ಕನ್ನಮಂಗಲ ಗ್ರಾಪಂನ ಇಬ್ಬರು ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲದ ಹಾಗೆ ವರ್ತನೆ

 

ಕನ್ನಮಂಗಲ ಗ್ರಾಪಂನ ಇಬ್ಬರು ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶಕ್ಕೆ ಕಿಮ್ಮತ್ತಿಲ್ಲದ ಹಾಗೆ ವರ್ತನೆ

 

ಇ-ಖಾತೆಗೆ ೫ಲಕ್ಷ ಬೇಡಿಕೆ ಆರೋಪ | ವಜಾಗೊಳಿಸಿದ್ದರು ಮುಂದುವರೆದ ಸಿಬ್ಬಂದಿ ಕಾರ್ಯವೈಖರಿ

 

ದೇವನಹಳ್ಳಿ: ತಾಲೂಕಿನ ಕನ್ನಮಂಗಲ ಗ್ರಾಮ ಪಂಚಾಯಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಸಿಬ್ಬಂದಿಗಳ ಕಾರ್ಯ ವೈಖರಿಯ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್ ಖಡಕ್ ವಜಾಗೊಳಿಸುವ ಆದೇಶ ಹೊರಡಿಸಿದ್ದರೂ ಸಹ ಆಡಳಿತಾಧಿಕಾರಿ ವಸಂತ್‌ಕುಮಾರ್ ಮತ್ತು ಪಿಡಿಒ ಆದೇಶವನ್ನು ನಿರ್ಲಕ್ಷಿಸಿ, ಕನ್ನಮಂಗಲ ಗ್ರಾಪಂನ ಇಬ್ಬರು ಸಿಬ್ಬಂದಿಗಳು ಆದೇಶವನ್ನು ಗಾಳಿಗೆ ತೂರಿ ತಮ್ಮ ಕೆಲಸ ವೈಖರಿಯನ್ನು ಮುಂದುವರೆಸುತ್ತಿರುವುದು ಹಲವು ಅನುಮಾನಗಳಿಗೆ ದಾರಿಯಾಗಿದೆ.

