ಕುಚ್ಚಂಗಿ ಕೆರೆಯಲ್ಲಿ ಮೂವರ ಕೊಲೆ ಪ್ರಕರಣ, ಸಿಬಿಐ ,ಸಿಐಡಿ ತನಿಖೆಗೆ ಒತ್ತಾಯಿಸಿದ SDPI ಸಂಘಟನೆ.

ಕುಚ್ಚಂಗಿ ಕೆರೆಯಲ್ಲಿ ಮೂವರ ಕೊಲೆ ಪ್ರಕರಣ, ಸಿಬಿಐ ,ಸಿಐಡಿ ತನಿಖೆಗೆ ಒತ್ತಾಯಿಸಿದ SDPI ಸಂಘಟನೆ.

 

 

 

ತುಮಕೂರು -ರಾಜ್ಯದಲ್ಲೇ ತೀವ್ರ ಕುತೂಹಲ ಕೆರಳಿಸಿದ್ದ ತುಮಕೂರಿನ ಕುಚ್ಚಂಗಿ ಕೆರೆಯಲ್ಲಿ ದಕ್ಷಿಣ ಕನ್ನಡದ ಮೂವರನ್ನೂ ಕಾರಿನಲ್ಲಿ ಇಟ್ಟು ಸುಟ್ಟ ಪ್ರಕರಣ ನಡೆದಿದ್ದು.

 

 

 

 

 

ಘಟನೆ ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಇನ್ನು ಘಟನೆಯಲ್ಲಿ ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಟಿ.ಬಿ ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್(45) , ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲ್ ನಿವಾಸಿ ಇಮ್ತಿಯಾಜ್(34) ರವರನ್ನು ಬೇರೆಡೆ ಕೊಲೆ ಮಾಡಿ ಅವರ ಮೃತದೇಹಗಳನ್ನು ಕಾರಿನಲ್ಲಿ ಇಟ್ಟು ಕಾರಿಗೆ ಬೆಂಕಿ ಹಚ್ಚಿ ಕ್ರೂರವಾಗಿ ಸುಟ್ಟು ಹಾಕಲಾಗಿತ್ತು.

 

 

 

ಇನ್ನು ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸರು ಸಹ ಮುಂದಾಗಿ ಕೊಲೆ ಆರೋಪಿಗಳನ್ನು ಬಂಧಿಸಿದ್ದರು.

 

 

 

 

ಇನ್ನು ಮೂವರು ಕೊಲೆಗಿಡದ ಪ್ರಕರಣವನ್ನ ತನಿಖೆ ನಡೆಸಿದ ಪೊಲೀಸರು ಪ್ರಕರಣದ ಆರೋಪಿಗಳಾದ ಪಾತರಾಜು ಗಂಗರಾಜು ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಧಿ ವಿಷಯಕ್ಕೆ ಕೊಟ್ಟ ಹಣವನ್ನು ವಾಪಸ್ ಕೇಳಿದ ಕಾರಣವನ್ನು ಮುಂದಿಟ್ಟುಕೊಂಡ ಆರೋಪಿಗಳು ಮೂವರಣ ಭೀಕರವಾಗಿ ಕೊಲೆಗೈದು ಕಾರಿನಲ್ಲಿ ಅವರ ಮೃತ ದೇಹವನ್ನು ಇಟ್ಟು ಸುಟ್ಟು ಕೊಲೆಗೈಯಲಾಗಿದೆ ಇನ್ನು ಪ್ರಕರಣ ತನಿಕೆಯಲ್ಲಿದೆ ಎಂದು ಪೊಲೀಸರು ಸಹ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಮಾಹಿತಿಯನ್ನು ತಿಳಿಸಿದರು.

 

 

 

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು , ಇನ್ನು SDPI ಸಂಘಟನೆಯ ರಾಜ್ಯನಾಯಕ ಭಾಸ್ಕರ್ ಪ್ರಸಾದ್ ಪ್ರಕರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದು .

 

 

 

 

ಇನ್ನು ಮೂವರನ್ನ ಭೀಕರವಾಗಿ ಕೊಲೆ ಗೈದಿರುವ ಪ್ರಕರಣ ಸಾಕಷ್ಟು ಅನುಮಾನಗಳನ್ನ ಹುಟ್ಟು ಹಾಕಿದ್ದು ಇನ್ನೂ ಕೊಲೆಯಾದ ವ್ಯಕ್ತಿಗಳು ಸುಮಾರು 60 ಲಕ್ಷಕ್ಕೂ ಹೆಚ್ಚು ಹಣವನ್ನು ಹಣವನ್ನ ತುಮಕೂರಿಗೆ ತಂದಿರುವ ಸಾಹುಲ್ ಹಾಗೂ ಅವರ ಸ್ನೇಹಿತರನ್ನು ಭೀಕರವಾಗಿ ಭೀಕರವಾಗಿ ಕೊಲೆಗೈದಿದ್ದಾರೆ ಎಂದು ಆರೋಪಿಸಿರುವ ಅವರು ನಕಲಿ ಚಿನ್ನ ಹಾಗೂ ನಿಧಿ ಹುಡುಕುವ ವ್ಯವಸ್ಥಿತ ಜಾಲ ರಾಜ್ಯದಲ್ಲೇ ಸಕ್ರಿಯವಾಗಿದ್ದು ಇಂತಹ ಜಾಲಕ್ಕೆ ರಾಜ್ಯದಲ್ಲಿ ಹಲವರು ಮೋಸ ಹೋಗಿದ್ದು ಇನ್ನೂ ಮೂವರು ಜೀವವನ್ನು ಕಳೆದುಕೊಂಡಿದ್ದಾರೆ ಹಾಗಾಗಿ ಪ್ರಕರಣ ಗಂಭೀರವಾಗಿರುವ ಕಾರಣ ಸೂಕ್ತ ತನಿಖೆಯ ಅವಶ್ಯಕತೆ ಇದ್ದು ಪ್ರಕರಣದ ಸತ್ಯ ಸತ್ಯತೆ ಹೊರಬರಬೇಕು ಹಾಗೂ ವ್ಯವಸ್ಥಿತ ಜಾಲವನ್ನು ಕಟ್ಟಿ ಹಾಕಲು ಉನ್ನತ ಮಟ್ಟದ ತನಿಖೆ ಅವಶ್ಯಕವಾಗಿದ್ದು ಕೂಡಲೆ ಮೂವರು ಮೃತಪಟ್ಟ ಪ್ರಕರಣವನ್ನು ಸಿಬಿಐ ಅಥವಾ ಸಿಐಡಿ ತನಿಖೆಗೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

 

 

 

 

ಇನ್ನು ರಾಜ್ಯದಲ್ಲಿ ಇಂತಹ ಜಾಲಕ್ಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಬಲಿಯಾಗುವ ಸಂಭವವಿದ್ದು ಕೂಡಲೇ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಉನ್ನತ ಮಟ್ಟದ ತನಿಖೆಯನ್ನು ನಡೆಸಿ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!