ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ಬೌಲರ್’ಸ್ಪಿನ್ ಕಿಂಗ್’ ಶೇನ್ ವಾರ್ನ್ ನಿಧನ.

ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಮಾಜಿ ಬೌಲರ್’ಸ್ಪಿನ್ ಕಿಂಗ್’ ಶೇನ್ ವಾರ್ನ್ ನಿಧನ.

 

 

ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ, ಸ್ಪಿನ್ ಕಿಂಗ್ ಶೇನ್ ವಾರ್ನ್ (52) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

 

52 ವರ್ಷದ ಶೇನ್ ವಾರ್ನ್ ಹೃದಯಾಘಾತವಾಗುತ್ತಿದ್ದಂತೆ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲ ನೀಡದೆ, ವಾರ್ನ್ ಕೊನೆಯುಸಿರೆಳೆದಿದ್ದಾರೆ.

 

ಥಾಯ್ಲೆಂಡ್‌ನ ವಿಲ್ಲಾವೊಂದರಲ್ಲಿ ಶೇನ್​ ವಾರ್ನ್​​​ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಎಲ್ಲ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ ಕೂಡ ಅವರು ಬದುಕುಳಿಯಲಿಲ್ಲ ಎಂದು ವಾರ್ನ್​ ಆಪ್ತ ವಲಯ ತಿಳಿಸಿದೆ.

 

ಸಾರ್ವಕಾಲಿಕ ಶ್ರೇಷ್ಠ ಲೆಗ್​ ಸ್ಪಿನ್ನರ್​​ ಆಗಿದ್ದ ಶೇನ್​ ವಾರ್ನ್​​ ಕ್ರಿಕೆಟ್​​ ಜಗತ್ತಿನಲ್ಲೇ ತಮ್ಮದೇ ಆದ ಛಾಪು ಮೂಡಿಸಿದ್ದರು. ಆಸ್ಟ್ರೇಲಿಯಾ ಪರ 145 ಟೆಸ್ಟ್​​​, 194 ಏಕದಿನ ಹಾಗೂ 73 ಟಿ20 ಪಂದ್ಯಗಳನ್ನಾಡಿರುವ ಇವರು, ಕ್ರಮವಾಗಿ 708, 293 ಹಾಗೂ 70 ವಿಕೆಟ್ ಪಡೆದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!