ವಾಹನದ ಹಿಂಭಾಗಕ್ಕೆ ರೇಡಿಯಮ್ ಸ್ಟಿಕರ್ ಅಂಟಿಸಿ :- ಅಪಘಾತಗಳನ್ನು ತಪ್ಪಿಸಿ
ಗುಬ್ಬಿ :-ರಸ್ತೆಗಳಲ್ಲಿ ಅಪಘಾತಗಳನ್ನು ತಪ್ಪಿಸಲು ವಾಹನದ ಹಿಂಭಾಗಕ್ಕೆ ರೇಡಿಯಮ್ ಸ್ಟಿಕರ್ ಅಳವಡಿಸುವಂತೆ ವಾಹನ ಮಾಲೀಕರಿಗೆ ಅರಿವು ಮೂಡಿಸಲಾಯಿತು.
ತುಮಕೂರು ನಿಂದ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಈ ರಸ್ತೆಯಲ್ಲಿ ಹೆದ್ದಾರಿ ಗಸ್ತು ವಾಹನ ತಿರುಗುತ್ತಿದ್ದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಪ್ಪಿಸಲು. ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿ ಶಶಿಧರ್ ರವರು ರಸ್ತೆಯಲ್ಲಿ ರೇಡಿಯಮ್ ಸ್ಟಿಕರ್ ಅಳವಡಿಸದೆ ಸಂಚರಿಸುವಂತಹ ಟ್ರ್ಯಾಕ್ಟರ್ ಟೈಲರ್ ಗಳನ್ನು ತಡೆದು ವಾಹನ ಚಾಲಕರು ಮತ್ತು ಮಾಲೀಕರಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸಿ ವಾಹನಗಳ ಅಪಘಾತಗಳನ್ನು ತಪ್ಪಿಸುವಂತೆ ಅರಿವು ಮೂಡಿಸಿ ಸ್ಥಳದಲ್ಲೇ ಸ್ಟಿಕರ್ ಅಂಟಿಸಲಾಯಿತು.
ಗುಬ್ಬಿ ಪಟ್ಟಣದ ಪಿಎಸ್ಐ ಸುನಿಲ್ ಕುಮಾರ್ ರವರು ರಸ್ತೆಯಲ್ಲಿ ಸಂಚರಿಸುವ ಟ್ರ್ಯಾಕ್ಟರ್ ಟೈಲರ್ ಗಳನ್ನು ಗಮನಿಸಿ ವಾಹನ ಚಾಲಕರು ಮತ್ತು ಮಾಲೀಕರಿಗೆ ಅರಿವು ಮೂಡಿಸಿ ಪ್ರತಿ ಟ್ಯಾಕ್ಟರ್ ಟೈಲರ್ ಗಳಿಗೆ ರೇಡಿಯಂ ಸ್ಟಿಕ್ಕರ್ ಅನ್ನು ಅಳವಡಿಸುವಂತೆ ತಿಳಿಸಿದರು. ಸ್ಥಳದಲ್ಲಿ ಕೆಲವು ವಾಹನಗಳಿಗೆ ರೇಡಿಯಂ ಸ್ಟಿಕ್ಕರ್ ಅಳವಡಿಸಲಾಗಿದೆ.
ಪ್ರತಿ ವಾಹನಗಳಿಗೆ ಹಿಂಬದಿಯಲ್ಲಿ ರೇಡಿಯಂ ಸ್ಟಿಕ್ಕರ್ ಅಳವಡಿಸುವುದರಿಂದ ವಾಹನದ ಹಿಂಬದಿಯಲ್ಲಿ ವೇಗವಾಗಿ ಬರುವ ವಾಹನಕ್ಕೆ ಮುಂಭಾಗದಲ್ಲಿ ವಾಹನ ಸಂಚರಿಸುತ್ತಿದೆ ಎಂಬುದು ರೇಡಿಯಮ್ ಸ್ಟಿಕ್ಕರ್ ನಿಂದ ತಿಳಿದುಕೊಳ್ಳಬಹುದು ಹಾಗಾಗಿ ಪ್ರತಿ ವಾಹನದ ಹಿಂಬದಿಯಲ್ಲಿ ರೇಡಿಯಂ ಸ್ಟಿಕ್ಕರ್ ಅನ್ನು ಅಳವಡಿಸುವುದರಿಂದ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು.
ವರದಿ:-ಸಂತೋಷ್ ಗುಬ್ಬಿ