ಗ್ರಿಲ್ ನಲ್ಲಿ ಸಿಕ್ಕಿಕೊಂಡ ಕೊಳಕುಮಂಡಲ ರಕ್ಷಣೆ.
ತುಮಕೂರಿನ ಸರಸ್ವತಿ ಪುರಂನ ರಾಜಶೇಖರ ಅವರ ಮನೆಯ ಗ್ರಿಲ್ ನಲ್ಲಿ ಸಿಕ್ಕಿಕೊಂಡಿದ್ದ ಕೊಳಕುಮಂಡಲ ಹಾವನ್ನು ರಕ್ಷಿಸಿ ಸಮೀಪದ ಅರಣ್ಯಕ್ಕೆ ಬಿಟ್ಟಿದ್ದಾರೆ.
4 ಅಡಿ ಉದ್ದದ ಬೃಹತ್ ಗಾತ್ರದ ಕೊಳಕುಮಂಡಲ ಹಾವು (ರಸೆಲ್ಸ್ ವೈಪರ್) ಕಾಂಪೌಂಡ್ ನ ಗ್ರಿಲ್ ನಲ್ಲಿ ಸಿಕ್ಕಿಕೊಂಡಿದ್ದನ್ನು ನೋಡಿದ ಮನೆಯವರು, ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆಮಾಡಿ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ವಾರ್ಕೊ ಸಂಸ್ಥೆಯ ಉರಗ ತಜ್ಞರಾದ ಮನು ಅಗ್ನಿವಂಶಿ , ತೇಜಸ್ ಕುಮಾರ್ ಮತ್ತು ಸ್ಯಾಮ್ಯುಯೆಲ್ ರವರು ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹ್ಯಾಕ್ಸಾ ಬ್ಲೇಡ್ ಬಳಸಿ ಕಬ್ಬಿಣದ ಗ್ರಿಲ್ ಅನ್ನು ಕತ್ತರಿಸಿ ನಂತರ ಹಾವಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಬಿಡಿಸಿ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಹಾವುಗಳು ಹಾಗೂ ಇತರೆ ವನ್ಯಜೀವಿ ರಕ್ಷಣೆಗೆ ಮಾಡಲು ವಾರ್ಕೊ ಸಂಸ್ಥೆಗೆ 9964519576 ಕರೆಮಾಡಬಹುದು.