ಪಂಚರತ್ನ ರಥಯಾತ್ರೆ ಸ್ವಾಗತಕ್ಕೆ ಗ್ರಾಮಾಂತರದಲ್ಲಿ ಅದ್ದೂರಿ ಸಿದ್ದತೆ_ಶಾಸಕ ಡಿ.ಸಿ ಗೌರಿಶಂಕರ್.
ತುಮಕೂರು_ಜೆಡಿಎಸ್ ಪಕ್ಷದ ಪಂಚರತ್ನ ರಥ ಯಾತ್ರೆಯು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ನವಂಬರ್ 14ರಂದು ಆಗಮಿಸುತ್ತಿದ್ದು ಯಾತ್ರೆಗೆ ಅದ್ದೂರಿ ಸಿದ್ದತೆ ನಡೆಯುತ್ತಿದೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ ಗೌರಿಶಂಕರ್ ತಿಳಿಸಿದ್ದಾರೆ.
ಹೆಬ್ಬೂರಿನ ಬಳಗೆರೆ ನಿವಾಸದಲ್ಲಿ ಭಾನುವಾರ ಮುಖಂಡರು ಕಾರ್ಯಕರ್ತರ ನೇತೃತ್ವದಲ್ಲಿ ಪಂಚರತ್ನ ಯಾತ್ರೆಯ ಪೂರ್ವಭಾವಿ ಸಭೆಯನ್ನು ಏರ್ಪಡಿಸಿದ್ದು ಯಾತ್ರೆಗೆ ಸಂಬಂಧಿಸಿದಂತೆ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ಯಾತ್ರೆಗೆ ಸಂಬಂಧಿಸಿದಂತೆ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ.ಸಿ ಗೌರಿಶಂಕರ್ ಅವರು ಪಂಚರತ್ನ ರಥಯಾತ್ರೆಯ ಸ್ವಾಗತಕ್ಕೆ ಗ್ರಾಮಾಂತರದಲ್ಲಿ ಸ್ವಾಗತಿಸಲು ಅದ್ದೂರಿ ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ಪಂಚರತ್ನ ರಥಯಾತ್ರೆ, ತುಮಕೂರು ನಗರ ,ಮಧುಗಿರಿ, ಕೊರಟಗೆರೆ, ಪಾವಗಡ ಭಾಗದಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಡಿಸೆಂಬರ್ 14ರಂದು ಕುಣಿಗಲ್ ಮಾರ್ಗವಾಗಿ ತುಮಕೂರು ಗ್ರಾಮಾಂತರ ಪ್ರವೇಶಿಸಲಿದ್ದು ಹೆಬ್ಬೂರಿನಲ್ಲಿ 10,000ಕ್ಕೂ ಹೆಚ್ಚು ಕಾರ್ಯಕರ್ತರನ್ನ ಸೇರಿಸಿ ಅದ್ದೂರಿಗಾಗಿ ರಥಯಾತ್ರೆಯನ್ನ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಇನ್ನು ಪೂರ್ವಭಾವಿ ಸಭೆಗೆ 2000ಕ್ಕೂ ಹೆಚ್ಚು ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದು ಇನ್ನು ರಥಯಾತ್ರೆಗೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಮುಖಂಡರ ಜೊತೆಗೆ ವಿಶೇಷವಾಗಿ ರಥ ಯಾತ್ರೆ ನಡೆಸಲಾಗುವುದು ಎಂದರು.
ಇನ್ನು ಪಂಚರತ್ನ ರಥಯಾತ್ರೆಯೂ ಹೆಬ್ಬೂರು ,ನಾಗವಲ್ಲಿ, ಹೊನ್ನುಡಿಕೆ, ಗೋಳೂರು ಉರ್ಡಿಗೆರೆ, ಬೆಳಗುಂಬ ಭಾಗದಲ್ಲಿ ಬಹಿರಂಗ ಸಭೆಗಳನ್ನ ಆಯೋಜಿಸಲಾಗಿದ್ದು ಬೆಳಗುಂಬ ಅಥವಾ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ವಾಸ್ತವ್ಯ ಹೂಡಲು ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದರು.
ವರದಿ _ಮಾರುತಿ ಪ್ರಸಾದ್ ತುಮಕೂರು