ಮಿಡ್ಲ್ಯಾಂಡ್ಸ್ ಯುಕೆ ನಲ್ಲಿ 67ನೇ ಕನ್ನಡ ರಾಜ್ಯೋತ್ಸವ: ರಾಯಲ್ ಲೇಮಿಂಗ್ಟನ್ ಸ್ಪಾ ನಲ್ಲಿ ಮೊಳಗಿದ ಕನ್ನಡ ಡಿಂಡಿಮ!
ಬಂಧಗಳನ್ನು ಬೆಸೆಯೋಣ, ಕನಸುಗಳನ್ನು ಕಟ್ಟೋಣ; ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸೋಣ!ಎಂಬ ಘೋಷದೊಂದಿಗೆ ಪ್ರಥಮ ಬಾರಿಗೆ ಮಿಡ್ಲ್ಯಾಂಡ್ಸ್ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಿದ್ದರು.
ಮಿಡ್ಲ್ಯಾಂಡ್ಸ್ ನಲ್ಲಿ ಕನ್ನಡ ಡಿಂಡಿಮದ ಸದ್ದು ಜೋರಾಗಿಯೇ ಮೊಳಗಿದೆ. ನವೆಂಬರ್ ೧೯ ರಂದು ಲೇಮಿಂಗ್ಟನ್ ಸ್ಪಾನಲ್ಲಿ ಮಿಡ್ಲ್ಯಾಂಡ್ಸ ಕನ್ನಡಿಗರು(Coventry,Leamingtonspa ,Warwick, Rugby,Solihul, Birmingham) ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಗಿದ್ದು, ದಿ ಸಿಖ್ ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಕಮ್ಯೂನಿಟಿ ಸೆಂಟರ್ ನಲ್ಲಿ ಸಂಪೂರ್ಣ ಕನ್ನಡಮಯವಾಗಿತ್ತು.
ಕನ್ನಡದ ದೀಪ ಹಚ್ಚುವುದರೊಂದಿಗೆ ಶ್ರೀ . ಹಿತೇಶ್ ಸಕ್ಸೆನ ರವರು (ಸಾಂಸ್ಕೃತಿಕ ಮುಖ್ಯಸ್ಥರು ,CGI ಬರ್ಮಿಂಗ್ಹ್ಯಾಮ್) ಮತ್ತು ಡಾ.ಶ್ರೀಮತಿ ಮಧುಗೌಡ ರವರು(ಮಕ್ಕಳ ತಜ್ಞರು ಹಾಗು ಯೋಗ ಭೋದಕರು) ಕಾರ್ಯಕ್ರಮ ಉದ್ಘಾಟಿಸಿದರು ಮತ್ತು ಕಾರ್ಯಕ್ರಮದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಸಾಂಸ್ಕೃತಿಕ ಮುಖ್ಯಸ್ಥರು ,CGI ಬರ್ಮಿಂಗ್ಹ್ಯಾಮ್ ನ ಶ್ರೀ . ಹಿತೇಶ್ ಸಕ್ಸೆನ ರವರು ಮಾತನಾಡಿ, ಕನ್ನಡಿಗರು ರಾಯಲ್ ಲೇಮಿಂಗ್ಟನ್ ಸ್ಪಾ ನಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಇಷ್ಟೊಂದು ವೈಭವೋಪೇತವಾಗಿ ಆಚರಿಸುತ್ತಿರುವುದು ನನ್ನನ್ನು ಪುಳಕಿತನನ್ನಾಗಿಸಿದೆ. ನಿಮ್ಮ ಕೊಡಿಗೆ ಭಾರತಕ್ಕೆ ಹಾಗು ಕರ್ನಾಟಕಕ್ಕೆ ಬಹಳ ಇದೆ ,ಇಂತಹ ಆಚರಣೆಗಳು ವಿದೇಶಗಳಲ್ಲಿರುವ ಭಾರತೀಯರನ್ನು ಒಂದೆಡೆ ಸೇರಿಸಲು ಯಶಸ್ವಿಯಾಗುತ್ತವೆ. ಹಬ್ಬಗಳ ನೆಪದಲ್ಲಿ ಕನ್ನಡಿಗರು ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಂಡು ಬಾಂಧವ್ಯ ವೃದ್ಧಿಸಲು ನೆರವಾಗುತ್ತವೆ ಎಂದರು.
ಡಾ.ಶ್ರೀಮತಿ ಮಧುಗೌಡ ರವರು ಮಾತನಾಡಿ , ನಮಗೆಲ್ಲರಿಗೂ ಕನ್ನಡದ ಪ್ರಾಮುಕ್ಯತೆ ಎಷ್ಟಿದೆ ,ಜ್ಞಾನಪೀಠ ಪ್ರಶಸ್ತಿ ಯ ಬಗ್ಗೆ ತಿಳಿಸಿಕೊಟ್ಟರು. ಜೊತೆಗೆ ಯೋಗದ ಮಹತ್ವದ ಬಗ್ಗೆ ತಿಳಿಹೇಳಿದರು.
ಹಚ್ಚೇವು ಕನ್ನಡದ ದೀಪ , ಕರುನಾಡ ತಾಯಿ ಸದಾ ಚಿನ್ಮಯಿ , ಎಸ್ಪಿಬಿ ಸ್ವರಾಂಜಲಿ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಸೇರಿ ಇತರ ಹಾಡುಗಳು ಸಿಖ್ ಕಮ್ಯುನಿಟಿ ಸೆಂಟರ್ ತುಂಬೆಲ್ಲಾ ಕನ್ನಡದ ಇಂಪು ಪಸರಿಸಲು ಕಾರಣವಾದವು.
ವಾದ್ಯ ವೀಣೆ , ಕನ್ನಡಿಗ ಅನಿವಾಸಿ ಕನ್ನಡಿಗನಾದಗ ಎಂಬ ಹಾಸ್ಯದ ಲಘು ಕೃತಿ , ನೃತ್ಯ, ಇತರೆ ಹಾಡುಗಳು ನೆರೆದವರನ್ನು ರಂಜಿಸಿದವು. ಸವಿ ಸವಿಯಾದ ಅಡುಗೆ ಹೊಟ್ಟೆಗೆ ಹಿತಕಾರಿಯಾಗಿತ್ತು.
ಹೊಸಬಟ್ಟೆ ಧರಿಸಿ ಕನ್ನಡಿಗರು ಸಡಗರದಿಂದ ಭಾಗವಹಿಸಿದ್ದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಅನುರಣನ ನಡೆಯಿತು ಮಕ್ಕಳು, ಮಹಿಳೆಯರು, ಪುರುಷರು ನೃತ್ಯ ಮಾಡಿ ಸಂಭ್ರಮಿಸಿದರು.
ಮಿಡ್ಲ್ಯಾಂಡ್ಸ್ ಕನ್ನಡಿಗರು , UK