ಗೂಳೂರಿನ ಶ್ರೀ ಮಹಾಗಣಪತಿ ದೇವಾಲಯದ ನೂತನ ಪ್ರವೇಶದ್ವಾರ ಕಾಮಗಾರಿಗೆ ಶಾಸಕ ಡಿಸಿ ಗೌರಿಶಂಕರ್ ಭೂಮಿ ಪೂಜೆ.

ಗೂಳೂರಿನ ಶ್ರೀ ಮಹಾಗಣಪತಿ ದೇವಾಲಯದ ನೂತನ ಪ್ರವೇಶದ್ವಾರ ಕಾಮಗಾರಿಗೆ ಶಾಸಕ ಡಿಸಿ ಗೌರಿಶಂಕರ್ ಭೂಮಿ ಪೂಜೆ.

 

ತುಮಕೂರು ತಾಲೂಕಿನ ಗೂಳೂರಿನಲ್ಲಿ  25 ಲಕ್ಷ ರೂ ವೆಚ್ಚದಲ್ಲಿ ಪ್ರವೇಶದ್ವಾರ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿತ್ತು ಗ್ರಾಮಸ್ಥರ ಮನವಿಯಂತೆ ಶಾಸಕ ಗೌರಿಶಂಕರ್ ತಮ್ಮ ವೈಯಕ್ತಿಕ 25 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದು ಅದರ ಭೂಮಿಪೂಜೆಯನ್ನು ನೆರವೇರಿಸಿದರು ಅಭಿನಂದನೆಗಳನ್ನು ಸಲ್ಲಿಸಲಾಯಿತು .

 

 

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಹಾರಾಷ್ಟ್ರದಲ್ಲಿ ಮಹಾಗಣಪತಿ ಪೂಜೆಯನ್ನು ಹೇಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಕರ್ನಾಟಕದಲ್ಲಿ ಏಕೈಕ ಸ್ಥಳ ಗೂಳೂರಿನಲ್ಲಿ ಮಾತ್ರ ಮಹಾಗಣಪತಿ ಜಾತ್ರೆ ಮಹೋತ್ಸವ ಹಾಗೂ ಪೂಜಾ ಮಹೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ ಆದಕಾರಣ ಗ್ರಾಮಸ್ಥರ ಮನವಿಯಂತೆ ಮಹಾಗಣಪತಿ ದೇವಾಲಯದ ನೂತನ ಪ್ರವೇಶದ್ವಾರ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು ಅಂತೆಯೇ ಇಂದು ಭೂಮಿ ಪೂಜೆ ನೆರವೇರಿಸಿ ರುವುದಾಗಿ ತಿಳಿಸಿದರು .

 

 

ಇದೇ ವೇಳೆ ಮಾತನಾಡಿದ ಶಾಸಕರು ಹಾಗೂ ಧರ್ಮ ಜಾತಿಯನ್ನು ಮುಂದಿಟ್ಟುಕೊಂಡು ಎಂದಿಗೂ ರಾಜಕಾರಣ ಮಾಡಿಲ್ಲ ಹಾಗೂ ಮಾಡುವುದು ಇಲ್ಲ ಅಂತಹ ಸಂದರ್ಭ ಒದಗಿ ಬಂದಲ್ಲಿ ರಾಜೀನಾಮೆ ನೀಡಿ ಮನೆಗೆ ಮರಳುತ್ತೇನೆ ಹೊರತು ಜಾತಿ-ಜಾತಿಗಳ ನಡುವೆ ಧರ್ಮ-ಧರ್ಮಗಳ ನಡುವೆ ಒಡಕು ಉಂಟು ಮಾಡುವ ಪರಿಸ್ಥಿತಿ ನಿಮ್ಮ ಮನೆ ಮಗ ಗೌರಿಶಂಕರ್ ಗೆ ಬಂದಿಲ್ಲ ಎಂದು ತಿಳಿಸಿದರು

Leave a Reply

Your email address will not be published. Required fields are marked *

You cannot copy content of this page

error: Content is protected !!