ಮೇಷ – ಮೀನದವರೆಗಿನ ಸೋಮವಾರದ ರಾಶಿ ಭವಿಷ್ಯ.

ಮೇಷ: ಇಂದು ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸುವಿರಿ. ಅತೀ ಭಾವುಕರಾಗಿ ನಿಯಂತ್ರಣ ಕಳೆದುಕೊಳ್ಳುವುದು ಬೇಡ. ಕುಟುಂಬದಲ್ಲಿ ಘರ್ಷಣೆ, ದಾಂಪತ್ಯದಲ್ಲಿ ಕಲಹ.

ವೃಷಭ: ಜೀವನದ ವಿಚಾರದಲ್ಲಿ ಹುಡುಗಾಟಿಕೆಯನ್ನು ಬಿಟ್ಟು ಬಿಡುವುದೇ ಉತ್ತಮ. ಇಂದು ಸೃಜನಾತ್ಮಕ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸಂಗಾತಿ ಮತ್ತು ಆತ್ಮೀಯ ವ್ಯಕ್ತಿಗೆ ಬೆಂಬಲ ನೀಡುವಿರಿ. ಷೇರುಗಳಲ್ಲಿ ಹೂಡಿಕೆ ಮಾಡಬಹುದು, ಲಾಭ ಇರುತ್ತದೆ.

ಮಿಥುನ: ಪ್ರೇಮಿಯ ಮನಸ್ಥಿತಿ ಮತ್ತು ವಾಸ್ತವಗಳ ನಡುವೆ ವ್ಯತ್ಯಾಸ ಅರಿಯುವಿರಿ. ಇರುವ ಕೆಲಸದಲ್ಲಿ ಮುಂದುವರೆಯಿರಿ. ಸರಕಾರಿ ಕೆಲಸ ಪ್ರಯತ್ನಿಸಿ. ಆಸ್ತಿ ಸಮಸ್ಯೆ ನಿವಾರಣೆಯಾಗಲಿದೆ.

ಕರ್ಕಾಟಕ: ದಿನದ ಹೆಚ್ಚಿನ ಭಾಗ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಬಹುದು. ಯಾವುದು ಸರಿ ಯಾವುದು ತಪ್ಪು ಎಂಬ ಚರ್ಚೆಯು ನಿಮ್ಮನ್ನು ಗೊಂದಲದಲ್ಲಿರಿಸುತ್ತದೆ. ಧಾರ್ಮಿಕ ಭೇಟಿ ಅಥವಾ ಪ್ರಯಾಣಗಳಿಂದ ನಿಮಗೆ ಪ್ರಯೋಜನ ಉಂಟಾಗಬಹುದು.

ಸಿಂಹ: ಹೂಡಿಕೆಗಳಲ್ಲಿ ಮೋಸ ಆಗಬಹುದಾದ ಸಂದರ್ಭ ಬರಬಹುದು ಪರಿಣಿತರ ಸಲಹೆಯನ್ನು ಪಡೆಯುವುದು ಉತ್ತಮ. ನಿಮ್ಮ ಸಂಗಾತಿಯು ನಿಮ್ಮ ಜೀವನದ ಅಭಿವೃದ್ಧಿಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸುವಂತೆ ನಡೆಯುವುದರಿಂದ ಉತ್ತಮವಾದ ವ್ಯವಹಾರ ಸಾಧ್ಯ.

ಕನ್ಯಾ: ಕ್ಷೀರೋದ್ಯಮ, ಮತ್ಸೋದ್ಯಮ, ಕೃಷಿವಲಯದವರು ಸ್ವಲ್ಪಮಟ್ಟಿಗೆ ಜಾಗ್ರತೆ ವಹಿಸುವ ಅಗತ್ಯವಿದೆ. ಆದರೂ ಎಲ್ಲೆಡೆ ಅನುಕೂಲಕರ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಸರ್ಕಾರದ ಕಾರ್ಯಗಳು ಸುಗಮವಾಗಿ ಪೂರ್ಣಗೊಳ್ಳಲಿವೆ. ಸೃಜನಶೀಲ ಕೆಲಸಗಳತ್ತ ಮನಸ್ಸನ್ನು ಹರಿಸಿ.

