ಅವ್ವ ಪ್ರಶಸ್ತಿಗೆ ರಂಗಕರ್ಮಿ ಬಿ ಜಯಶ್ರೀ ಆಯ್ಕೆ.B Jayashri selected for “AVVA” award.

ಅವ್ವ ಪ್ರಶಸ್ತಿಗೆ ರಂಗಕರ್ಮಿ ಬಿ ಜಯಶ್ರೀ ಆಯ್ಕೆ

 

ಹುಬ್ಬಳ್ಳಿಯ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಟ್ರಸ್ಟ್ ವತಿಯಿಂದ ನೀಡುವ ಪ್ರಶಸ್ತಿಗೆ.ರಂಗಕರ್ಮಿ ಬಿ ಜಯಶ್ರೀ ಆಯ್ಕೆಯಾಗಿದ್ದಾರೆ ಪ್ರಶಸ್ತಿ 25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

 

H R ಸುಜಾತ ಅವರ “ನೀಲಿ ಮೂಗಿನ ನತ್ತು” ಕೃತಿಗೆ ಅಕ್ಕ ಪ್ರಶಸ್ತಿ ಸನ್ನಿಧಿ ಟಿ ರೈ ಪೆರ್ಲ ರವರ “ಅಮರಾವತಿ ಕೃತಿಗೆ “ಅರಳುಮೊಗ್ಗು ಪ್ರಶಸ್ತಿ ಹಾಗೂ ಡಾಕ್ಟರ್ ಶಶಿಕಾಂತ ರವರ “ಅವ್ವ ಹಾಡಿದ ಕಾಳಿಂಗರಾಯನ ಹಾಡು” ಕೃತಿಗೆ ಜಾನಪದ ಸಿರಿ ಪ್ರಶಸ್ತಿ ಆಯ್ಕೆಯಾಗಿದೆ. ಲೇಖಕ ಚಂದ್ರಶೇಖರ ವಸ್ತ್ರದ ಸಂಪಾದಿಸಿದ ನಾಟಕಗಳಲ್ಲಿ ಕಲಾಕೃತಿಯನ್ನು ಧಾರವಾಡ ಖ್ಯಾತ ಸಂಶೋಧಕ ಸಾಹಿತಿ ಡಾ ವೀರಣ್ಣ ರಾಜೂರ ಗ್ರಂಥ ಅರ್ಪಣೆ ಮಾಡಲಿದ್ದರೆ.

 

ಜನವರಿ 10ರಂದು ಸಂಜೆ 4 ಗಂಟೆಗೆ ತಾಲೂಕಿನ.ಸಂತ ಶಿಶುವಿನಹಾಳ ಶರೀಫರ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಜರುಗಲಿದೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಹಿಸುವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಸದ ಶಿವಕುಮಾರ ಉದಾಸಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ ಪಾಲ್ಗೊಳ್ಳುವರು ಎಂದು ಟ್ರಸ್ಟ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೊಮ್ಮಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!