ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್…! ಮಾರ್ಚ್ನಲ್ಲಿ 12 ರಿಂದ 14 ವರ್ಷದ ಮಕ್ಕಳಿಗೆ ಸಿಗಲಿದೆ ವ್ಯಾಕ್ಸಿನ್…!
ಬೆಂಗಳೂರು : ಮಕ್ಕಳ ಪೋಷಕರಿಗೆ ಗುಡ್ ನ್ಯೂಸ್ . ಮಾರ್ಚ್ನಲ್ಲಿ 12 ವರ್ಷದಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ಸಿಗಲಿದೆ.
12 ವರ್ಷದಿಂದ 14 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ರೆಡಿಯಾಗಿದ್ದು, ಫೆಬ್ರವರಿ ಅಂತ್ಯಕ್ಕೆ ವ್ಯಾಕ್ಸಿನೇಷನ್ ನೀಡಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ 3.37 ಕೋಟಿ 15-17 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗಿದ್ದು, ಇದೀಗ 12-14 ವರ್ಷದ ಒಳಗಿನ ಮಕ್ಕಳಿಗೆ ವ್ಯಾಕ್ಸಿನ್ ರೆಡಿಯಾಗಿದೆ. 2-14 ವರ್ಷದ ಮಕ್ಕಳಿಗೆ ಯುಗಾದಿಯಲ್ಲಿ ವ್ಯಾಕ್ಸಿನ್ ನೀಡುವ ಸಾಧ್ಯತೆಗಳಿದ್ದು, ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ಗೆ ಈಗಾಗಲೇ ಅನುಮತಿ ನೀಡಿದೆ.