ಹಲವು ಗಂಭೀರ ಕಾಯಿಲೆಗೆ ತುಮಕೂರಿನಲ್ಲಿ ಈಗ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ. ಎಂದು ಅಪೋಲೋ ಆಸ್ಪತ್ರೆಯ ವೈದ್ಯರ ತಂಡ ಇಂದು ತಿಳಿಸಿದ್ದಾರೆ
ಮಹಾಮಾರಿ ಕೋರೋಣ ಪ್ರಕರಣಗಳು ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವ ಮಧ್ಯೆ ಕೋರೋಣ ದಿಂದ ಗುಣಮುಖರಾಗಿದ್ದವರಲ್ಲಿ ಅನೇಕ ಸಮಸ್ಯೆಗಳು ಕಾಡುತ್ತಿವೆ.
ಕಳೆದ ಆಗಸ್ಟ್ ಅಕ್ಟೋಬರ್ ತಿಂಗಳಲ್ಲಿ ಕೋವಿಡ್ ನಿಂದ ಬಳಲುತ್ತಿದ್ದ ಅನೇಕರು ಎದೆಯುರಿ ,ಮರಗಟ್ಟುವಿಕೆ ಮತ್ತು ಕೀಲು ನೋವು, ತಲೆನೋವು, ಪಾರ್ಶ್ವವಾಯು ,ಹೃದಯಾಘಾತ, ಹಾಗೂ ಶ್ವಾಸಕೋಶ ಸೇರಿ ಇನ್ನಿತರ ಗಂಭೀರ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ ಜೊತೆಗೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಆರೋಗ್ಯ ತಜ್ಞರಿಗೆ ಮತ್ತೊಂದು ಸವಾಲು ಎದುರಾಗಿದೆ ಕೊರನ ನಂತರ ಪರಿಸ್ಥಿತಿಗಳು ಸಾಮಾನ್ಯ ಪರಿಸ್ಥಿತಿ ಗಳಿಗಿಂತ ಭಿನ್ನವಾಗಿದೆ ಇದನ್ನು ನಿವಾರಿಸಲು ಉನ್ನತಮಟ್ಟದ ತಜ್ಞರು ಹಾಗೂ ಕೌಶಲ ಅಗತ್ಯವಿದೆ.
ಆದ್ದರಿಂದ ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯ ಇತ್ತೀಚಿಗಷ್ಟೇ ಕೊರೊನಾದಿಂದ ವಾಸಿಯಾದ ನಂತರ ಉಂಟಾಗುವ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ತುಮಕೂರಿನಲ್ಲಿ ಸೂಪರ್ ಸ್ಪೆಷಲಿಟಿ ಕೋವಿಡ್ ಕೇರ್ ಆರಂಭಿಸಿದೆ.
ರೋಗಿಗಳಿಗೆ ಪ್ರಾರ್ಥಮಿಕ ರೋಗ ನಿರ್ಣಯ ಹಾಗೂ ಸಂಪರ್ಕದ ನಂತರದ ಪ್ರಕರಣಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಮೊದಲ ಹಂತದಲ್ಲಿ ಕ್ಲಿನಿಕ್ನಲ್ಲಿ ಸಾಮಾನ್ಯ ವೈದ್ಯರು ಇರಲಿದ್ದಾರೆ ಪಾರ್ಶ್ವವಾಯು ಹೃದಯಾಘಾತ ಹಾಗೂ ಶ್ವಾಸಕೋಶದ ಅಂತಹ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯ ಹೊರಾಂಗಣದಲ್ಲಿ ಚಿಕಿತ್ಸೆ ನೀಡುವ ಅವಕಾಶ ಲಭ್ಯವಿದೆ. ಸಾಮಾನ್ಯ ವೈದ್ಯರು ಮಾತ್ರವಲ್ಲದೆ ಒಬ್ಬ ನರಶಸ್ತ್ರಚಿಕಿತ್ಸೆ ರೋಗ ತಜ್ಞ ಹಾಗೂ ಸಾಂಕ್ರಾಮಿಕ ಕಾಯಿಲೆ ಚಿಕಿತ್ಸೆ ನೀಡುವ ಒಬ್ಬ ವೈದ್ಯರು ವಾರಕ್ಕೊಮ್ಮೆ ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯಿಂದ ತುಮಕೂರಿಗೆ ಭೇಟಿ ನೀಡಲಿದ್ದಾರೆ.
