ ಶುಕ್ರವಾರ ತುಮಕೂರು ನಗರದ ಮರಳುರು ಬಳಿಯ ಕಲ್ಯಾಣ ಮಂಟಪ ಒಂದರ ಬಳಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಗೌರಿಶಂಕರ್ ಆಪ್ತರು ಒಂದುವರೆ ಲಕ್ಷ ಹಣವನ್ನು ಬೆಟ್ಟಿಂಗ್ ಮಾಡಿದ್ದು .
ಅದಕ್ಕೆ ಅವರ ಪ್ರತಿಸ್ಪರ್ಧಿ ಬಿಜೆಪಿಯ ಸುರೇಶ್ ಗೌಡ ರವರು ಸಹ ಗೆಲ್ಲಲಿದ್ದಾರೆ ಎಂದು ಸುರೇಶ್ ಗೌಡ ಅವರ ಆಪ್ತರು ಸಹ ಒಂದೂವರೆ ಲಕ್ಷ ಹಣವನ್ನು ಬೆಟ್ಟಿಂಗ್ ಕಟ್ಟುವ ಮೂಲಕ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಾಯುತ್ತಿದ್ದಾರೆ.
ತುಮಕೂರು ನಗರ ಅಭ್ಯರ್ಥಿಗು ಬೆಟ್ಟಿಂಗ್ ಬಿಸಿ
ತುಮಕೂರು ನಗರ ಬಿಜೆಪಿ ಅಭ್ಯರ್ಥಿಯಾದ ಜಿ.ಬಿ ಜ್ಯೋತಿ ಗಣೇಶ್ ಪರವಾಗಿ ಅವರ ಆಪ್ತರು ಸಹ ಸುಮಾರು 20 ಲಕ್ಷದವರೆಗೆ ತಮ್ಮ ನಾಯಕ ಗೆಲ್ಲಲಿದ್ದಾರೆ ಎಂದು ಬೆಟ್ಟಿಂಗ್ ಕಟ್ಟಿರುವುದು ಗಮನಾರ್ಹ ಸಂಗತಿ.
ಅದೇನೆ ಇರಲಿ, ನಾಳೆ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ನೆಚ್ಚಿನ ನಾಯಕರ ಪರವಾಗಿ ಅವರ ಆಪ್ತರು ಬೆಟ್ಟಿಂಗ್ ಕಟ್ಟುವ ಮೂಲಕ ತಮ್ಮ ತಮ್ಮ ಪ್ರತಿಷ್ಠೆಗಳನ್ನು ತೋರಲು ಮುಂದಾಗಿದ್ದು ಗೆಲುವು ಯಾರಿಗೆ ಸಿಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.