ಮೈಕ್ ವಿಚಾರ-ಧಾರ್ಮಿಕ ಕೇಂದ್ರಗಳಿಗೆ ಇಲಾಖೆ ಇಂದ ನೀಡಿಕೆ.
ತುಮಕೂರು- ದೇವಸ್ಥಾನ ಮಸೀದಿ ಚರ್ಚ್ ಪ್ರಾರ್ಥನಾ ಮಂದಿರ ಧಾರ್ಮಿಕ ಕೇಂದ್ರಗಳು ಹೋಟೆಲ್ ಬಾರ್ ರೆಸ್ಟೋರೆಂಟ್ ಸೇರಿದಂತೆ ಧ್ವನಿವರ್ಧಕ ಬಳಸುವ ಕಡೆಗಳಲ್ಲಿ ಶಬ್ದಮಾಲಿನ್ಯ ಉಂಟುಮಾಡದಂತೆ ಎಚ್ಚರಿಕೆ ನೀಡಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ .
ಜಿಲ್ಲೆಯಲ್ಲಿ ಈವರೆಗೆ ಎಂಟು ನೂರಕ್ಕೂ ಹೆಚ್ಚು ಮಂದಿರ, ವಾಣಿಜ್ಯ ಸಂಸ್ಥೆಗಳಿಗೆ ನೋಟೀಸ್ ನೀಡಲಾಗಿದ್ದು, ನಿಗದಿತ ಡೆಸಿಬಲ್ ಗಿಂತ ಹೆಚ್ಚಿನ ಶಬ್ದವಾಗದಂತೆ ನೋಡಿಕೊಳ್ಳಬೇಕು, ಹೆಚ್ಚಿನ ಶಬ್ದವಾದರೆ, ನೀವೇ ಜವಾಬ್ದಾರರು ಎಂದು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ವಸತಿ, ವಾಣಿಜ್ಯ, ಕೈಗಾರಿಕಾ ಪ್ರದೇಶದಲ್ಲಿ ಯಾವ ರೀತಿಯಲ್ಲಿ ಮಿತಿಯಲ್ಲಿ ಶಬ್ದ ಇರಬೇಕು ಎಂಬ ಬಗ್ಗೆಯೂ ನಿರ್ದೇಶನ ನೀಡಿದ್ದಾರೆ. ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯ ರೂಪಿಸಿರುವ ನಿಯಮಗಳನ್ನು ಪಾಲಿಸುವಂತೆ ತಿಳಿಸಲಾಗಿದೆ. ವಸತಿ ಪ್ರದೇಶದಲ್ಲಿ ಹಗಲು ವೇಳೆ 55 ಡೆಸಿಬಲ್, ರಾತ್ರಿ ವೇಳೆ 45 ಡೆಸಿಬಲ್ ಶಬ್ದ ಮಿತಿ ಇರಬೇಕು.
ಕೈಗಾರಿಕಾ ಪ್ರದೇಶದಲ್ಲಿ ಹಗಲು- 75 ಡೆಸಿಬಲ್ ರಾತ್ರಿ 70ಡೆ ಸಿಬಲ್ ,ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್, ರಾತ್ರಿ 55ಡೆ ಸಿಬಲ್, ನಿಶಬ್ದ ಎಂದು ಗುರುತಿಸಿರುವ ಪ್ರದೇಶದಲ್ಲಿ ಹಗಲು 50d ಸಿಬಲ್ ರಾತ್ರಿ 40 ಡೆಸಿಬಲ್ ಗಿಂತ ಹೆಚ್ಚು ಶಬ್ದ ಉಂಟು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ.