ಆರ್ ಟಿ ಐ ಅಡಿಯಲ್ಲಿ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಆರೋಪ.
ತುಮಕೂರು_ಕಲ್ಪತರು ನಾಡು ತುಮಕೂರು ನಗರದಲ್ಲಿ ಸಾಕಷ್ಟು ಕಾಲೇಜುಗಳು ಮೂಲಭೂತ ಸೌಕರ್ಯಗಳು ಇದ್ದು ಅಧಿಕೃತವಾಗಿ ನಡೆಯುತ್ತವೆ ಇನ್ನು ಕೆಲವು ಶಿಕ್ಷಣ ಸಂಸ್ಥೆಗಳು ಮೂಲಭೂತ ಸೌಕರ್ಯಗಳು ಇಲ್ಲದೆ ಇದ್ದರೂ ಅನಧಿಕೃತವಾಗಿ ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ ಬಗ್ಗೆ ಪಿಯು ಇಲಾಖಾ ಮಂಡಳಿ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದೆ ಎಂದು ಬೆಳಗುಂಬ ಟಿ.ದಾಸಪ್ಪ ಎಂಬುವವರು ಆರೋಪ ಮಾಡಿದ್ದಾರೆ.
ಆರ್. ಟಿ ಐ ಅಡಿಯಲ್ಲಿ ತುಮಕೂರು ನಗರದ ಕೆಲ ಕಾಲೇಜುಗಳ ಮಾಹಿತಿಯನ್ನು ದಾಸಪ್ಪ ಎಂಬುವರು ಪಿಯು ಶಿಕ್ಷಣ ಇಲಾಖೆಯಿಂದ ಪಡೆಯಲು ಮುಂದಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಪಿಯು ಉಪನಿರ್ದೇಶಕರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಆರೋಪಿಸಿದ್ದಾರೆ.
ಇನ್ನು ಕೆಲ ಖಾಸಗಿ ಕಾಲೇಜುಗಳು ಇಲಾಖೆಗಳ ಗಮನಕ್ಕೆ ತಾರದೆ ಸರ್ಕಾರಿ ಆದೇಶಗಳನ್ನು ಗಾಳಿಗೆ ತೂರಿ ಯಾವುದೇ ಮಾಹಿತಿ ನೀಡದೆ ಸ್ಥಳಾಂತರಗೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ಆರ್ ಟಿ ಐ ಅಡಿಯಲ್ಲಿ 2019 ರಿಂದ ಇಲ್ಲಿಯವರೆಗೂ ಸತತ ಹೋರಾಟ ಮಾಡಿ ಆಯೋಗದ ಮೊರೆಹೋದರು ಸಹ ಆಯೋಗಕ್ಕೆ ತಪ್ಪು ಮಾಹಿತಿ ನೀಡಿ ಇರುವರೆಗೂ ಅರ್ಜಿದಾರರಿಗೆ ಪಿಯು ಉಪ ನಿರ್ದೇಶಕರು ಮಾಹಿತಿ ನೀಡುವಲ್ಲಿ ಸಾಕಷ್ಟು ಹಿಂದೇಟು ಹಾಕುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನ ಮೂಡಿಸಿದೆ ಎಂದರು.
ಸರ್ಕಾರದ ಮಾರ್ಗಸೂಚಿ ಅನ್ವಯ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ತುಮಕೂರಿನ ವಿದ್ಯಾನಗರದ ಖಾಸಗಿ ಪಿಯು ಕಾಲೇಜು ಸರ್ಕಾರದ ಮಾರ್ಗಸೂಚಿಯ ವಿರುದ್ಧವಾಗಿ ಸ್ಥಳಾಂತರಗೊಂಡಿದ್ದು ಇದಕ್ಕೆ ಸಂಬಂಧಿಸಿದಂತೆ ದಾಸಪ್ಪ ಎಂಬುವರು ಪಿಯು ಶಿಕ್ಷಣ ಇಲಾಖೆಗೆ ಮಾಹಿತಿ ಪಡೆಯಲು ಮುಂದಾಗಿದ್ದರು ಆದರೆ ಇದುವರೆಗೂ ಅಧಿಕಾರಿಗಳು ಮಾಹಿತಿ ನೀಡದೆ ಅರ್ಜಿದಾರರನ್ನು ಕಚೇರಿಗೆ ಬರಲು ತಿಳಿಸಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ . ಅರ್ಜಿದಾರರನ್ನು ದಿಕ್ಕುತಪ್ಪಿಸುವ ದೊಡ್ಡ ಹುನ್ನಾರವನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.
ಇನ್ನು ಮಾಹಿತಿ ನೀಡುವಲ್ಲಿ ಅಧಿಕಾರಿಗಳ ಈ ದ್ವಂದ್ವ ನೀತಿ, ಮಾಹಿತಿ ನೀಡುವಲ್ಲಿ ವಿಳಂಬ ನಿಲುವು ಇಲಾಖೆಯ ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಆಗಿದ್ದು ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಅಧಿಕೃತ ಇಲಾಖೆ ಅಧಿಕಾರಿಗಳೇ ಮಾಹಿತಿ ನೀಡುವಲ್ಲಿ ಹಿಂಜರಿದರೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಪಾಡೇನು ಎಂದು ಪ್ರಶ್ನಿಸಿದ್ದಾರೆ.
ತುಮಕೂರು ನಗರದಲ್ಲಿ ಅನದಿಕೃತವಾಗಿ ಕೆಲ ಪಿಯು ಕಾಲೇಜುಗಳು ನೊಂದಣಿಯಾದ ಸಮಯದಲ್ಲಿ ಇದ್ದ ಆಡಳಿತ ಮಂಡಳಿಯನ್ನು ಹೊರತುಪಡಿಸಿ ಖಾಸಗಿ ವ್ಯಕ್ತಿಗಳ ಮೂಲಕ ಸಾಕಷ್ಟು ಕಾಲೇಜುಗಳು ತುಮಕೂರು ನಗರದಲ್ಲಿ ಶಿಕ್ಷಣ ನೀಡುವಲ್ಲಿ ನಿರತರಾಗಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ವಿದ್ಯಾರ್ಥಿಗಳು ಎಚ್ಚರ ದಿಂದಿರಬೇಕು ಎಂದರು.
ಇದಕ್ಕೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳು ಜಾಗೃತಿ ವಹಿಸಬೇಕು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸರಿಯಾದ ಮಾಹಿತಿ ನೀಡಬೇಕು. ಇಂದಿನ ದಿನದಲ್ಲಿ ಸಾಕಷ್ಟು ಪೋಷಕರು ಕಷ್ಟಪಟ್ಟು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಮಾಡಿಸುತ್ತಿದ್ದ ಇಂತಹ ಸಂದರ್ಭದಲ್ಲಿ ಇಂತಹ ಅನಧಿಕೃತ ಕಾಲೇಜುಗಳ ಬಗ್ಗೆ ಎಲ್ಲರೂ ಎಚ್ಚರ ವಹಿಸಬೇಕು ಎಂದು ತಿಳಿಸಿದ್ದಾರೆ.