ಡಾ. ಜಿ ಪರಮೇಶ್ವರ್ ಸಿಎಂ ಆಗುವ ಸನ್ನಿವೇಶ ಬಂದರೆ ನಾವು ಸಹ ಬೆಂಬಲ ನೀಡುತ್ತೇವೆ_ ಕೆ.ಎನ್ ರಾಜಣ್ಣ.

ಡಾ. ಜಿ ಪರಮೇಶ್ವರ್ ಸಿಎಂ ಆಗುವ ಸನ್ನಿವೇಶ ಬಂದರೆ ನಾವು ಸಹ ಬೆಂಬಲ ನೀಡುತ್ತೇವೆ_ ಕೆ.ಎನ್ ರಾಜಣ್ಣ.

 

ತುಮಕೂರು_ಮಾಜಿ ಉಪಮುಖ್ಯಮಂತ್ರಿ ಹಾಗೂ ಕೋರಟಗೆರೆ ಕ್ಷೇತ್ರದ ಶಾಸಕರಾದ ಡಾ. ಜಿ ಪರಮೇಶ್ವರ್ ಹಾಗೂ ನಮ್ಮ ಮಧ್ಯೆ ಸಂಬಂಧ ಚೆನ್ನಾಗಿದ್ದು ಇನ್ನೂ ಅವರು ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರು ಮುಂದೆ ಅವರನ್ನು ಸಿಎಂ ಮಾಡೋ ಸಂದರ್ಭ ಬಂದರೆ ನಮ್ಮ ಬೆಂಬಲ ಕೂಡ ಅವರಿಗೆ ನೀಡುತ್ತೇವೆ ನಮ್ಮ ಜಿಲ್ಲೆಯವರು ಸಿಎಂ ಆಗುತ್ತಾರೆ ಎಂದರೆ ಬೆಂಬಲ ಕೊಡುವುದು ನಮ್ಮ ಕರ್ತವ್ಯ  ಎಂದು ಅಚ್ಚರಿ ಹೇಳಿಕೆಯನ್ನು ಸಹ ನೀಡಿದ್ದಾರೆ.

 

 

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು ಸಧ್ಯ ಕಾಂಗ್ರೆಸ್ ಪಕ್ಷದ ಬಸ್ ಲೋಡ್ ಆಗಿದೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವರು ಯಾರು ಇಲ್ಲ ಆದರೆ ಬರುವವರ ಸಂಖ್ಯೆ ಹೆಚ್ಚಿದೆ ಸದ್ಯ ಕಾಂಗ್ರೆಸ್ ಬಸ್ ಲೋಡ್ ಆಗಿದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

 

 

 

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಲಾರದಿಂದ ಸ್ಪರ್ಧಿಸುವ ಬಗ್ಗೆ ಮಾತನಾಡಿರುವ ಅವರು ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲೇ ನಿಂತರೂ ಅವರ ಗೆಲುವು ನಿಶ್ಚಿತ ರಾಜ್ಯದ ಎಲ್ಲಾ ಕ್ಷೇತ್ರಗಳು ಅವರಿಗೆ ಸೇಫ್ ಎಂದಿದ್ದಾರೆ ಇನ್ನೂ ತಾವು ಸಹ ನಮ್ಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಎಂದು ನಾನು  ಸಹ ಅವರಿಗೆ ತಿಳಿಸಿದ್ದೆ.

 

 

 

 

ಇನ್ನು ಸಿದ್ದರಾಮಯ್ಯ ನವರು ಮಾಸ್ ಲೀಡರ್ ಅವರನ್ನ ಸೋಲಿಸುವ ಬಗ್ಗೆ ಕೆಲವರು ಯೋಚಿಸುತ್ತಾರೆ ನಾವು ಅವರ ಅವರನ್ನ ಗೆಲ್ಲಿಸುವ ಬಗ್ಗೆ ಯೋಚಿಸುತ್ತೇವೆ ಇನ್ನು ರಾಜಕೀಯದಲ್ಲಿ ಸೋಲು ಗೆಲುವು ಎಲ್ಲವೂ ಸಾಮಾನ್ಯ ಇನ್ನು ಅವರ ಕ್ಷೇತ್ರದ ಆಯ್ಕೆಯ ವಿಷಯ ಅವರಿಗೆ ಬಿಟ್ಟದ್ದು ಎಂದಿದ್ದಾರೆ.

 

 

 

 

ಶಾಲೆಗಳಲ್ಲಿ ಕೇಸರಿಕರಣ ಸಹಮತಿ ಇಲ್ಲ

ಶಾಲೆಗಳಲ್ಲಿ ಕೇಸರಿ ಕಾರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು ಇನ್ನೂ ವಿವೇಕಾನಂದರು ದೇಶದ ಮಹಾನ್ ವ್ಯಕ್ತಿ ಅವರ ಹೆಸರನ್ನ ತೆಗೆದುಕೊಂಡು ಕೇಸರಿಕರಣ ಮಾಡುತ್ತಿರುವುದು ಸರಿಯಲ್ಲ ಆ ಮೂಲಕ ವಿವೇಕಾನಂದರಿಗೆ ಅವಮಾನ ಮಾಡುತ್ತಿದ್ದಾರೆ ಇನ್ನು ವಿವೇಕಾನಂದರು ಶಾಲೆಗಳಿಗೆ ಬಣ್ಣ ಬಳಿಯಲು ಹೇಳಿದ್ದಾರಾ…?? ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ವಿವೇಕಾನಂದರು ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಹೊರದೇಶದಲ್ಲಿ ನಮ್ಮ ದೇಶದ ಗೌರವವನ್ನು ಹೆಚ್ಚಿಸಿದ ಮಹಾತ್ಮ ಆದರೆ ಇಂಥ ವಿಚಾರದಲ್ಲಿ ಅವರ ಹೆಸರು ತರುವುದು ಎಷ್ಟು ಸರಿ ಹಾಗಾಗಿ ಇಂತಹ ವಿಷಯಕ್ಕೆ ನಮ್ಮ ಸಮ್ಮತಿ ಇಲ್ಲ ಎಂದಿದ್ದಾರೆ.

 

 

ಇನ್ನು ಶಿಕ್ಷಣ ಸಚಿವರ ಕಾರ್ಯ ವೈಖರಿ ಬಗ್ಗೆ ಪ್ರಸ್ತಾಪಿಸಿರುವ ಅವರು ಅವರ ಹಿನ್ನೆಲೆ ಯಾವುದು ಎಂದು ಎಲ್ಲರಿಗೂ ಗೊತ್ತಿದೆ ಸದ್ಯ ಚಡ್ಡಿ ಹೋಗಿ ಪ್ಯಾಂಟಾಗಿ ಬದಲಾಗಿದೆ ಎಂದರು.

 

 

 

ಬಿಜೆಪಿ ಗೌರ್ಮೆಂಟ್ ನಲ್ಲಿ ಕೆಲಸ ಎಲ್ಲವೂ ಕೂಡ ಕೇಶವಕೃಪಾದ ಆದೇಶದಂತೆ ನಡೆಯುತ್ತದೆ ಶಾಲೆಗಳಲ್ಲಿ ಮಕ್ಕಳಿಗೆ ಜಾತಿಯ ಸೋಂಕು ಬರಬಾರದು ಇದು ಹೀಗೆ ಮುಂದುವರೆದರೆ ಮಕ್ಕಳಿಗೆ ಹಾಗೂ ದೇಶಕ್ಕೆ ಮಾರಕ ಎಂದು ತಿಳಿಸಿದರು.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page