ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ನಿರೀಕ್ಷಿತ ಹಣಕಾಸಿನ‌ ಆದಾಯ.

ಮೇಷ: ಇಂದು ನೀವು ಕ್ರೀಡೆಯಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ನಿಮಗೆ ಆಸಕ್ತಿ ತೋರುವ ಯಾವುದೇ ಕೆಲಸವಾದರೂ ಈದಿನ ಪೂರೈಸಬೇಕು. ನಿಮ್ಮ ಸಂಗಾತಿಯು ಇಂದು ಕೆಲವು ಕಷ್ಟಕರ ಸಂಬಂಧಗಳಲ್ಲಿ ನಿಮಗೆ ಬೆಂಬಲ ನೀಡಲು ಆಸಕ್ತಿ ತೋರಬಹುದು.

ವೃಷಭ: ನಿಮ್ಮ ಬಗ್ಗೆ ಕಾಳಜಿ ವಹಿಸುವವರು ಸಿಟ್ಟಿಗೆದ್ದು ನಿಮ್ಮನ್ನು ನಿರ್ಲಕ್ಷಿಸಬಹುದು. ಕ್ಷಣಕಾಲಕ್ಕೆ ಮಾತ್ರ ನಿಮ್ಮ ಸಹೋದ್ಯೋಗಿಗಳು ನಿಮಗೆ ಉತ್ತಮ ಸಹಕಾರ ನೀಡುವರು. ಅಕ್ಕಪಕ್ಕದವರ ಕಿರಿಕಿರಿ ಬೇಸರ ತಂದೀತು.

ಮಿಥುನ: ಈ ದಿನ ಆಕಸ್ಮಿಕ ಧನಲಾಭ ನೀವು ಕಾಣಲಿದ್ದೀರಿ. ಸ್ನೇಹಿತರ ಮಾರ್ಗದರ್ಶನದಿಂದ ದೊಡ್ಡಮಟ್ಟದ ಯೋಜನೆಗಳಿಗೆ ಸಹಕಾರ ದೊರೆಯಲಿದೆ. ಮನೆ ವಾಸ್ತು ಪ್ರಕಾರ ಬದಲಾಯಿಸುವಿರಿ. ಪ್ರೇಮಿಗಳ ಮದುವೆ ಅತಂತ್ರ.

ಕರ್ಕಾಟಕ: ಇಂದು ನಿಮಗೆ ಅನೇಕ ಹೊಸ ಆರ್ಥಿಕ ಯೋಜನೆಗಳು ದೊರಕುತ್ತವೆ – ಯಾವುದೇ ಬದ್ಧತೆಗೊಳಗಾಗುವ ಮುನ್ನ ಸಾಧಕ ಬಾಧಕಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಕೃಷಿಕರಿಗೆ ಸರಕಾರದಿಂದ ಧನಪ್ರಾಪ್ತಿ.

ಸಿಂಹ: ನಿರೀಕ್ಷಿತ ಹಣಕಾಸಿನ ಆದಾಯ ಈ ದಿನ ಕಾಣಬಹುದು. ಸುಖಾಸುಮ್ಮನೆ ವಾದ-ವಿವಾದಗಳಲ್ಲಿ ಕಾಲಹರಣ ಮಾಡಬೇಡಿ. ನಿಮ್ಮ ಏಕಾಗ್ರತೆಯನ್ನು ಕಾಯ್ದುಕೊಳ್ಳುವುದು ಬಹು ಮುಖ್ಯವಾಗಿರುತ್ತದೆ.

ಕನ್ಯಾ: ಕೆಲಸದಲ್ಲಿ ಹಿನ್ನಡೆ, ಆಲಸ್ಯದ ದಿನ, ದೇಹಾರೋಗ್ಯ ವ್ಯತ್ಯಾಸವಾಗಲಿದೆ. ಆಕಸ್ಮಿಕವಾಗಿ ಪ್ರಯಾಣ ಮಾಡಬಹುದಾದ ಸಾಧ್ಯತೆ ಕಂಡುಬರುತ್ತದೆ. ವ್ಯವಹಾರದಲ್ಲಿ ಲಾಭಾಂಶ ಉತ್ತಮವಾಗಿದೆ.

ತುಲಾ: ಕೂಲಿಕಾರ್ಮಿಕರು ವಲಸೆ ಹೋಗುವ ಸಾಧ್ಯತೆ ಇದೆ. ದೇವತಾ ಕಾರ್ಯಗಳಿಗೆ ಖರ್ಚಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ.

ವೃಶ್ಚಿಕ: ಇಂದು ನೀವು ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಸಾಕಷ್ಟು ಹಣವನ್ನು ಖರ್ಚು ಮಾಡಬಹುದು ಆದರೆ ಇದರ ಹೊರತಾಗಿಯೂ ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ. ಇಂದು ನಿಮ್ಮ ಅಚ್ಚುಮೆಚ್ಚಿನವರನ್ನು ಕ್ಷಮಿಸಲು ಮರೆಯಬೇಡಿ.

ಧನಸ್ಸು: ಇಂದು ಸಂಗಾತಿಯೊಡನೆ ವಾದವಿವಾದಗಳು ಹೆಚ್ಚಾಗುವ ಸಂದರ್ಭ ಬರಬಹುದು. ನಿಮ್ಮ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ಎಚ್ಚರಿಕೆವಹಿಸಿ.

ಮಕರ: ಇಡೀ ದಿನ ಆಯಾಸದಿಂದ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸುವುದು ಇದರಿಂದ ಶೀತದ ತೊಂದರೆ ಆರೋಗ್ಯದಲ್ಲಿ ಉಂಟಾಗುತ್ತದೆ. ಮೂರನೆಯವರನ್ನು ನಿಮ್ಮೊಂದಿಗೆ ಬೆರೆಯಲು ಬಿಡಬೇಡಿರಿ.

ಕುಂಭ: ಕಾರ್ಯ ಒತ್ತಡದಿಂದ ಕೆಲಸ ಕಾರ್ಯಗಳು ವಿಳಂಬವಾಗಲಿವೆ. ಸಂಚಾರದಲ್ಲಿ ಜಾಗ್ರತೆ ವಹಿಸಿ. ರಾಜಕೀಯದಲ್ಲಿ ಮುನ್ನಡೆ. ವ್ಯವಹಾರದಲ್ಲಿ ಯಶಸ್ಸು. ಮಹಿಳೆಯರಿಗೆ ಎಲ್ಲ ಕಡೆಯಿಂದ ಸಹಕಾರ ದೊರೆತು ಯಶಸ್ಸು ಸಿಗುತ್ತದೆ.

ಮೀನ: ಇಂದು ಸಂಗಾತಿಯು ನಿಮಗೆ ಉಡುಗೊರೆಯನ್ನು ನೀಡುವ ಸಾಧ್ಯತೆ ಇದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿ. ಮಕ್ಕಳಿಂದ ಅನುಕೂಲ, ಲಾಭದ ದಿನ, ಹಣಕಾಸಿನಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ ತೊಡಕು, ಕೃಷಿಕರಿಗೆ ಅನುಕೂಲ.

Leave a Reply

Your email address will not be published. Required fields are marked *

You cannot copy content of this page

error: Content is protected !!