ರೌಡಿಶೀಟರ್ ಮಾರುತಿ ಅಲಿಯಾಸ್ ಪೊಲಾರ್ಡ್ ಕೊಲೆ ಪ್ರಕರಣ ,ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು…?

ರೌಡಿಶೀಟರ್ ಮಾರುತಿ ಅಲಿಯಾಸ್ ಪೊಲಾರ್ಡ್ ಕೊಲೆ ಪ್ರಕರಣ ,ನಾಲ್ವರು ಆರೋಪಿಗಳು ಪೊಲೀಸರಿಗೆ ಶರಣು….??

 

 

ತುಮಕೂರು – ತುಮಕೂರು ನಗರದ ಹೊರವಲಯದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ರೌಡಿಶೀಟರ್ ಮಾರುತಿ ಅಲಿಯಾಸ್ ಪೊಲಾರ್ಡ್ ಕೊಲೆ ಪ್ರಕರಣಕ್ಕೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಎನ್ನಲಾದ ನಾಲ್ವರು ಪೊಲೀಸರಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

 

 

 

 

ಕಳೆದ ರಾತ್ರಿ ಹಿರೇಹಳ್ಳಿ ಬಳಿಯ ಮಂಚಕಲ್ ಕುಪ್ಪೆಯಲ್ಲಿ ವಾಸವಿದ್ದ ರೌಡಿಶೀಟರ್ ಮಾರುತಿ (34) ಆತನನ್ನ ತುಮಕೂರಿನ ಶಿವಪ್ರಸಾದ್ ಮತ್ತು ಆತನ ಸಂಗಡಿಗರು ಮಂಚಕಲ್ ಕುಪ್ಪೆ ಬಳಿ ಹೋಗಿ ಆತನನ್ನ ವಾಹನದಲ್ಲಿ ಕರೆದುಕೊಂಡು ಬಂದು ತುಮಕೂರು ನಗರದ ಬಂಡಿಮನೆ ಕಲ್ಯಾಣ ಮಂಟಪದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದರು ಎನ್ನಲಾಗಿದೆ.

 

 

 

ಕೊಲೆಯಾಗಿರುವ ಮಾರುತಿ ಅಲಿಯಾಸ್ ಪೊಲಾರ್ಡ್ ಮೂಲತಃ ಮಧುಗಿರಿ ತಾಲೂಕಿನವನಾಗಿದ್ದು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿ ಹಿರೇಹಳ್ಳಿ ಬಳಿಯ ಮಂಚ್ ಕಲ್ಕುಪ್ಪೆಯಲ್ಲಿ ವಾಸವಾಗಿದ್ದನು ಇನ್ನು ಕೊಲೆಯಾಗಿರುವ ಮಾರುತಿ ಮೇಲೆ ಕಳೆದ ಕೆಲವು ವರ್ಷಗಳ ಹಿಂದೆ ನಡೆದಿದ್ದ ಹಟ್ಟಿ ಮಂಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿದ್ದ ಆತನ ವಿರುದ್ಧ ಹಲವು ಠಾಣೆಗಳಲ್ಲಿ ಪ್ರಕರಣಗಳು ಇದ್ದವು ಇನ್ನು ಮಧುಗಿರಿ ತಾಲೂಕಿನ ಕೊಡುಗೆನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿದ್ದ ಎನ್ನಲಾಗಿದೆ.

 

 

 

 

ಸ್ಥಳಕ್ಕೆ ಪೊಲೀಸರ ಬೇಟೆ.

 

ಇನ್ನು ಕೊಲೆ ಮಾಡಿರುವ ಆರೋಪಿಗಳು ಎನ್ನಲಾದ ಶಿವಪ್ರಸಾದ್, ಸಲೀಂ, ಶೈಮೂರ್( ಶೋಯಬ್) ಸ್ವತಹ ತಾವಾಗಿಯೇ ಬಂದು ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಕಳೆದರಾತ್ರಿ ಶರಣಾಗಿದ್ದು ಪ್ರಕರಣ ಬೆಳಕಿಗೆ ಬಂದ ಕೂಡಲೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಡಿಷನಲ್ ಎಸ್ಪಿ ಮರಿಯಪ್ಪ ಡಿವೈಎಸ್ಪಿ ಚಂದ್ರಶೇಖರ್, ಸರ್ಕಲ್ ಇನ್ಸ್ಪೆಕ್ಟರ್ ಪುರುಷೋತ್ತಮ್, ತಿಲಕ್ ಪಾರ್ಕ್ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್  ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

 

 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದ  ಮಂಜು ಸಹ ಭಾನುವಾರ   ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

 

 

 

ತುಮಕೂರು ನಗರದ ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು ಕೊಲೆಗೆ ಕಾರಣ ತಿಳಿದು ಬರಲಿದೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!