ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಕಣಕ್ಕೆ.

ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಸಚಿವ ಸೊಗಡು ಶಿವಣ್ಣ ಕಣಕ್ಕೆ

 

 

ತುಮಕೂರು – ತುಮಕೂರು ನಗರ ವಿಧಾನ ಸಭಾ ಕ್ಷೇತ್ರಕ್ಕ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿರುವುದಾಗಿ ಬಿಜೆಪಿ ಪಕ್ಷದ ಮಾಜಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.

 

 

ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇನ್ನು ತಮ್ಮ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಚರ್ಚೆ ನಡೆಸಿ ಅವರ ತೀರ್ಮಾನದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧರಿಸಿದ್ದು ಏಪ್ರಿಲ್ 20ರಂದು ಬೃಹತ್ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.

 

 

 

 

ಇನ್ನು ತಾವು ನಾಲ್ಕು ಬಾರಿ ಶಾಸಕರಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗಿ ಜೋಳಿಗೆ ಹಿಡಿದು ನೋಟು ಹಾಗೂ ವೋಟು ಕೇಳುವ ಮೂಲಕ ಇಂದಿನ ಭ್ರಷ್ಟ ರಾಜಕಾರಣವನ್ನ ಕ್ಷೇತ್ರದಿಂದ ಕಿತ್ತೊಗೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

 

 

ಇನ್ನು ತುಮಕೂರಿನ ರಾಜಕೀಯ ಇತಿಹಾಸದಲ್ಲಿ  ಇಂದಿನಿಂದ ಹೊಸ ಅಧ್ಯಯ ಆರಂಭವಾಗಲಿದ್ದು ಇದಕ್ಕೆ ತುಮಕೂರಿನ ಸಾರ್ವಜನಿಕರು ಸಹ ತಮ್ಮೊಂದಿಗೆ ಸಹಕಾರ ನೀಡಲಿದ್ದಾರೆ ಎಂದ ಅವರು ಇಂದಿನ ಬ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ  ನಡೆಯುತ್ತಿರುವ ಬ್ರಷ್ಟ ರಾಜಕಾರಣಿ ಗಳ ರೀತಿ ತಾವು ಹಣ ಹೆಂಡದ  ಮೂಲಕ ಜನರ ಮುಂದೆ ಹೋಗಲ್ಲ.

 

 

 

 

 

 

ಅದನ್ನು ಹೊರತುಪಡಿಸಿ ನ್ಯಾಯದ ದಾರಿಯಲ್ಲಿ ಜನರ ಮುಂದೆ ಹೋಗಿ ಮತವನ್ನು ಕೇಳಿ ಜನರ ಸೇವೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

 

 

 

 

 

ಇನ್ನು ಕೆಲವರ ಪಿತೂರಿಯಿಂದ ಈ ಬಾರಿ ಪಕ್ಷದ ಟಿಕೆಟ್ ಕೈ ತಪ್ಪಿದೆ ಇದಕ್ಕೆ ತಕ್ಕ ಉತ್ತರವನ್ನು ಚುನಾವಣೆಯ ಮೂಲಕ ನೀಡಲಿದ್ದೇನೆ ಎಂದರು.

 

 

 

ಪತ್ರಿಕಾಗೋಷ್ಠಿಯಲ್ಲಿ ಕಂಡರಾದ ಮಲ್ಲಿಕಾರ್ಜುನಯ್ಯ ನರಸಿಂಹಯ್ಯ ಧನ್ಯ ಕುಮಾರ್ ಚಿಕ್ಕರಾಮಣ್ಣ ಶಬ್ಬೀರ್ ಅಹ್ಮದ್ ನಂಜುಂಡಪ್ಪ ಧರಣೇಶ್ ಜ್ಯೋತಿಪ್ರಕಾಶ್ ಸೇರಿದಂತೆ ಹಲವರು ಇದ್ದರು.

 

 

ವರದಿ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!