ತುಮಕೂರಿನಲ್ಲಿ ವಿಚಿತ್ರ ಪ್ರಕರಣ, ನಾಯಿಗಳು ಮೃತ ದೇಹ ಕಿತ್ತು ತಿಂದ ವೇಳೆ ಪ್ರಕರಣ ಬೆಳಕಿಗೆ ವ್ಯಕ್ತಿಯ ಸಾವು ಸಹಜವೋ…ಅಸಜಹವೋ…??

ತುಮಕೂರಿನಲ್ಲಿ ವಿಚಿತ್ರ ಪ್ರಕರಣ, ನಾಯಿಗಳು ಮೃತ ದೇಹ ಕಿತ್ತು ತಿಂದ ವೇಳೆ ಪ್ರಕರಣ ಬೆಳಕಿಗೆ ವ್ಯಕ್ತಿಯ ಸಾವು ಸಹಜವೋ…ಅಸಜಹವೋ…??

 

 

 

 

ತುಮಕೂರು _ ತುಮಕೂರಿನ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿ ಕಳೆದ ಐದು ದಿನಗಳಿಂದ ನಾಪತ್ತೆ ಆಗಿದ್ದು ಇಂದು ಆತನ ಮೃತ ದೇಹ ಪತ್ತೆಯಾಗಿದ್ದು ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು ಮೃತಪಟ್ಟ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆಯಾ ಎನ್ನುವ ಶಂಕೆ ವ್ಯಕ್ತವಾಗಿದೆ.

 

 

 

 

ತುಮಕೂರಿನ ಕ್ಯಾತ್ಸಂದ್ರ ಬಳಿಯ ಡಿ ಎನ್ ಡಿ ಎಸ್ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ಮಾಡುತ್ತಿದ್ದ ಆಂಧ್ರ ಮೊಲದ ರತ್ನಗಿರಿ ಬಳಿಯ ಹೇಮಾಚಾರಿ ಕಳೆದ ನಾಲ್ಕು ವರ್ಷಗಳಿಂದ ಕಲ್ಯಾಣ ಮಂಟಪದಲ್ಲಿ ಕ್ಲೀನಿಂಗ್ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.

 

 

 

 

ಕಳೆದ ನಾಲ್ಕು ದಿನದ ಹಿಂದೆ ಕಲ್ಯಾಣ ಮಂಟಪಕ್ಕೆ ಕೆಲಸಕ್ಕಾಗಿ ಹೋಗಿದ್ದ ಹೇಮಾ ಚಾರಿ ನಾಪತ್ತೆಯಾಗಿದ್ದ ಕುಡಿತದ ಚಟಕ್ಕೆ ಬಿದ್ದಿದ್ದ ಹೇಮಾ ಚಾರಿ ಮನೆಗೆ ಬರುತ್ತಾನೆ ಎಂದು ಕುಟುಂಬಸ್ಥರು ಸಹ ಸುಮ್ಮನಾಗಿದ್ದರೂ.

 

 

 

 

 

ಆದರೆ ಇಂದು ಹೇಮಾ ಚಾರಿ ಕೆಲಸ ನಿರ್ವಹಿಸುತ್ತಿದ್ದ ಕಲ್ಯಾಣ ಮಂಟಪದ ಹಿಂಬದಿಯ ಕಸದ ರಾಶಿಯಲ್ಲಿ ಇಂದು ಆತನ ಮೃತ ದೇಹ ತುಂಡುಗಳಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

 

 

 

 

 

ನಾಯಿಗಳು ದೇಹವನ್ನು ಕಿತ್ತು ತಿನ್ನುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ. 

 

 

 

ಇಂದು ಮಧ್ಯಾಹ್ನ ಕಲ್ಯಾಣ ಮಂಟಪದ ಹಿಂಬದಿಯಲ್ಲಿ ಬಿದ್ದಿದ್ದ ಕಸದ ರಾಶಿಯಲ್ಲಿ ನಾಯಿಗಳು ಹೇಮಚಾರಿ ದೇಹವನ್ನು ಕಿತ್ತು ತಿನ್ನುತ್ತಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

 

 

 

 

ಇನ್ನು ಪತ್ತೆಯಾಗದ ಮೃತ ದೇಹದ ಪೂರ್ಣ ಭಾಗಗಳು. 

