ಗುರುವಾರದ ರಾಶಿ ಭವಿಷ್ಯ

ಮೇಷ – ಇಂದು ಧನಲಾಭದ ಯೋಗವೂ ಇದೆ. ನೀವು ಹೊಸ ಯೋಜನೆಗಳನ್ನು ಪ್ರಾರಂಭಿಸಲಿರುವುದರಿಂದ ಅತೀ ಸಂಭ್ರಮ ಮತ್ತು ಉತ್ಸಾಹದಿಂದಿರುತ್ತೀರಿ.

ವೃಷಭ – ಬಹಳ ರೀತಿಯ ಕಷ್ಟಗಳನ್ನು ಸಹಿಸಿಕೊಂಡು ಮುಂದೆ ಸಾಗುತ್ತಿರಿ ಕಠಿಣ ಕೆಲಸವನ್ನು ನಿರ್ವಹಿಸಲು ಹಿರಿಯರ ಸಲಹೆಯನ್ನು ಪಡೆಯಿರಿ.

ಮಿಥುನ – ತೊಡಕು ಎದುರಾಗುತ್ತದೆ, ಮನಸ್ಸು ಚಂಚಲವಾಗುತ್ತದೆ, ಕೆಟ್ಟವರ ಸಹವಾಸ ಸಾಧ್ಯತೆ, ನಂಬಿಕೆಗೆ ಮೋಸ.

ಕಟಕ – ನಿಮ್ಮ ಮನೆಯವರು ಯಾವುದೇ ಸಲಹೆ ನೀಡಿದರೂ ಅದನ್ನು ತಿರಸ್ಕಾರ ಮಾಡಬೇಡಿ. ಇಂದು ಯಾರೊಂದಿಗೂ ಕೂಡ ಮುಖಾಮುಖಿ ಜಗಳ ಮಾಡುವುದು ಒಳ್ಳೆಯದಲ್ಲ.

ಸಿಂಹ – ಇಂದು ಯುವಕರು ಹೊಸ ವ್ಯಾಪಾರದ ಬಗ್ಗೆ ಚಿಂತಿಸುವಿರಿ. ಸಂಗಾತಿಯ ಮನಸ್ಸಿನ ಕಡೆ ಗಮನಹರಿಸುವುದು ಉತ್ತಮ. ಉದ್ಯೋಗಸ್ಥರು ನಿಮ್ಮ ಭಾವನೆಗಳನ್ನು ನಿಯಂತ್ರಿಸಬೇಕು.

ಕನ್ಯಾ – ಹೊಸ ಕೆಲಸ ಲಾಭದಾಯಕವಾಗಿ ಕಂಡರೂ ಬಯಸಿದ ಲಾಭವನ್ನು ಬೇಗನೆ ತರುವುದಿಲ್ಲ. ಮಡದಿಗೆ ಆದಷ್ಟು ಉಡುಗೊರೆಗಳನ್ನು ನೀಡಿದರೆ ಕುಟುಂಬದಲ್ಲಿ ಸಂತೋಷದಿಂದ ಇರಬಹುದು.

ತುಲಾ – ನಿಧಾನವೇ ಪ್ರಧಾನವಾಗಿರಲಿ. ಮಕ್ಕಳ ವಿಚಾರದಲ್ಲಿ ಆತುರ ಪಡುವುದು ಬೇಡ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಗೌರವ ಮತ್ತು ಕೀರ್ತಿ ಸಿಗಲಿದೆ.

ವೃಶ್ಚಿಕ – ಇಂದು ಕೆಲವು ಅಧಿಕಾರಿಗಳ ನೆರವು ನಿಮಗೆ ದೊರೆತು ತಡೆಹಿಡಿದ ನಿಮ್ಮ ಕೆಲಸಗಳು ಮಾಡಿಕೊಳ್ಳುವಿರಿ. ಸಂಗಾತಿಯ ಮುನಿಸು ಚಿಂತೆಗೀಡು ಮಾಡುತ್ತದೆ.

ಧನಸ್ಸು: ಇಂದು ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕೆಂದರೆ ಹಿರಿಯರಿಂದ ಅಥವಾ ನಿಮ್ಮ ಸಂಗಾತಿಯನ್ನು ಕೇಳಿ ಮುಂದುವರೆಯಿರಿ ಕುಟುಂಬ ಜೀವನವು ಉತ್ತಮವಾಗಿರುತ್ತದೆ

ಮಕರ: ಕುಟುಂಬ ಸದಸ್ಯರೊಂದಿಗಿನ ಅರ್ಥರಹಿತ ವಾಗ್ವಾದಗಳು ಸಂಘರ್ಷ ಮತ್ತು ನೋವಿಗೆ ಕಾರಣವಾಗುವುದು. ನಿರುದ್ಯೋಗಿಗಳಿಗೆ ಉದ್ಯೋಗದ ಲಾಭ ಸಿಗಲಿದೆ.

ಕುಂಭ: ಇಂದು ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ಉತ್ತಮ ಧನಲಾಭ ಇದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸೌಜನ್ಯತೆಯಿಂದ ವರ್ತಿಸಿ.

ಮೀನ: ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ. ಬಾಕಿ ಸಾಲ ಈಗ ವಸೂಲಿಯಾಗಲಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!