ಕೊರಟಗೆರೆ ತಾಲ್ಲೂಕಿನ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ.* 

*ಕೊರಟಗೆರೆ ತಾಲ್ಲೂಕಿನ ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ.*

 

ಕೊರಟಗೆರೆ: ತಾಲ್ಲೂಕಿನ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಹೊರಬಿದ್ದಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು ಮತ್ತು ಪ್ರವಾಸ ಚುರುಕುಗೊಂಡಿದೆ.

ಪಟ್ಟಣದ ಮಾರುತಿ ಕಲ್ಯಾಣಮಂಟಪದಲ್ಲಿ ತುಮಕೂರು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ನೇತೃತ್ವದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾ.ಪಂ ನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಕ್ರಮವಾಗಿ ಈ ರಿತಿ ಇದ್ದು ಬೂದಗವಿ ಹಿಂದುಳಿದ(ಅ) ಮಹಿಳೆ, ಸಾಮಾನ್ಯ, ಪಾತಗಾನಹಳ್ಳಿ ಹಿಂದುಳಿದ(ಅ) ಮಹಿಳೆ, ಪರಿಶಿಷ್ಟ ಜಾತಿ, ತೋವಿನಕೆರೆ ಹಿಂದುಳಿದ(ಬ), ಪರಿಶಿಷ್ಟ ಜಾತಿ ಮಹಿಳೆ, ಕುರಂಕೋಟೆ ಸಾಮಾನ್ಯ ಸಾಮಾನ್ಯ ಮಹಿಳೆ, ಬುಕ್ಕಪಟ್ಟಣ ಸಾಮಾನ್ಯ, ಸಾಮಾನ್ಯ ಮಹಿಳೆ, ವಡ್ಡಗೆರೆ ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ಹುಲಿಕುಂಟೆ ಸಾಮಾನ್ಯ, ಪರಿಶಿಷ್ಟ ಪಂಗಡ, ಅರಸಾಪುರ ಸಾಮನ್ಯ ಪರಿಶಿಷ್ಟ ಜಾತಿ ಮಹಿಳೆ, ತೀತಾ ಸಾಮಾನ್ಯ, ಪರಿಶಿಷ್ಟ ಪಂಗಡ ಮಹಿಳೆ, ವಜ್ಜನಕುರಿಕೆ ಸಾಮಾನ್ಯ, ಸಾಮಾನ್ಯ ಮಹಿಳೆ, ಜೆಟ್ಟಿ ಅಗ್ರಹಾರ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ತುಂಬಾಡಿ ಸಾಮಾನ್ಯ ಮಹಿಳೆ, ಸಾಮನ್ಯ, ಬೈಚಾಪುರ ಸಾಮಾನ್ಯ ಮಹಿಳೆ, ಸಾಮಾನ್ಯ, ಮಾವತ್ತೂರು ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ, ಕ್ಯಾಮೇನಹಳ್ಳಿ ಸಾಮಾನ್ಯ ಮಹಿಳೆ, ಪರಿಶಿಷ್ಟ ಜಾತಿ ಮಹಿಳೆ, ಅಕ್ಕಿರಾಂಪುರ ಪರಿಶಿಷ್ಟ ಜಾತಿ, ಹಿಂದುಳಿದ(ಅ) ಮಹಿಳೆ, ದೊಡ್ಡಸಾಗ್ಗೆರೆ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ಚಿನ್ನಹಳ್ಳಿ ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ, ಹಂಚಿಹಳ್ಳಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಹೊಳವನಹಳ್ಳಿ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ಎಲೆರಾಂಪುರ ಪರಿಶಿಷ್ಟ ಜಾತಿ ಮಹಿಳೆ, ಸಾಮಾನ್ಯ, ನೀಲಗೊಂಡನಹಳ್ಳಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ(ಬ), ಬಿ.ಡಿಪುರ ಪರಿಶಿಷ್ಟ ಪಂಗಡ ಮಹಿಳೆ, ಸಾಮಾನ್ಯ, ಕೋಳಾಲ ಪರಿಶಿಷ್ಟ ಪಂಗಡ ಮಹಿಳೆ, ಹಿಂದುಳಿದ ವರ್ಗ(ಅ) ಈ ಮೇಲ್ಕಂಡಂತೆ ಮೀಸಲಾತಿಗಳು ನಿಗಧಿಯಾಗಿದ್ದು ಚುನಾವಣಾ ದಿನಾಂಕ ನಿಗಧಿಯಾಗಬೇಕಿದೆ.

ಈ ಸಂಧರ್ಭದಲ್ಲಿ ಅಪರಜಿಲ್ಲಾಧಿಕಾರಿ ಚನ್ನಬಸಪ್ಪ, ತಹಶೀಲ್ದಾರ್ ಗೋವಿಂದರಾಜು, ಉಪ ತಹಶೀಲ್ದಾರ್ ಚಂದ್ರಪ್ಪ, ಕಸಬಾ ರಾಜಸ್ವ ನಿರೀಕ್ಷಕ ಪ್ರತಾಪ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!