ಕನ್ನಮಂಗಲ ಗ್ರಾಪಂಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಮಸ್ತೆ ಅನುರಾಧ ಹಾಗೂ ಕರವಸೂಲಿಗಾರ ಮಂಜುನಾಥ್ ಎಂಬುವವರು ಮೇ.೧೦,೨೦೧೯ರಲ್ಲಿ ಪೂಜನಹಳ್ಳಿ ಗ್ರಾಮದ ಸರ್ವೆನಂ.೭೯ಕ್ಕೆ ಸಂಬಂಧಿಸಿದಂತೆ ಇ-ಖಾತೆ ಮಾಡಿಕೊಡಲು ಗ್ರಾಪಂಗೆ ರೆಡ್‌ವುಡ್ ಎಂಟರ್‌ಪ್ರೈಸಸ್ ನಿರ್ದೇಶಕಿ ಕಾಕಿನಿ ಶಾಲಿನಿ ಎಂಬುವವರು ಮೇ.೧೦,೨೦೧೯ರಲ್ಲಿ ಮನವಿಯನ್ನು ಸಲ್ಲಿಸಿದ್ದರು. ಆಗಿನ ಪಿಡಿಒ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದಾಗ ಇ-ಖಾತೆ ಬಗ್ಗೆ ಕಚೇರಿಯ ಸಿಬ್ಬಂದಿ ಅನುರಾಧಗೆ ಸಂಪರ್ಕಿಸಿ ಎಂದು ಸೂಚಿಸಿದ್ದರು. ಅದರಂತೆ ಕಾಕಿನಿಶಾಲಿನಿ ಅನುರಾಧ ಅವರನ್ನು ಸಂಪರ್ಕಿಸಿದಾಗ ಇ-ಖಾತೆ ಮಾಡಿಕೊಡಲು ೫ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ ೩ಲಕ್ಷ ರೂ.ಗಳನ್ನು ನೀಡಲು ಕೋರಿರುತ್ತಾರೆ. ಈ ಹಣವನ್ನು ನೀಡಲು ನಿರಾಕರಿಸಿದ್ದಕ್ಕೆ ಕರವಸೂಲಿಗಾರ ಮಂಜುನಾಥ್ ಜತೆಗೂಡಿ, ರಮೇಶ್ ಬಿನ್ ಲೇಟ್ ಮುನಿಯಪ್ಪ ಇವರಿಂದ ಇ-ಖಾತೆ ಮಾಡದಂತೆ ಹಿಂದಿನ ದಿನಾಂಕದಲ್ಲಿ ತಡೆ ಅರ್ಜಿಯನ್ನು ಪಡೆದುಕೊಂಡು, ಇ-ಖಾತೆ ಮಾಡಲು ಸಾಕಷ್ಟು ತೊಂದರೆ ನೀಡುತ್ತಿದ್ದ ಹಿನ್ನಲೆಯಲ್ಲಿ ಕಾಕಿನಿ ಶಾಲಿನಿ ಕೂಡಲೇ ತಾಪಂ ಇಒಗೆ ಮಾಹಿತಿ ನೀಡಿದರು. ಅಲ್ಲಿ ಕೆಲಸವಾಗದಿದ್ದರಿಂದ ಜಿಪಂ ಸಿಇಒಗೆ ದೂರು ದಾಖಲಿಸಿದರು. ಇದರ ಪರಿಣಾಮವಾಗಿ ಕನ್ನಮಂಗಲ ಗ್ರಾಪಂ ಸಿಬ್ಬಂದಿಗಳಾದ ಅನುರಾಧ ಮತ್ತು ಮಂಜುನಾಥ್ ಅವರನ್ನು ಈ ಕೂಡಲೇ ವಜಾಗೊಳಿಸುವಂತೆ ಆದೇಶವನ್ನು ಜಿಪಂ ಸಿಇಒ ಹೊರಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ಇವರುಗಳು ಸಲ್ಲಿಸಿರುವ ವರದಿಯಂತೆ ಗ್ರಾಪಂನಲ್ಲಿ ಹಂಗಾಮಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅನುರಾಧ ಗುಮಸ್ಥೆ ಹಾಗೂ ಕಂಪ್ಯೂಟರ್ ಆಪರೇಟರ್ ಕಮ್ ಹಾಗೂ ಕರವಸೂಲಿಗಾರ ಮಂಜುನಾಥ್ ಇವರುಗಳು ಇ-ಖಾತೆ ಮಾಡಿಕೊಡಲು ಸಲ್ಲಿಸಿರುವ ಅರ್ಜಿಯನ್ನು ಸುಮಾರು ೧ ವರ್ಷ ೭ ತಿಂಗಳು ಕಳೆದರೂ ಖಾತೆ ಮಾಡಿಕೊಡದೆ, ಹಣದ ಆಮಿಷಗಾಗಿ ಲಂಚದ ಹಣವನ್ನು ಬೇಡಿಕೆ ಇಟ್ಟಿರುವುದು. ತಾಪಂ ಕಾರ್ಯನಿರ್ವಹಣಾಧಿಕಾರಿಗಳ ವರದಿಯಲ್ಲಿ ದೃಢಪಟ್ಟಿರುತ್ತದೆ. ಆದ ಕಾರಣ ಇವರುಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ ೧೯೯೩ರ ಪ್ರಕರಣದಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಜಾಗೊಳಿಸಲು ಆಡಳಿತಾಧಿಕಾರಿ/ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದೇಶಿಸಿದ್ದಾರೆ.

ಇಷ್ಟಾದರೂ ಸಹ ಆದೇಶಕ್ಕೆ ಕಿಮತ್ತಿಲ್ಲದೆ, ವಜಾಗೊಂಡಿರುವ ಸಿಬ್ಬಂದಿಗಳು ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

 

Leave a Reply

Your email address will not be published. Required fields are marked *

You cannot copy content of this page

error: Content is protected !!