ಕ್ರೀಡಾಕೂಟದಲ್ಲಿ ಶೌಚಾಲಯ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು, ಅಧಿಕಾರಿಗಳ ನಡೆಗೆ ಬೇಸರ..

ಕ್ರೀಡಾಕೂಟದಲ್ಲಿ ಶೌಚಾಲಯ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು, ಅಧಿಕಾರಿಗಳ ನಡೆಗೆ ಬೇಸರ..

 

 

ತುಮಕೂರು – ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಪ್ರಾರ್ಥಮಿಕ ಹಾಗೂ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ವತಿಯಿಂದ ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ 2023 ಆಯೋಜಿಸಲಾಗಿದ್ದು.

 

 

 

 

 

ಕ್ರೀಡಾಕೂಟಕ್ಕೆ ಜಿಲ್ಲೆಯ ಹಲವು ತಾಲೂಕಿನಿಂದ ಸಾವಿರಾರು ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಸ್ಪರ್ಧೆಗಾಗಿ ಆಗಮಿಸಿದ್ದ ಹಲವು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವರ್ಗದವರಿಗೆ ಸಾರ್ವಜನಿಕ ಶೌಚಾಲಯ ಇಲ್ಲದೆ ಕ್ರೀಡಾಪಟುಗಳು ಬೆಳಗ್ಗೆ ಇಂದ ಮಧ್ಯಾಹ್ನದವರೆಗೂ ಪರದಾಡಿರುವ ಘಟನೆ ಬೆಳಕಿಗೆ ಬಂದಿದ್ದು ಇದರಿಂದ ಬೇಸರಗೊಂಡ ಕ್ರೀಡಾಪಟುಗಳು ಅಧಿಕಾರಿಗಳ ನಡೆಗೆ ಹಿಡಿಶಾಪ ಹಾಕಿದ ಘಟನೆ ವರದಿಯಾಗಿದೆ.

 

 

 

ಇನ್ನು ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆಯಿಂದ ಹಲವು ವಿದ್ಯಾರ್ಥಿಗಳು ಕ್ರೀಡಾಂಗಣಕ್ಕೆ ಆಗಮಿಸಿದ್ದು ಬಹು ಮುಖ್ಯವಾಗಿ ಮಹಿಳಾ ಕ್ರೀಡಾಪಟುಗಳು ಹಾಗೂ ಶಿಕ್ಷಕ ವರ್ಗದವರಿಗೆ ಶೌಚಾಲಯ ಒದಗಿಸಲು ಸಂಬಂಧಪಟ್ಟ ಇಲಾಖೆಗಳು ಸಂಪೂರ್ಣ ವಿಫಲರಾಗಿದ್ದು ಇದರಿಂದ ಬೇಸತ್ತ ಹಲವು ಕ್ರೀಡಾಪಟುಗಳು ಜಿಲ್ಲಾ ಆಡಳಿತ, ಕ್ರೀಡಾ ಇಲಾಖೆ ಹಾಗೂ ಪಾಲಿಕೆ ಅಧಿಕಾರಿಗಳ ನಡೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದು ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗದ ಅಧಿಕಾರಿಗಳು ಯಾವ ಕಾರಣಕ್ಕೆ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸಿದ್ದರೆ ಎಂದು ಅಧಿಕಾರಿಗಳ ನಡುವೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

 

 

 

 

ಇನ್ನು ಇದಕ್ಕೆ ಸಂಬಂಧಿಸಿದಂತೆ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಹಲವು ಶಿಕ್ಷಕರು ಸೇರಿದಂತೆ ಹಲವು ಸ್ಪರ್ಧಿಗಳು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರು  ಸಹ ಶೌಚಾಲಯದ ಬಾಗಿಲು ತೆಗೆಯದೆ ಮಂಡುತನ ಪ್ರದರ್ಶಿಸುವ ಮೂಲಕ  ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!