ತುಮಕೂರು: ನಗರದ ಶ್ರೀ ಪ್ರಜ್ಞಾಯೋಗ ಕೇಂದ್ರದ ವತಿಯಿಂದ ರಥ ಸಪ್ತಮಿ ಪ್ರಯುಕ್ತ ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ೧೦೮ ಸೂರ್ಯ ನಮಸ್ಕಾರವನ್ನು ಯೋಗ ಗುರುಗಳಾದ ಶ್ರೀ ಮತಿ ರಶ್ಮಿ ಜೋಶಿಯವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಕಾಲೇಜಿನ ಆವರಣದಲ್ಲಿ ಮುಂಜಾನೆ ಏರ್ಪಟ್ಟ ಕಾರ್ಯಕ್ರಮವನ್ನು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಸ್. ಕುಮಾರ್, ಸೂರ್ಯ ಆರೋಗ್ಯ ಮತ್ತು ಐಶ್ವರ್ಯ ದತ್ತ ಎಂಬ ಕಾರಣಕ್ಕೆ ಆತನನ್ನು ಭಕ್ತಿ-ಭಾವದಿಂದ ಪೂಜಿಸಲಾಗುತ್ತದೆ. ಅಲ್ಲದೆ ಬೆಳಗ್ಗಿನ ಸೂರ್ಯನ ಎಳೆಬಿಸಿಲಲ್ಲಿ ದೇಹಕ್ಕೆ ಶಕ್ತಿ ನೀಡುವ, ಪುಷ್ಟಿ ನೀಡುವ ಅಂಶಗಳಿರುವುದರಿಂದ ಉತ್ತಮ ಆರೋಗ್ಯಕ್ಕೆ ಯೋಗ ಮುಖ್ಯ ಎಂದರು.
ಪ್ರಾಣಿ ಸಂಕುಲಗಳೆಲ್ಲವೂ ಬಿಸಿಲಿಗೆ ಮೈ ಒಡ್ಡುವುದನ್ನು ಕಾಣುತ್ತೇವೆ. ಇದು ಪ್ರಕೃತಿಯ ಪಾಠವು-ವರದಾನವಾಗಿದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿದೆ. ಅಲ್ಲದೆ ದೇಹಕ್ಕೆ ಅತ್ಯಗತ್ಯವಾದ ವಿಟಾಮಿನ್ ಡಿ ಅಂಶ ಸೂರ್ಯಕಿರಣದಲ್ಲಿ ಹೇರಳವಾಗಿರುತ್ತದೆ ಎಂದು ಅವರು ಹೇಳಿದರು.
ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ, ಯೋಗ ಗುರು ರಶ್ಮಿ ಜೋಶಿ, ನಗರದ ವಿವಿಧ ಬಡಾವಣೆಯ ಯೋಗಪಟುಗಳು ಈ ’ಸೂರ್ಯ ನಮಸ್ಕಾರ’ದಲ್ಲಿ ಪಾಲ್ಗೊಂಡಿದ್ದರು.
ಪ್ರಪಂಚದ ಮೂಲೆ ಮೂಲೆಗೂ ಬೆಳಕಿನ ಕಾಣಿಕೆಯನ್ನು ಒದಗಿಸಬಲ್ಲ ಸೂರ್ಯ ತನ್ನ ಪಥ ಸಂಚಲನ ಮಾಡುವ ಅಮೃತ ಘಳಿಗೆಯಾದ ರಥಸಪ್ತಮಿ ಆಚರಣೆ ಸೂರ್ಯೋಪಾಸನೆಯ ಪ್ರತೀಕ ಎಂಬ ನಂಬಿಕೆ ಹಿನ್ನಲೆಯಲ್ಲಿ ಈ ’ಸೂರ್ಯ ನಮಸ್ಕಾರ’ ಹಮ್ಮಿಕೊಳ್ಳಲಾಗಿತ್ತು.