ಅಲ್ಲದೆ ತುಮಕೂರಿನಲ್ಲಿ ಪ್ರತಿದಿನ ಸಾಮಾನ್ಯ ವೈದ್ಯರಿಗೆ ಸಹಾಯಮಾಡುವ ತಜ್ಞ ವೈದ್ಯರು ಇರಲಿದ್ದಾರೆ ವಿಶ್ವಾಸರ್ಹತೆ ಹೆಚ್ಚಿಸಲು ರೋಗಿಗಳ ಹಾಗೂ ಅವರ ಕುಟುಂಬದ ಅನುಪಸ್ಥಿತಿಯಲ್ಲಿ ಸಾಮಾನ್ಯವಾದರೂ ಬನ್ನೇರುಘಟ್ಟ ಆಸ್ಪತ್ರೆಯ ತಜ್ಞ ವೈದ್ಯರ ಜತೆ ಸಮಾಲೋಚನೆ ನಡೆಸುವ ಅವಕಾಶ ಇದೆ.
ಸ್ಥಳಾಂತರಕ್ಕೂ ಅವಕಾಶ
ತುಮಕೂರಿನಲ್ಲಿ ಹೊಸದಾಗಿ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಬನ್ನೇರುಘಟ್ಟ ಆಸ್ಪತ್ರೆಗೆ ಸ್ಥಳಾಂತರಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು.
ನರ್ಸ್ ಜೊತೆ ಸಂವಹನ ನಡೆಸಿದ ಬಳಿಕ ಸ್ಥಳಾಂತರಗೊಳ್ಳಲು ರೋಗಿಗಳಿಗೆ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ ಅಂದಾಜು ಶೇಕಡಾ 10 ರಷ್ಟು ರೋಗಿಗಳು ವಾಸಿಯಾದ ಬಳಿಕವೂ ಅನೇಕ ಸಮಸ್ಯೆಗಳಿಗೆ ಬಳಲುವ ಸಾಧ್ಯತೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ ಸಣ್ಣ ಅಥವಾ ದೊಡ್ಡ ಸಮಸ್ಯೆ ಇರಲಿ ಸಮಗ್ರ ಹಾಗೂ ಗುಣಮಟ್ಟದ ಚಿಕಿತ್ಸೆ ಸೇವೆ ನೀಡಲು ನಾವು ಬದ್ಧರಾಗಿದ್ದೇವೆ ಹಾಗಾಗಿ ತುಮಕೂರಿನಲ್ಲಿ ಹೊಸದಾಗಿ ಆರಂಭಿಸಿರುವ ಪೋಸ್ಟ್ ಘಟಕದಲ್ಲಿ ಗುಣಮಟ್ಟ ಚಿಕಿತ್ಸೆಗಳ ಮೂಲಕ ರೋಗಗಳನ್ನು ಸಂಪೂರ್ಣ ಚೇತರಿಕೆ ಪಡೆಯಲಿದ್ದಾರೆ ಎಂದು ಬನ್ನೇರುಘಟ್ಟ ಅಪೋಲೊ ಆಸ್ಪತ್ರೆಯ ನರ ಶಸ್ತ್ರಚಿಕಿತ್ಸಕ ಹಾಗೂ ಹಿರಿಯ ಸಲಹೆಗಾರ ಡಾಕ್ಟರರು ನಾಯಕ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಜ್ಞ ವೈದ್ಯರಾದ ಡಾಕ್ಟರ್ ಅರುಣ್ ನಾಯಕ್, ಡಾಕ್ಟರ್ ಪುಟ್ಟರಾಜು, ಡಾಕ್ಟರ್ ವಿನಯ್ ದೇವರಾಜು, ಡಾಕ್ಟರ್ ಸುರೇಶ್ ರಾಘವಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.