ಸವಾರನ ಸಾವಿಗೆ ಕಾರಣ ಆದವರಿಗೆ ಪ್ರಶಸ್ತಿ : ಕುಟುಕಿದ ಹಳ್ಳಿಹಕ್ಕಿ

 

 

ಮೈಸೂರು : ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು. ಬೈಕ್ ಸವಾರನನ್ನ ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತೀಯಾ. ನೀನು ಯಾವ್ ಸೀಮೆ ಕಮಿಷನರಯ್ಯ? ಎಂದು ಪೊಲೀಸ್ ಕಮಿಷನರ್ ವಿರುದ್ಧ ಎಂಎಲ್ ಸಿ ಹೆಚ್.ವಿಶ್ವನಾಥ್ ಕಿಡಿಕಾರಿದ್ದಾರೆ.

 

ಜಿಲ್ಲೆಯ ರಿಂಗ್ ರಸ್ತೆಯಲ್ಲಿ ನಡೆದ ಬೈಕ್ ಸವಾರನ ಸಾವಿನ ಪ್ರಕರಣ ಬಿಸಿ ಬಿಸಿ ಚರ್ಚೆಯಲ್ಲಿರುವಾಗಲೇ ಅಪಘಾತದ ವೇಳೆ ಕಾರ್ಯನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಮೈಸೂರು ನಗರದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ. ಆದ್ರೆ ಪೊಲೀಸ್ ಆಯುಕ್ತರ ನಡೆಗೆ ಹೆಚ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ, ಸಿಟಿ ರೌಂಡ್ಸ್ ಹಾಕಲ್ಲ. ಎಷ್ಟು ವರ್ಷ ಆಯ್ತು ಬಂದು ? ಎಷ್ಟು ಜನ ಡಿಸಿಪಿ ಎಸಿಪಿಗಳಿದ್ದೀರಿ ಏನ್ ಮಾಡ್ತಿದ್ದೀರಿ ? ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ.

 

ಇದು ಪೊಲೀಸರ ಅಚಾತುರ್ಯದಿಂದ ನಡೆದ ಘಟನೆ. ಓಡಾಡಿಸಿಕೊಂಡು ಬೈಕ್ ಹಿಡಿಯಿರಿ ಎಂಬ ಕಾನೂನು ಎಲ್ಲಿದೆ. ಫೋಟೋ, ಸಿಸಿ ಕ್ಯಾಮೆರಾ ಇಲ್ವ ಇವರಿಗೆ ಮಾನ ಮರ್ಯಾದೆ ಇಲ್ಲ? ಗೂಂಡಾಗಿರಿ ಮಾಡ್ತಿದ್ದಾರೆ.

 

ಈ ವರ್ತನೆಯನ್ನ ಯಾರೂ ಕ್ಷಮಿಸಲ್ಲ. ಪೊಲೀಸರು ಸುದ್ದಿ ಕೊಟ್ಟರೆ ಅಲ್ವಾ ಗೃಹ ಸಚಿವರು ಮಾತನಾಡುವುದು. ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಮಂತ್ರಿ ಜೊತೆ ಮಾತನಾಡುತ್ತೇನೆ ಎಂದು ಮೈಸೂರು ಪೊಲೀಸರ ವಿರುದ್ಧ ಹೆಚ್.ವಿಶ್ವನಾಥ್ ಕೆಂಡಾಮಂಡಲರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!