 

 

ಇನ್ನು ಮೃತಪಟ್ಟ ಹೇಮಾ ಚಾರಿ ಮೃತದೇಹವು ತುಂಡು ತುಂಡಾಗಿ ಸಿಕ್ಕಿದ್ದು ದೇಹದ ಸಂಪೂರ್ಣ ಭಾಗಗಳು ಇದುವರೆಗೂ ಪತ್ತೆಯಾಗಿಲ್ಲ ಮೃತಪಟ್ಟ ಹೇಮಾಚಾರ್ಯ ಕೈ ಬೆರಳುಗಳು ಹಾಗೂ ಅಂಗಾಲಿನ ಭಾಗ ನಾಪತ್ತೆ.

 

 

ಕಲ್ಯಾಣ ಮಂಟಪದ ತ್ಯಾಜ್ಯ ಸಂಸ್ಕರಣ ಘಟಕದ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವ ಶಂಕೆ…??

 

ಕಲ್ಯಾಣ ಮಂಟಪದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಂಸ್ಕರಣ ಮಾಡುವ ನಿಟ್ಟಿನಲ್ಲಿ ಕಲ್ಯಾಣ ಮಂಟಪದಲ್ಲಿ ತ್ಯಾಜ್ಯ ಸಂಸ್ಕರಣ ಯಂತ್ರವನ್ನು ಇಡಲಾಗಿದ್ದು ಈ ಯಂತ್ರಕ್ಕೆ ಹೇಮಚಾರಿ ಸಿಕ್ಕಿ ಮೃತ ಪಟ್ಟ ಅನುಮಾನ ಕೆಲ  ಕುಟುಂಬಸ್ಥರಿಂದ ವ್ಯಕ್ತ.

 

 

 

ಮೃತನ ಕುಟುಂಬಸ್ಥರು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು ಕಳೆದ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಹೇಮಾಚಾರಿ ಕುಟುಂಬದೊಂದಿಗೆ ನೆಮ್ಮದಿಯಿಂದ ತುಮಕೂರಿನ ಅಂಬೇಡ್ಕರ್ ನಗರದಲ್ಲಿ ಜೀವನ ನಡೆಸುತ್ತಿದ್ದ ಆದರೆ ಇಂದು ಆತ ಕೆಲಸ ನಿರ್ವಹಿಸುತ್ತಿದ್ದ ಜಾಗದಲ್ಲೇ ಮೃತ ದೇಹದವಾಗಿ ಪತ್ತೆಯಾಗಿದ್ದು ಸಾಕಷ್ಟು ಅನುಮಾನ ಮೂಡಿಸಿದ್ದು ಆತನನ್ನು ಕೊಲೆ ಮಾಡಲಾಗಿದೆ ಎನ್ನುವ ಶಂಕೆಯನ್ನ ವ್ಯಕ್ತಪಡಿಸಿದ್ದು ಕೂಡಲೇ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

 

 

 

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ.

ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ, ಸರ್ಕಲ್ ಇನ್ಸ್ಪೆಕ್ಟರ್ ರಾಮ್ ಪ್ರಸಾದ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಣಿಖೆ ಕೈಗೊಂಡಿದ್ದಾರೆ.

 

 

 

 

 

 

 

 

 

ಎಫ್ ಐ ಆರ್ ದಾಖಲು. 

 

ಘಟನೆಗೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಕಲ್ಯಾಣ ಮಂಟಪದ ಮಾಲೀಕರಾದ ಸುನಿತ, ಹಾಗೂ ಕಲ್ಯಾಣ ಮಂಟಪದ ಮ್ಯಾನೇಜರ್  ಜಗದೀಶ್ ವಿರುದ್ಧ ಎಫ್ಐಆರ್ ದಾಖಲು.

 

 

 

ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Leave a Reply

Your email address will not be published. Required fields are marked *