ಜೆಡಿಎಸ್ ಬೂತ್ ಕಮಿಟಿ ರಚನೆ ಹಾಗೂ ಕಾರ್ಯಕರ್ತರ ಸಭೆ.

 

ದೇವನಹಳ್ಳಿ :

ಮುಂಬರುವ ಚುನಾವಣೆಗೆ ಈಗಿನಿಂದಲೇ ಜೆಡಿಎಸ್ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು ಬೂತ್ ಮಟ್ಟದ ಕಮಿಟಿಗಳನ್ನು ರಚಿಸಿ ತಳ ಮಟ್ಟದಿಂದ ಪಕ್ಕವನ್ನು ಬಲಿಷ್ಠಗೊಳಿಸಲಾಗುತ್ತಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ವೆಂಕಟಗಿರಿಕೊಟೆಯಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರಸಭೆಯಲ್ಲಿ ಮಾತನಾಡಿ ಗ್ರಾಮ ಪಂಚಾಯ್ತಿಗಳಲ್ಲಿ ಕಳದ ಸಾಲಿಗಿಂತಲು ಸಮಾಧಾನ ಪಡುವಂತಹ ಮಟ್ಟಿಗೆ ಮತಗಳನ್ನು ಪಡೆದಿದ್ದು, ಮುಂಬರುವ ತಾ.ಪಂ. ಹಾಗೂ ಜಿ.ಪಂ. ಗಳಲ್ಲಿ ಉತ್ತಮ ಪಲಿತಾಂಶ ಪಡೆಯಲು ಕಾರ್ಯಕರ್ತರು ಶ್ರಮಪಡಬೇಕು, ಯಾವುದೇ ಪಕ್ಷದ

ಅವರ ಮನೆಗೆ ತೆರಳಿ ಮನಪರಿವರ್ತನೆ ಮಾಡಿ ಜೆಡಿಎಸ್ ಪಕ್ಷವನ್ನು ಬಲಿಷ್ಠಗೊಳಿಸಿ ಎಂದರು.

 

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಇಳಿವಯಸ್ಸಿನಲ್ಲಿಯೂ ದೇವೇಗೌಡರವರು ಈಗಲೂ ಕಾರ್ಯಪ್ರವೃತ್ತರಾಗಿ ಸಂಘಟನೆ ಮಾಡುತ್ತಿದ್ದಾರೆ, ಯುವ ಕಾರ್ಯಕರ್ತರು ಹಿರಿಯರ ಸಲಹೆ ಪಡೆದು ಕಾರ್ಯಕ್ರಮಗಳನ್ನು ರೂಪಿಸಿ, ಕಷ್ಟದಲ್ಲಿರುವ ಯಾವುದೇ ಪಕ್ಷದವರಿಗೆ ಸಹಾಯ ಮಾಡಿ, ಅವರ ಕಷ್ಟಗಳಿಗೆ ಸ್ಪಂದಿಸಿ ಸಹಕಾರ ನೀಡಿ ಮುಂದೆ ನಮ್ಮ ಪಕ್ಷಕ್ಕೆ ಲಾಭವಾಗಲಿದೆ ಎಂದರು.

 

ವೆಂಕಟಗಿರಿಕೋಟೆ ಗ್ರಾ.ಪಂ. ಅಧ್ಯಕ್ಷ ಹಾಗೂ ಹಾಫ್‍ಕಾಮ್ಸ್ ನಿರ್ದೇಶಕ ಹುರುಳುಗುರ್ಕಿ ಶ್ರೀನಿವಾಸ್ ಮಾತನಾಡಿ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷದ ಸದಸ್ಯರು ಹೆಚ್ಚಾಗಿದ್ದರೆ ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್‍ನ ಬಲ ಹೆಚ್ಚಾಗಲಿದೆ ನಮ್ಮ ವ್ಯಾಪ್ತಿಯಲ್ಲಿ ಜೆಡಿಎಸ್ ಬಲಿಷ್ಟವಾಗಿದೆ ಆದರೂ ಇನ್ನೂ ಹೆಚ್ಚಿನ ಕಾರ್ಯಕರ್ತರನ್ನು ಒಗ್ಗೂಡಿಸಲು ನನ್ನ ಸಹಕಾರ ಇದ್ದೇ ಇರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹಾಗೂ ವೆಂಕಟಗಿರಿಕೋಟೆಯ ಗ್ರಾಮ ಪಂಚಾಯತಿ ಸದಸ್ಯ ಆರ್ ಅಮರನಾಥ್ ಮಾತನಾಡಿ. ತಾಲ್ಲೂಕಿನಲ್ಲಿ ಸತತವಾಗಿ ಎರಡು ಬಾರಿ ನಮ್ಮ ಜೆಡಿಎಸ್ ಪಕ್ಷ ಆಡಳಿತದಲ್ಲಿ ಇರುವುದರಿಂದ ತಾಲ್ಲೂಕಿನಲ್ಲಿರುವ ಗ್ರಾಮಗಳು ಅಭಿವೃದ್ಧಿಯನ್ನು ಕಾಣುತ್ತಿದೆ. ಅದರಲ್ಲೂ ಈಗಿನ ನಮ್ಮ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಅವರು ಮೊದಲಿನಿಂದಲೂ ಸಮಾಜ ಸೇವಕರೆಂದು ಹೆಸರು ಮಾಡಿದ್ದು ಜನತೆಗೆ ಸಾಕಷ್ಟು ರೀತಿಯಲ್ಲಿ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಹೋಲಿಸಿದರೆ ನಮ್ಮ ಪಕ್ಷವು ಮೇಲುಗೈ ಸಾದಿಸಿದೆ. ಇನ್ನೂ ಬೂತ್ ಮಟ್ಟದಲ್ಲಿ ನಮ್ಮ ಕಾರ್ಯಕರ್ತರು ಮತ್ತಷ್ಟು ಕೆಲಸಗಳನ್ನು ಮಾಡಿದರೆ ಮುಂದಿನ ಚುನಾವಣೆಯಲ್ಲಿ ಗೆಲುವು ಸಾದಿಸುವುದರಲ್ಲಿ ಸಂಶಯವಿಲ್ಲ. ಒಟ್ಟಾಗಿ ನಾವೆಲ್ಲರೂ ಸೇರಿ ಕೆಲಸಮಾಡಿ ಜೆಡಿಎಸ್ ಪಕ್ಷವನ್ನು ಬಲಪಡಿಸಬೇಕು ಎಂದರು.

 

ಈ ಸಮಯದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಆರ್ ಮುನೇಗೌಡ , ಜೆಡಿಎಸ್ ಪ್ರ.ಕಾರ್ಯದರ್ಶಿ ಜಿ.ಎ.ರವೀಂದ್ರ, ಕಾರ್ಯಾಧ್ಯಕ್ಷ ದೊಡ್ಡಸಣ್ಣೆ ಮುನಿರಾಜು, ಹನುಮಂತಪ್ಪ, ಚಂದ್ರೇಗೌಡ, ಹೊಸಹುಡ್ಯ ನಾರಾಯಣಾಚಾರ್, ಜೊನ್ನಹಳ್ಳಿ ಮುನಿರಾಜು, ನೆರಗನಹಳ್ಳಿ ಶ್ರೀನಿವಾಸ್, ಯೂತ್ ಅಧ್ಯಕ್ಷ ಭರತ್ ಸೇರಿದಂತೆ ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!