ಜೂನ್ 24ಕ್ಕೆ ತೆರೆಮೇಲೆ ತ್ರಿವಿಕ್ರಮ ಚಲನಚಿತ್ರ ಬಿಡುಗಡೆ

ಜೂನ್ 24ಕ್ಕೆ ತೆರೆಮೇಲೆ ತ್ರಿವಿಕ್ರಮ ಚಲನಚಿತ್ರ ಬಿಡುಗಡೆ.

 

 

ತುಮಕೂರು_ಬಹುನಿರೀಕ್ಷೆಯ ವಿ.ರವಿಚಂದ್ರನ್ ರವರ ಪುತ್ರ ಅಭಿನಯದ ತ್ರಿವಿಕ್ರಮ ಚಲನಚಿತ್ರ ಜೂನ್ 24ಕ್ಕೆ ಬಿಡುಗಡೆ ಆಗಲಿದೆ.

 

 

ಈ ಬಗ್ಗೆ ಚಲನಚಿತ್ರದ ಪ್ರಮೋಷನ್ ಗಾಗಿ ತುಮಕೂರಿಗೆ ಆಗಮಿಸಿದ ತ್ರಿವಿಕ್ರಮ ಚಲನಚಿತ್ರದ ತಂಡ ತುಮಕೂರಿನ ಸ್ಯಾಂಡಲ್ವುಡ್ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಲನಚಿತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

ಈ ಸಂದರ್ಭದಲ್ಲಿ ಮಾತನಾಡಿರುವ ನಾಯಕನಟ ಹಾಗೂ ರವಿಚಂದ್ರನ್ ರವರ ಮಗ ವಿಕ್ರಂ ರವಿಚಂದ್ರನ್ ಮಾತನಾಡಿದ್ದು ನನ್ನ ಮೊದಲ ಸಿನಿಮಾ ಇದಾಗಿದ್ದು ಎಲ್ಲರ ಸಹಕಾರದೊಂದಿಗೆ ಚಲನಚಿತ್ರ ಚೆನ್ನಾಗಿ ಮೂಡಿಬಂದಿದೆ ಜೂನ್ 24ಕ್ಕೆ ತೆರೆಮೇಲೆ ಬರಲಿದ್ದು ಪ್ರೇಕ್ಷಕರು ಹಾಗೂ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.

 

 

ಇನ್ನು ಮುಖ್ಯ ಪಾತ್ರದಲ್ಲಿ ನಾಯಕ ನಟಿಯಾಗಿ ಆಕಾಂಕ್ಷ ಶರ್ಮ ಹಾಗೂ ಅಕ್ಷರ ಗೌಡ ಅಭಿನಯಿಸಿದ್ದು ತಾರಾಗಣದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ ,ತುಳಸಿ ಶಿವಮಣಿ, ಆದಿ ಲೋಕೇಶ್ ಸೇರಿದಂತೆ ಹಲವರು ಅಭಿನಯಿಸಿದ್ದು ಚಲನಚಿತ್ರ ಚೆನ್ನಾಗಿ ಮೂಡಿಬಂದಿದ್ದು ಎಲ್ಲಾ ವರ್ಗದ ಜನರಿಗೂ ಚಲನಚಿತ್ರ ಇಷ್ಟವಾಗಲಿದೆ ಚಲನಚಿತ್ರದ ನಿರ್ದೇಶಕರಾದ ಸಹನಾಮೂರ್ತಿ ತಿಳಿಸಿದ್ದಾರೆ.

 

ಚಲನಚಿತ್ರಕ್ಕೆ ಅರ್ಜುನ್ ಜನ್ಯ ರವರ ಸಂಗೀತ ಹಾಗೂ ಸಂತೋಷ್ ರವರ ಕ್ಯಾಮರಾ ವರ್ಕ್ ಚಲನಚಿತ್ರದಲ್ಲಿ ಚೆನ್ನಾಗಿ ಮೂಡಿ ಬಂದಿದೆ ಚಲನಚಿತ್ರ ಉತ್ತಮ ಕಥಾಹಂದರವನ್ನು ಹೊಂದಿದ್ದು ಜೂನ್ 24ಕ್ಕೆ ಸುಮಾರು 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗಲಿದೆ ಇನ್ನು ಚಲನಚಿತ್ರ ಕೊಡಗು, ಕೊಡಚಾದ್ರಿ ,ಮಂಗಳೂರು ,ಕಾಶ್ಮೀರ್ ಹಾಗೂ ಬ್ಯಾಂಕಾಕ್ನಲ್ಲಿ ಶೂಟಿಂಗ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

 

ಇದೇ ಸಂದರ್ಭದಲ್ಲಿ ತುಮಕೂರಿನ ಕಲ್ಪತರು ಅಭಿನಯ ಶಾಲೆಯ ಮುಖ್ಯಸ್ಥರಾದ ಆನಂದ್ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!