ರೋಲ್ಸ್ ರಾಯ್ಸ್ ಬ್ರಿಟಿಷ್ ಕಾರ್ ಕಂಪನಿಗೆ ಪ್ರತಿಕಾರ ತೀರಿಸಿಕೊಂಡ ಭಾರತೀಯ ರಾಜನ ಬಗ್ಗೆ ನಿಮಗೆಷ್ಟು ಗೊತ್ತು.?

ರೋಲ್ಸ್ ರಾಯ್ಸ್ ಬ್ರಿಟಿಷ್ ಕಾರ್ ಕಂಪನಿಗೆ ಪ್ರತಿಕಾರ ತೀರಿಸಿಕೊಂಡ ಭಾರತೀಯ ರಾಜನ ಬಗ್ಗೆ ನಿಮಗೆಷ್ಟು ಗೊತ್ತು.?

 

ಮೂಲತಃ ಭಾರತೀಯ ರಾಜರು ಐಷಾರಾಮಿಗಳಾಗಿದ್ದರು, ಶ್ರೀಮಂತಿಕೆಯಲ್ಲಿ ಬ್ರಿಟಿಷ್ ಕಿಂಗ್‌ಗಳನ್ನು ಕೂಡ ಹಿಂದಿಕ್ಕಿದ್ದರು, ವಜ್ರ ಮುತ್ತು ರತ್ನ ಬಂಗಾರವಾಗಲಿ ಅಥವಾ ಐಷಾರಾಮಿ ಕಾರಗಳಲ್ಲಿ ಓಡಾಡುವುದಾಗಲಿ ಯಾವುದೇ ಹಂತದಲ್ಲಿಯೂ ಬ್ರಿಟಿಷ್ ರಾಜರಿಗಿಂತ ಒಂದು ಹೆಜ್ಜೆ ಭಾರತೀಯ ರಾಜರಿದ್ದರು. ಮಹಾರಾಜಾ ಜಯಸಿಂಹ ಪ್ರಭಾಕರ ಎಂಬ ಭಾರತೀಯ ರಾಜ ಐಷಾರಾಮಿ ಕಾರುಗಳನ್ನ ತಯಾರಿಸುವ ಕಂಪನಿಯಾದ ಅದ ರೋಲ್ಸ್ ರಾಯ್ಸ್ ಗೆ ತಕ್ಕ ಪಾಠ ಕಲಿಸಿದ್ದಾರು‌.

 

ಹೌದು ಮಹಾರಾಜಾ ಜಯಸಿಂಹ ಪ್ರಭಾಕರ ತೋರಿಸದ ಪ್ರತಿಷ್ಠೆಗೆ ರೋಲ್ಸ್ ರಾಯ್ಸ್ ಅವರ ಮುಂದೆ ತಲೆಬಾಗಿ ಮಂಡಿಯೂರಿದ್ದರು. ಮಹಾರಾಜ ಪ್ರಭಾಕರ್ ಅವರು ಈಥರ ಮಾಡಿದ್ದಾದರೂ ಯಾಕೆ ಬನ್ನಿ ತಿಳಿಯೋಣ, 1920ರಲ್ಲಿ ಮಹಾರಾಜರ ಜಯಸಿಂಹ ಪ್ರಭಾಕರ್ ಅವರು ಭಾರತದಿಂದ ಲಂಡನ್‌ ನಗರಕ್ಕೆ ಸಮಯ ಕಳೆಯಬೇಕು ಎಂದು ಹೋಗಲು ನಿರ್ಧಾರ ಮಾಡುತ್ತಾರೆ.

 

ಭಾರತದಲ್ಲಿ ಐಷಾರಾಮಿ ಜೀವನವನ್ನು ಅನುಭವಿಸಿದ ನಂತರ ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನವನ್ನು ಅನುಭವಿಸಬೇಕು ಎಂಬ ಕಾರಣದಿಂದಾಗಿ ಅವರು ಆಡಂಬರದ ಬಟ್ಟೆಗಳನ್ನ ಆಗಲಿ ಮತ್ತು ಸೇವಕರನ್ನಾಗಿ ತೆಗೆದುಕೊಂಡು ಹೋಗದೆ, ಒಬ್ಬಂಟಿಯಾಗಿ ಲಂಡನ್ ರಸ್ತೆಯಲ್ಲಿ ಓಡಾಡುತಿದ್ದರು ಹೀಗೆ ಲಂಡನ್ ರಸ್ತೆಯಲ್ಲಿ ಓಡಾಡುತ್ತಿರುವ, ರಸ್ತೆ ಪಕ್ಕದಲ್ಲಿ ರೋಲ್ಸ್ ರಾಯ್ಸ್ ಕಾರ್ ಕಾಣಿಸಿತು, ಪ್ರಭಾಕರ್ ರಾಜ ಅವರು ಐಷಾರಾಮಿ ಕಾರುಗಳ ಪ್ರಿಯರು ಆಗಿದ್ದರು, ನಂತರ ಅಲ್ಲಿಗೆ ತೆರಳಿದ ಭಾರತೀಯ ರಾಜ, ಶೋ ರೂಮ್‌ನಲ್ಲಿ ಹೊಸ ರೋಲ್ಸ್ ರಾಯ್ಸ್ ಕಾರನ್ನು ನೋಡಿದ ಜಯ ಸಿಂಗ್ ಅದನ್ನು ಖರೀದಿಸುವ ತೀರ್ಮಾನ ಮಾಡಿದರು.

