ರಾಜ ಕಾಲುವೆಯಲ್ಲಿ ಆಟೋ ಚಾಲಕ ನಾಪತ್ತೆ, ಪತ್ತೆ ಕಾರ್ಯಕ್ಕೆ ಸಾತ್ ನೀಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್.

ರಾಜ ಕಾಲುವೆಯಲ್ಲಿ ಆಟೋ ಚಾಲಕ ನಾಪತ್ತೆ, ಪತ್ತೆ ಕಾರ್ಯಕ್ಕೆ ಸಾತ್ ನೀಡಿದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್.

 

ತುಮಕೂರು_ತುಮಕೂರು ನಗರದ ರಿಂಗ್ ರಸ್ತೆಯಲ್ಲಿ ಆಟೋ ಚಾಲಕ ಅಮ್ಜದ್ ನಾಪತ್ತೆಯಾಗಿ ಎರಡನೆ ದಿನಕ್ಕೆ ಕಾಲಿಟ್ಟಿದ್ದುಆತನ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಎನ್ ಡಿ ಆರ್ ಎಫ್ ತಂಡದ ವತಿಯಿಂದ ಪತ್ತೆ ಕಾರ್ಯ ಆರಂಭವಾಗಿದ್ದರೂ ಸಹ ಇದುವರೆಗೂ ನಾಪತ್ತೆಯಾಗಿರುವ ಆಟೋ ಚಾಲಕನ ದೇಹ ಪತ್ತೆಯಾಗಿಲ್ಲ.

 

 

ಘಟನೆಗೆ ಸಂಬಂಧಿಸಿದಂತೆ ಎನ್ ಡಿ ಆರ್ ಎಫ್ ತಂಡದಿಂದ ಭಾನುವಾರ ಬೆಳಗ್ಗೆ ತುಮಕೂರಿನ ಹೆಗಡೆ ಕಾಲೋನಿ ಬಳಿಯ ರಾಜಕಾಲುವೆಯಲ್ಲಿ ಎನ್ ಡಿ ಆರ್ ಎಫ್ ತಂಡ ಸತತ ಐದು ಗಂಟೆಗೂ ಹೆಚ್ಚು ಕಾಲ ಆಟೋ ಚಾಲಕನಿಗಾಗಿ ಹುಡುಕಾಟ ನಡೆಸಿದರು ಆದರೆ ಮಧ್ಯಾಹ್ನದ ಹೊತ್ತಿಗೆ ಆತನ ಯಾವುದೇ ಕುರುಹು ಪತ್ತೆಯಾಗದ ಕಾರಣ ಸ್ಥಳೀಯ ಯುವಕರು ಆತನ ಪತ್ತೆಗಾಗಿ ರಾಜ ಕಾಲುವೆಯಲ್ಲಿ ಹುಡುಕಾಟ ಆರಂಭಿಸಿದರು ಇನ್ನು ಸ್ವಯಂಸೇವಕರು ರಾಜಕಾಲುವೆಯಲ್ಲಿ ಆತನಿಗಾಗಿ ಹುಡುಕಾಟದ ವೇಳೆ ಆತ ಧರಿಸಿದ್ದ ಚಪ್ಪಲಿ ದೊರೆತಿದ್ದು ಇದೇ ಸಂದರ್ಭದಲ್ಲಿ ಯುವಕರ ತಂಡಕ್ಕೆ ಬೆಂಬಲವಾಗಿ ನಿಂತ ಸ್ಥಳೀಯ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರು ಸಹ ಯುವಕರೊಂದಿಗೆ ಹೆಜ್ಜೆ ಹಾಕಿ ಯುವಕರಿಗೆ ಸಾತ್ ನೀಡಿದ್ದು ಕಂಡು ಬಂತು.

 

 

ಇನ್ನು ಆಟೋ ಚಾಲಕ ನಾಪತ್ತೆಯಾದಗಿನಿಂದಲೂ ಸಹ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ರವರು ಸ್ಥಳದಲ್ಲೇ ಇದ್ದು ಯುವಕರ ತಂಡದಿಂದ ನಡೆದ ಶೋಧ ಕಾಯಕ್ಕೆ ಸಹಕಾರ ನೀಡಿದ್ದಾರೆ.

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *