ಯುವತಿ ಅನುಮಾನಾಸ್ಪದ ಸಾವು ಪ್ರಕರಣ ಆರೋಪಿತ ವ್ಯಕ್ತಿ ರಾಜೇಂದ್ರ ಕುಮಾರ್ ಬಂಧನ.

ಯುವತಿ ಅನುಮಾನಾಸ್ಪದ ಸಾವು ಪ್ರಕರಣ ,ಆರೋಪಿತ ವ್ಯಕ್ತಿ ರಾಜೇಂದ್ರ ಕುಮಾರ್ ಬಂಧನ.

 

ತುಮಕೂರು_ತುಮಕೂರು ನಗರದ 19 ವರ್ಷದ ಯುವತಿ ಸಾವು ಪ್ರಕರಣದ ಪ್ರಮುಖ ಆರೋಪಿಯಾದ ಚರ್ಚನ ಕಮಿಟಿ ಸದಸ್ಯ ರಾಜೇಂದ್ರ ಕುಮಾರ್ ನನ್ನು ತುಮಕೂರು  ಪೊಲೀಸರು ಬಂಧಿಸಿದ್ದಾರೆ.

 

 

 

ಇನ್ನು ಪ್ರಕರಣದ ಪ್ರಮುಖ ಆರೋಪ ಹೊತ್ತ  ರಾಜೇಂದ್ರ ಕುಮಾರ್ ಹಾಗೂ ಇತರರು ತಲೆಮರೆಸಿಕೊಂಡಿದ್ದರು ಆದರೆ ಕೊನೆಗೂ ತುಮಕೂರು ಪೊಲೀಸರು ಪ್ರಮುಖ ಆರೋಪಿ ರಾಜೇಂದ್ರಕುಮಾರ್ ನನ್ನ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದು ಗುರುವಾರ ಮಧ್ಯಾಹ್ನ ಪ್ರಮುಖ ಆರೋಪಿ ರಾಜೇಂದ್ರಕುಮಾರ್ ನನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

 

 

 

ಕಳೆದ ಮೂರು ತಿಂಗಳ ಹಿಂದೆ ತುಮಕೂರು ನಗರದ 19 ವರ್ಷದ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಪ್ರಮುಖ ಆರೋಪ ಹೊತ್ತ  ರಾಜೇಂದ್ರಕುಮಾರ್ ವಿರುದ್ಧ  ಮೃತ ಯುವತಿಯ ತಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿದ ನಂತರ ಪ್ರಮುಖ ಆರೋಪಿ ರಾಜೇಂದ್ರಕುಮಾರ್ ಎಸ್ಕೇಪ್ ಆಗಿದ್ದ. ತಾಯಿ ದೂರಿನ ಮೇರೆಗೆ ಪ್ರಮುಖ ಆರೋಪಿಯ ಬಂಧನವಾಗಿದೆ ಎನ್ನಲಾಗಿದೆ.

 

 

 

ಯುವತಿಯ ಮರಣೋತ್ತರ ಪರೀಕ್ಷೆ.

ಕಳೆದ ಮೂರು ದಿನಗಳ ಹಿಂದೆ ಯುವತಿಯ ಮೃತದೇಹವನ್ನು ಬೆಂಗಳೂರಿನ ಸ್ಥಳೀಯ ಅಧಿಕಾರಿಗಳು ವೈದ್ಯರು ಹಾಗೂ ಪೊಲೀಸರ ಸಮ್ಮುಖದಲ್ಲಿ ಬೆಂಗಳೂರಿನ ಶಾಂತಿನಗರದ ಭಾರತೀಯ ಕ್ರೈಸ್ತ ಸಮಾಧಿ ಗೇಟ್ ನಲ್ಲಿರುವ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ಮಣ್ಣು ಮಾಡಿದ್ದ ಸ್ಥಳದಿಂದ ಮೃತ್ ದೇಹವನ್ನು ಹೊರತೆಗೆದು ಯುವತಿಯ ದೇಹದಿಂದ ಕೆಲವು ಅಂಗಾಂಗಳನ್ನು ವೈದ್ಯಕೀಯ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದ್ದು ಪರೀಕ್ಷಾ ವರದಿಗಾಗಿ ತನಿಖಾ ತಂಡ ಕಾಯುತ್ತಿದೆ ಎನ್ನಲಾಗಿದೆ.

 

 

ಇದರ ಬೆನ್ನಲ್ಲೇ ಪ್ರಮುಖ ಆರೋಪ ಹೊತ್ತ ರಾಜೇಂದ್ರ ಕುಮಾರ್ ಬಂಧನವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವತಿಯ ತಾಯಿ ಮಾರ್ಚ್ 8ರಂದು ರಾಜೇಂದ್ರ ಕುಮಾರ್  ಹಾಗೂ ಇತರರ ವಿರುದ್ಧ ತುಮಕೂರು ನಗರ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ದೂರು ದಾಖಲಿಸಿದ್ದರು .

Leave a Reply

Your email address will not be published. Required fields are marked *

You cannot copy content of this page

error: Content is protected !!