ತುಲಾ: ಸಂತೋಷ ಕೂಟ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕವಾಗಿ ಉದ್ವಿಗ್ನತೆ ಹಾಗೂ ಕೋಪತಾಪ ಹೆಚ್ಚುವುದು. ಸಣ್ಣ ತೊಂದರೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ಮನೆಯಲ್ಲಿ ಯಾವುದೇ ವಿವಾದಿತ ವಿಷಯವನ್ನು ಚರ್ಚಿಸುವುದನ್ನು ತಪ್ಪಿಸಿ.

ವೃಶ್ಚಿಕ: ಇಂದು ನಿಮ್ಮ ಹೂಡಿಕೆಗಳಿಂದ ಇಂದು ಲಾಭವನ್ನು ನಿರೀಕ್ಷಿಸಬಹುದು. ಗೃಹ ಖರೀದಿ ಕನಸು ನನಸಾಗುವ ಸಾಧ್ಯತೆ ಇದೆ. ಇಂದು ನೀವು ಏನು ಶ್ರಮಪಡುತ್ತೀರಿ ಅವೆಲ್ಲದತ್ತೂ ಪ್ರತಿಫಲ ಸಿಗಲಿದೆ.

ಧನುಸ್ಸು: ಮಾನಸಿಕವಾಗಿ ಕುಗ್ಗುವಿಕೆ, ಹೃದಯ ಸಂಬಂಧಿ ಕಾಯಿಲೆಗಳು ಬಾಧಿಸಲಿವೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು, ಎಚ್ಚರವಿರಲಿ. ಸಮಸ್ಯೆಗಳಿಗೆ ಸಮರ್ಪಕ ಪರಿಹಾರದ ಕೊರತೆಯಿಂದಾಗಿ ಮಾನಸಿಕ ತೊಂದರೆ ಉಂಟಾಗುತ್ತದೆ. ಅನಗತ್ಯ ಖರ್ಚುಗಳನ್ನು ತಪ್ಪಿಸಿ.

ಮಕರ: ಇಂದು ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಲಾಭ ಪಡೆಯುತ್ತೀರಿ. ವಿದ್ಯಾರ್ಥಿಗಳಿಂದ ವ್ಯಾಪಾರಿಗಳವರೆಗೆ ಎಲ್ಲರಿಗೂ ಅನುಕೂಲವಾಗಲಿದೆ. ಆಸ್ತಿ ಸಂಬಂತ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ.

ಕುಂಭ: ಉದ್ಯೋಗ ಸ್ಥಳಗಳಲ್ಲಿ ಹೊಸ ಬದಲಾವಣೆಗಳಿಗೆ ಮುಕ್ತಮನಸ್ಸಿನಿಂದ ತೆರೆದುಕೊಂಡಲ್ಲಿ ಅದು ನಿಮಗೆ ಒಳಿತು. ಅಗತ್ಯಕ್ಕೆ ತಕ್ಕಷ್ಟು ಖರ್ಚು ಮಾಡಿ. ಉದ್ಯೋಗದಲ್ಲಿ ಉತ್ತಮ ಆದಾಯವಿರುತ್ತದೆ.

ಮೀನ: ಇಂದು ಸರ್ಕಾರಿ ಉದ್ಯೋಗ ಪಡೆಯಲು ಶ್ರಮಿಸಿದವರಿಗೆ ಸಿಹಿ ಸುದ್ದಿ ಕೇಳುವ ಅವಕಾಶ. ಸಗಟು ದಿನಸಿ ವ್ಯಾಪಾರಿಗಳಿಗೆ ಆರ್ಥಿಕ ಪ್ರಗತಿ ಕಾಣುವಿರಿ. ಹಿರಿಯರ ಆಸ್ತಿ ನಿಮಗೆ ಸ್ವಲ್ಪ ಪಾಲು ದೊರೆಯುತ್ತದೆ. ಸಂಗಾತಿಯ ಮನಸ್ಸಿನಲ್ಲಿ ಸ್ವಲ್ಪ ವ್ಯತ್ಯಾಸ ಕಾಣಬಹುದು. ಪತಿ-ಪತ್ನಿ ಮಧ್ಯೆ ವಿರಸ.

Leave a Reply

Your email address will not be published. Required fields are marked *

You cannot copy content of this page

error: Content is protected !!