 

ಅವರು ಆ ಕಾರನ್ನು ಕೊಳ್ಳಲೇಬೇಕು ಎಂಬ ಉತ್ಸಾಹದಲ್ಲಿ ಆ ಕಾರಿನ ಬೆಲೆ ತಿಳಿದುಕೊಳ್ಳಲು ಪಕ್ಕದಲ್ಲೆ ನಿಂತಿದ್ದ ಬ್ರಿಟಿಷ ಸೇಲ್ಸ್‌ಮನ್‌ಗೆ ಕೇಳಲು ಮುಂದಾದರು ಆಗ ಆ ಸೇಲ್ಸ್‌ಮನ್ ಸಾಮಾನ್ಯರಂತೆ ಕಂಡ ರಾಜನ ಮೇಲೆ ಮೇಲೆ ಕೋಪಗೊಂಡು, ಸಾಮಾನ್ಯ ಭಾರತೀಯ ಪ್ರಜೆ ನೀನು ಇದೆಲ್ಲ ನಿನ್ನಂಥವರು ಖರಿದಿಸಲು ಸಾಧ್ಯವಿಲ್ಲ ಎಂದು ಅವಮಾನಿಸುವ ಮೂಲಕ ಹೊರಗೆ ನಡೆ ಎಂದು ಹೊರ ಹೋಗುವ ದಾರಿಯನ್ನು ತೋರಿಸಿದನು. ಈ ಅವಮಾನವನ್ನು ಸಹಿಸಿಕೊಂಡು ಸುಮ್ಮನೆ ನಿಂತಿದ್ದ ರಾಜ ಜಯಸಿಂಗ್ ರನ್ನ ಕಾರ್ ಶೋರೂಮ್ ನಿಂದ ಹೊರ ಹಾಕಿದರು.

 

ಈ ಘಟನೆಯ ನಂತರ ತನ್ನ ಸಿಟ್ಟನ್ನು ಹಿಡಿತದಲ್ಲಿಟ್ಟುಕೊಂಡು ತನಗೆ ಮಾಡಿದ ಅವಮಾನದ ಸೇಡನ್ನು ಅವಮಾನ ಮಾಡುವ ಮೂಲಕವೇ ತೀರಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ ರಾಜ ಜಯಸಿಂಗ್, ಲಂಡನ್‌ನಲ್ಲಿ ತಂಗಿದ್ದ ಹೋಟೆಲ್‌ಗೆ ವಾಪಸ್ಸಾದ, ನಂತರ ಅಳ್ವಾರ್‌ನ ರಾಜ ರೋಲ್ಸ್ ರಾಯ್ಸ್ ಕಾರು ಖರೀದಿಸಲು ಲಂಡನ್‌ಗೆ ಬರುತ್ತಿದ್ದಾರೆ ಎಂಬ ಸುದ್ದಿಯನ್ನು ಕಾರ್ ಶೋ ರೂಮ್ ನವರಿಗೆ ಮುಟ್ಟಿಸಿ ಎಂದು ಆಜ್ಞೆ ಮಾಡಿದರು. ನಂತರ ರಾಜ ತನ್ನ ಪೋಷಾಕು ಧರಿಸಿ ಕಾರ್ ಶೋ ರೂಮ್ ಮುಂದೆ ಬಂದು ನಿಂತರು, ಆಗ ಅಲ್ಲಿ ಅವರಿಗಾಗಿ, ಕೆಂಪು ರತ್ನಗಂಭಳಿ ಹಾಸಿ ಅತಿ ವಿಜೃಂಭಣೆಯಿಂದ ಸ್ವಾಗತಿಸಿದರು ಶೋರೂಮ್ ಒಳಗೆ ಬರುತ್ತಿದ್ದಂತೆಯೆ ಏಳು ರೋಲ್ಸ್ ರಾಯ್ಸ್ ಕಾರುಗಳನ್ನು ನಗದು ಹಣ ನೀಡಿ ಖರಿದಿಸಿದರು.

 

ಒಂದೇ ಬಾರಿ ಇಷ್ಟೊಂದು ಕಾರ್ ಆರ್ಡರ್ ಮಾಡಿದ್ದನ್ನು ಕಂಡ ಶೋ ರೂಮ್‌ನಲ್ಲಿರುವವರು ಒಂದು ಕ್ಷಣ ದಂಗಾದರು, ಅಷ್ಟೇ ಅಲ್ಲದೆ ಈ ಮುಂಚೆ ಹೊರದಬ್ಬಿದ ಸೇಲ್ಸ್ ಮ್ಯಾನ್‌ಗೆ ಕರೆದು, ಭಾರತದಲ್ಲಿ ಇರೋ ತನ್ನ ಅರಮನೆಗೆ ಮುಟ್ಟಿಸಲು ರಾಜ ಸಲಹೆ ನೀಡಿದರು. ಇಷ್ಟಕ್ಕೆ ಸುಮ್ಮನಿರದ ರಾಜ ಜೈಸಿಂಗ್ ಅಸಲಿ ಆಟ ಈಗ ಶುರುವಾಗುತ್ತೆ, ಆ ಏಳು ಕಾರುಗಳು ಭಾರತಕ್ಕೆ ಬಂದು ಮುಟ್ಟುತ್ತಿದ್ದಂತೆ ರಾಜ ಅವುಗಳನ್ನು ನಗರಪಾಲಿಕೆಗೆ ಕೊಟ್ಟು ಇಂದಿನಿಂದ ಈ ನಗರದ ಪೂರ್ತಿ ಕಸ ಈ ಕಾರುಗಳ ಮೂಲಕ ಸಾಗಬೇಕೆಂಬ ಆದೇಶ ನೀಡಿದರು. ಆಗ ನಗರ ಮಾಲಿಕೆ ಕಾರಿನ ಮುಂದೆ ಹಾಗೂ ಹಿಂದೆ ಪೊರಕೆ ಕಟ್ಟುವ ಮೂಲಕ ರೋಲ್ಸ್ ರಾಯ್ಸ್ ಕಾರನ್ನು ಕಸ ಗುಡಿಸಲು ಬಳಸುತ್ತಿದ್ದರು.

 

ಈ ಸುದ್ದಿ ಪ್ರಪಂಚದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಲು ಶುರುವಾಯಿತು, ಭಾರತೀಯರು ಕಸ ವಿಲೆವಾರಿ ಮಾಡಲು ರೋಲ್ಸ್ ರಾಯ್ಸ್ ಕಾರು ಬಳಸುತ್ತಿದ್ದಾರೆ ಎಂದು ತಿಳಿದ ವಿಶ್ವದ ಅನೇಕ ರಾಷ್ಟ್ರಗಳು ಕಾರನ್ನು ಖರಿದಿಸುವುದನ್ನು ಬಿಟ್ಟವು ಇದರಿಂದ ದಿಢೀರ್ ಆಗಿ ರೋಲ್ಸ್ ರಾಯ್ಸ್ ಮಾರುಕಟ್ಟೆ ಕುಸಿಯಿತು, ಈ ಸುದ್ದಿ ತಿಳಿದ ರೋಲ್ಸ್ ರಾಯ್ಸ್ ಕಂಪನಿಯ ಮಾಲಿಕ ಆಗಿರುವ ಘಟನೆಗೆ ಕ್ಷಮೆ ಕೋರಿ ದಯವಿಟ್ಟು ಕಾರನ್ನು ಕಸದ ವಿಲೇವಾರಿ ಮಾಡಲು ಬಳಸಬೇಡಿ ಎಂದು ಮನವಿ ಮಾಡಿದನು, ನಂತರ ಆರು ಹೊಸ ರೋಲ್ಸ್ ರಾಯ್ಸ್ ಕಾರುಗಳನ್ನು ಭಾರತದ ರಾಜನಿಗೆ ಉಡುಗೊರೆಯಾಗಿ ನೀಡಿತು.

One thought on “ರೋಲ್ಸ್ ರಾಯ್ಸ್ ಬ್ರಿಟಿಷ್ ಕಾರ್ ಕಂಪನಿಗೆ ಪ್ರತಿಕಾರ ತೀರಿಸಿಕೊಂಡ ಭಾರತೀಯ ರಾಜನ ಬಗ್ಗೆ ನಿಮಗೆಷ್ಟು ಗೊತ್ತು.?

Leave a Reply

Your email address will not be published. Required fields are marked *

You cannot copy content of this page

error: Content is protected !!